ETV Bharat / sports

ರಣಜಿ ಟ್ರೋಫಿಗೆ ಮುಹೂರ್ತ ಫಿಕ್ಸ್​: ಫೆಬ್ರವರಿ 10ರಿಂದ ಮೊದಲ ಹಂತ ಆರಂಭ, ಐಪಿಎಲ್ ನಂತರ ನೌಕೌಟ್​

author img

By

Published : Feb 3, 2022, 8:06 PM IST

ಲೀಗ್​ ಹಂತದಲ್ಲಿ ಒಂದು ತಂಡ ಮೂರು ಪಂದ್ಯಗಳನ್ನಾಡಲಿದೆ. ಎಲೈಟ್​ ಗುಂಪಿನಲ್ಲಿ 4, ಪ್ಲೇಟ್​ ಗುಂಪಿನಲ್ಲಿ 7 ತಂಡಗಳಿರಲಿದ್ದು, ಯಾವುದೇ ತಂಡಕ್ಕೂ ತವರಿನಲ್ಲಿ ಆಡುವುದಕ್ಕೆ ಅವಕಾಶವಿಲ್ಲ. ತವರಿನಲ್ಲಿ ಆಡಿಸಿದರೆ ಅಭಿಮಾನಿಗಳು ಸೇರುವ ಸಾಧ್ಯತೆಯಿರುವುದರಿಂದ ತಟಸ್ಥ ಸ್ಥಳಗಳಲ್ಲಿ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ.

Ranji Trophy
Ranji Trophy

ನವದೆಹಲಿ: ರಣಜಿ ಟ್ರೋಫಿಯ ಮೊದಲ ಹಂತವನ್ನು ಫೆಬ್ರವರಿ 10ರಿಂದ ಮಾರ್ಚ್​ 15ರವರೆಗೆ ಮತ್ತು ಐಪಿಎಲ್ ಮುಗಿದ ನಂತರ ದ್ವಿತೀಯ ಹಂತವನ್ನು ಮೇ 30ರಿಂದ ಜೂನ್​ 26ರವರೆಗೆ ನಡೆಸುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಗುರುವಾರ ತಿಳಿಸಿದ್ದಾರೆ.

ಅಹ್ಮದಾಬಾದ್​, ಕೋಲ್ಕತ್ತಾ, ರಾಜ್ ಕೋಟ್​, ದೆಹಲಿ, ಗುವಾಹಟಿ, ಕಟಕ್​ ತ್ರಿವೆಂಡ್ರಮ್, ಚೆನ್ನೈ ಮತ್ತು ಹರಿಯಾಣದಲ್ಲಿ ಮೊದಲ ಹಂತದ ಪಂದ್ಯವಾಳಿ ನಡೆಯಲಿದೆ.

ನಾವು ರಣಜಿ ಟ್ರೋಫಿ ಆಯೋಜನೆಗಾಗಿ ದೇಶದಾದ್ಯಂತ 9 ಸ್ಥಳಗಳನ್ನು ಆಯ್ಕೆ ಮಾಡಿದ್ದೇವೆ. ಯಾವುದೇ ಅಡ್ಡ ಪರಿಣಾಮ ಮತ್ತು ಅಪಾಯವನ್ನು ತಗ್ಗಿಸಲು ಹಾಗೂ ಬಯೋಬಬಲ್ ವ್ಯವಸ್ಥೆಗೆ ಹೆಚ್ಚು ಹೊರೆಯಾಗುದಿರಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಬಯೋಬಬಲ್​ ಉಲ್ಲಂಘಿಸುವ ಸಾಧ್ಯತೆ ಇರುವುದರಿಂದ ನಾವು ನಮ್ಮ ಹಿಂದಿನ ಅನುಭವವನ್ನು ಪರಿಗಣಿಸಿ, ಕೆಲವು ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಜಯ್​ ಶಾ ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿ; ಬೆಂಗಳೂರಿನಲ್ಲಿ ಅಹರ್ನಿಶಿ ಟೆಸ್ಟ್​ ಆಯೋಜನೆ ಖಚಿತಪಡಿಸಿದ ಗಂಗೂಲಿ

