ETV Bharat / sports

ಶ್ರೀಲಂಕಾ ಸರಣಿಗೂ ಮುನ್ನ ಫಾರ್ಮ್​ಗೆ ಮರಳಲು ಪೂಜಾರ-ರಹಾನೆ ಗೋಲ್ಡನ್​ ಚಾನ್ಸ್​

author img

By

Published : Feb 3, 2022, 8:44 PM IST

Pujara-Rahane set to get Ranji Trophy lifeline
ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ

ಮಾರ್ಚ್​ ಮೊದಲ ವಾರದಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ನಡೆಯುವ ರಣಜಿ ಪಂದ್ಯಗಳಲ್ಲಿ ಈ ಇಬ್ಬರು ಅನುಭವಿ ಬ್ಯಾಟರ್​ಗಳ ದೊಡ್ಡ ಶತಕ ಸಿಡಿಸಿದರೆ ತಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಕುಂಟುತ್ತಾ ಸಾಗುತ್ತಿರುವ ಅವರ ವೃತ್ತಿ ಜೀವನವನ್ನು ಸರಿದಾರಿಗೆ ತಂದುಕೊಳ್ಳುವ ಅವಕಾಶ ಇದೆ.

ನವದೆಹಲಿ: ಫೆಬ್ರವರಿ 10ರಿಂದ ರಣಜಿ ಟ್ರೋಪಿ ಆರಂಭವಾಗಲಿದ್ದು, ಲಯ ಕಳೆದುಕೊಂಡು ಟೀಮ್​ ಇಂಡಿಯಾದಿಂದ ಹೊರಬೀಳುವ ಭೀತಿ ಎದುರಿಸುತ್ತಿರುವ ಹಿರಿಯ ಬ್ಯಾಟರ್​ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆಗೆ ಫಾರ್ಮ್​ಗೆ ಮರಳುವುದಕ್ಕೆ ಅದ್ಭುತ ಅವಕಾಶ ಸಿಕ್ಕಂತಾಗಿದೆ.

ಮಾರ್ಚ್​ ಮೊದಲ ವಾರದಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ನಡೆಯುವ ರಣಜಿ ಪಂದ್ಯಗಳಲ್ಲಿ ಈ ಇಬ್ಬರು ಅನುಭವಿ ಬ್ಯಾಟರ್​ಗಳ ದೊಡ್ಡ ಶತಕ ಸಿಡಿಸಿದರೆ ತಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಕುಂಟುತ್ತಾ ಸಾಗುತ್ತಿರುವ ಅವರ ವೃತ್ತಿ ಜೀವನವನ್ನು ಸರಿದಾರಿಗೆ ತಂದುಕೊಳ್ಳುವ ಅವಕಾಶ ಇದೆ.

ರಣಜಿ ಪ್ಲೇಟ್​ ಗುಂಪಿನ ಪಂದ್ಯಗಳು ಫೆಬ್ರವರಿ 10ರಿಂದ ಆರಂಭವಾದರೆ, ಎಲೈಟ್​ ಗುಂಪುಗಳ ಪಂದ್ಯ ಫೆಬ್ರವರಿ 16ರಿಂದ ಆರಂಭವಾಗಲಿದೆ. ಶ್ರೀಲಂಕಾ ಸರಣಿಗೂ ಮುನ್ನ ಪೂಜಾರ ಮತ್ತು ರಹಾನೆಗೆ 2 ಪಂದ್ಯಗಳಲ್ಲಿ ಆಡುವ ಅವಕಾಶ ಸಿಗುತ್ತದೆ. ಈಗಾಗಲೆ ಈ ಹಿರಿಯ ಬ್ಯಾಟರ್​ಗಳು ತಮ್ಮ ತಮ್ಮ ರಣಜಿ ತಂಡಗಳ ಜೊತೆಗೆ ತರಬೇತಿಯನ್ನೂ ಕೂಡ ಆರಂಭಿಸಿದ್ದಾರೆ. ವಿಶೇಷವೆಂದರೆ ಮುಂಬೈ ಮತ್ತು ಸೌರಾಷ್ಟ್ರ ತಂಡಗಳು ಒಮದೇ ಗುಂಪಿನಲ್ಲಿದ್ದು ಅಹ್ಮದಾಬಾದ್​ನಲ್ಲಿ ನಡೆಯಲಿದ್ದು, ಈ ಇಬ್ಬರು ಬ್ಯಾಟರ್​ಗಳು ಎದುರಾಳಿಗಳಾಗಿ ಕಣಕ್ಕಿಳಿಯದಿದ್ದಾರೆ.

"ಅಜಿಂಕ್ಯ ಖಂಡಿತಾ ರಣಜಿ ಟ್ರೋಫಿಯನ್ನಾಡಲು ಎದುರು ನೋಡುತ್ತಿದ್ದಾರೆ. ನಾವು ಒಂದೆರಡು ಬಾರಿ ಭೇಟಿ ಮಾಡಿದ್ದೇವೆ, ಅವರು ಮುಂಬೈ ತಂಡದ ಜೊತೆಗೆ ತರಬೇತಿ ಆರಂಭಿಸಿದ್ದಾರೆ. ಈಗಾಗಲೆ ಒಂದೆರಡು ಅಭ್ಯಾಸ ಸೆಷನ್​ನಲ್ಲೂ ಅವರು ಭಾಗಿಯಾಗಿದ್ದು, ಅತ್ಯುತ್ತಮ ಟಚ್​ನಲ್ಲಿದ್ದಾರೆ" ಎಂದು ಮುಂಬೈ ತಂಡದ ಕೋಚ್​ ಅಮೋಲ್ ಮಜುಂದಾರ್​ ಪಿಟಿಐಗೆ ಹೇಳಿದ್ದಾರೆ.

" ನಾವು ಭವಿಷ್ಯದ ಬಗ್ಗೆ ಹೆಚ್ಚು ನೋಡಬೇಕಾಗಿಲ್ಲ, ಆದರೆ ನಮ್ಮ ಮುಂದೆ ಇರುವುದು ರಣಜಿ ಟ್ರೋಫಿ. ಇದು ಅವರಿಬ್ಬರಿಗೆ ಕೇವಲ ಆತ್ಮವಿಶ್ವಾಸದ ಪ್ರಶ್ನೆ ಎಂದು ನಾನು ಭಾವಿಸುತ್ತೇನೆ. ಈ ಪಂದ್ಯಗಳಲ್ಲಿ ಒಂದು ದೊಡ್ಡ ಶತಕಗಳಿಸಿದರೆ ಅವರಿಬ್ಬರೂ ಆತ್ಮವಿಶ್ವಾಸವನ್ನು ಮರಳಿ ಪಡೆಯಲಿದ್ದಾರೆ" ಎಂದು ಮಜುಂದಾರ್​​ ಹೇಳಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಕೂಡ ರಹಾನೆ ಮತ್ತು ಪೂಜಾರ ಪ್ರೀಮಿಯರ್ ಡೊಮೆಸ್ಟಿಕ್​ ಲೀಗ್​​ನಲ್ಲಿ ಉತ್ತಮ ರನ್​ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರಣಜಿ ಟ್ರೋಫಿಗೆ ಮುಹೂರ್ತ ಫಿಕ್ಸ್​: ಫೆಬ್ರವರಿ 10ರಿಂದ ಮೊದಲ ಹಂತ ಆರಂಭ, ಐಪಿಎಲ್ ನಂತರ ನೌಕೌಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.