ಲೀಗ್​ ಹಂತದಲ್ಲಿ ಒಂದು ತಂಡ ಮೂರು ಪಂದ್ಯಗಳನ್ನಾಡಲಿದೆ. ಎಲೈಟ್​ ಗುಂಪಿನಲ್ಲಿ 4, ಪ್ಲೇಟ್​ ಗುಂಪಿನಲ್ಲಿ 7 ತಂಡಗಳಿರಲಿದ್ದು, ಯಾವುದೇ ತಂಡಕ್ಕೂ ತವರಿನಲ್ಲಿ ಆಡುವುದಕ್ಕೆ ಅವಕಾಶವಿಲ್ಲ. ತವರಿನಲ್ಲಿ ಆಡಿಸಿದರೆ ಅಭಿಮಾನಿಗಳು ಸೇರುವ ಸಾಧ್ಯತೆಯಿರುವುದರಿಂದ ತಟಸ್ಥ ಸ್ಥಳಗಳಲ್ಲಿ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಕಳೆದ ವರ್ಷ ಕೋವಿಡ್​ 10 ಕಾರಣದಿಂದ 87 ವರ್ಷಗಳ ಸುದೀರ್ಘ ಇತಿಹಾಸವಿರುವ ರಣಜಿ ಟ್ರೋಪಿಯನ್ನು ಮೊದಲ ಬಾರಿಗೆ ರದ್ದುಗೊಳಿಸಲಾಗಿತ್ತು. ಆದರೆ ವಿಜಯ್ ಹಜಾರೆ ಮತ್ತು ಸೈಯದ್​ ಮುಷ್ತಾಕ್ ಅಲಿ ಟ್ರೋಪಿಯನ್ನು ಆಯೋಜಿಸಿದ್ದ ಬೋರ್ಡ್​ ಮತ್ತೊಮ್ಮೆ ರಣಜಿ ಟ್ರೋಫಿಯನ್ನು ಮುಂದೂಡಿತ್ತು. ಬಿಸಿಸಿಐ ನಿರ್ಧಾರವನ್ನು ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಟೀಕಿಸಿದ ನಂತರ ಎರಡು ಹಂತದಲ್ಲಿ ನಡೆಸುವ ನಿರ್ಧಾರವನ್ನು ತೆಗೆದುಕೊಂಡಿದೆ.

  • ಎ ಗುಂಪು: ಗುಜರಾತ್, ಮಧ್ಯಪ್ರದೇಶ, ಕೇರಳ ಮತ್ತು ಮೇಘಾಲಯ
  • ಬಿ ಗುಂಪು: ಬಂಗಾಳ, ಬರೋಡಾ, ಹೈದರಾಬಾದ್, ಚಂಡೀಗಢ
  • ಸಿ ಗುಂಪು: ಕರ್ನಾಟಕ, ರೈಲ್ವೇಸ್, ಜಮ್ಮು ಮತ್ತು ಕಾಶ್ಮೀರ, ಪಾಂಡಿಚೇರಿ
  • ಡಿ ಗುಂಪು: ಸೌರಾಷ್ಟ್ರ, ಮುಂಬೈ, ಒಡಿಶಾ, ಗೋವಾ
  • ಸಿ ಗುಂಪು : ಆಂಧ್ರ ಪ್ರದೇಶ, ರಾಜಸ್ಥಾನ, ಸೇವೆಗಳು, ಮತ್ತು ಉತ್ತರಾಖಂಡ
  • ಎಫ್​ ಗುಂಪು: ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ತ್ರಿಪುರಾ
  • ಜಿ ಗುಂಪು: ವಿದರ್ಭ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಅಸ್ಸಾಂ
  • ಹೆಚ್​ ಗುಂಪು: ದೆಹಲಿ, ತಮಿಳುನಾಡು , ಜಾರ್ಖಂಡ್, ಮತ್ತು ಛತ್ತೀಸ್‌ಗಢ
  • ಪ್ಲೇಟ್ ಗ್ರೂಪ್: ಬಿಹಾರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.