ETV Bharat / sports

ಭಾರತ 2019ರ ವಿಶ್ವಕಪ್ ಸೋಲಿನ ಕಾರಣ ತಿಳಿಸಿದ ಯುವರಾಜ್ ಸಿಂಗ್

author img

By

Published : May 4, 2022, 8:07 PM IST

2019 Cricket World Cup, yuvraj sing
ಯುವರಾಜ್ ಸಿಂಗ್

ಭಾರತ ತಂಡ 2019ರ ವಿಶ್ವಕಪ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೆಮಿಫೈನಲ್​ ಪಂದ್ಯದಲ್ಲಿ18 ರನ್​ಗಳಿಂದ ಸೋಲು ಕಂಡಿತು. ಭಾರತ ತಂಡ ಟೂರ್ನಮೆಂಟ್​ನಲ್ಲಿ ನಂಬರ್​ 1 ಸ್ಥಾನದಲ್ಲಿತ್ತು. ಆದರೆ, ಸೆಮಿಫೈನಲ್​ನಲ್ಲಿ ಧೋನಿ ಮತ್ತು ಜಡೇಜಾ ಅವರ ಅರ್ಧಶತಕದ ಹೊರತಾಗಿಯೂ 240 ರನ್​ಗಳ ಗುರಿಯನ್ನು ಬೆನ್ನಟ್ಟಲಾಗದೆ ಸೋಲು ಕಂಡಿತ್ತು.

ನವದೆಹಲಿ: ಭಾರತ ತಂಡ 2019ರ ವಿಶ್ವಕಪ್​ನಲ್ಲಿ ಸೋಲುವುದಕ್ಕೆ ಪ್ರಮುಖ ಕಾರಣ ಯೋಜನೆಗಳ ಕೊರತೆ ಎಂದು ಮಾಜಿ ಆಲ್​ರೌಂಡರ್​ ಯುವರಾಜ್​ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡ 2019ರ ವಿಶ್ವಕಪ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೆಮಿಫೈನಲ್​ ಪಂದ್ಯದಲ್ಲಿ18 ರನ್​ಗಳಿಂದ ಸೋಲು ಕಂಡಿತು. ಭಾರತ ತಂಡ ಟೂರ್ನಮೆಂಟ್​ನಲ್ಲಿ ನಂಬರ್​ 1 ಸ್ಥಾನದಲ್ಲಿತ್ತು. ಆದರೆ, ಸೆಮಿಫೈನಲ್​ನಲ್ಲಿ ಧೋನಿ ಮತ್ತು ಜಡೇಜಾ ಅವರ ಅರ್ಧಶತಕದ ಹೊರತಾಗಿಯೂ 240 ರನ್​ಗಳ ಗುರಿಯನ್ನು ಬೆನ್ನಟ್ಟಲಾಗದೆ ಸೋಲು ಕಂಡಿತ್ತು.

2019ರ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಭಾರತ ತಂಡ ಹೊರಬೀಳಲು ಸರಿಯಾದ ಯೋಜನೆಗಳ ಕೊರತೆ ಕಾರಣ ಎಂದು ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್ ದೂಷಿಸಿದ್ದಾರೆ. ತಂಡದಲ್ಲಿನ ಅನಾನುಭವಿಗಳ ಮಧ್ಯಮ ಕ್ರಮಾಂಕ ವಿರಾಟ್​ ಕೊಹ್ಲಿ ಬಳಗದ ಟ್ರೋಫಿ ಎತ್ತಿಹಿಡಿಯುವ ಕನಸು ನುಚ್ಚುನೂರಾಗಲೂ ಕಾರಣ ಎಂದು 2007 ಮತ್ತು 2011ರ ವಿಶ್ವಕಪ್​ ಗೆಲ್ಲಲು ಪ್ರಮುಖ ಕಾರಣರಾಗಿದ್ದ ಯುವಿ ಹೇಳಿದ್ದಾರೆ.

ನಾವು 2011ರ ವಿಶ್ವಕಪ್​ ಗೆದ್ದಾಗ ಬ್ಯಾಟಿಂಗ್ ಕ್ರಮಾಂಕಕ್ಕೆ ಸೂಕ್ತ ಆಟಗಾರರನ್ನು ಸೆಟ್​ ಮಾಡಿಕೊಂಡಿದ್ದೆವು. 2019ರ ವಿಶ್ವಕಪ್​ನಲ್ಲಿ ಅವರು ಸರಿಯಾದ ಯೋಜನೆ ರೂಪಿಸಿಕೊಳ್ಳಲಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಯುವರಾಜ್ ಸಿಂಗ್​ ಸ್ಪೋರ್ಟ್ಸ್​ 18 ವಾಹಿನಿಯ ಹೋಮ್ ಆಫ್ ಹೀರೋಸ್ ಕಾರ್ಯಕ್ರಮದಲ್ಲಿ ಸಂಜಯ್ ಮಂಜ್ರೇಕರ್​ಗೆ ತಿಳಿಸಿದ್ದಾರೆ.

ಅವರು (ಮ್ಯಾನೇಜ್​ಮೆಂಟ್) 4ನೇ ಕ್ರಮಾಂಕಕ್ಕೆ 5-7 ಪಂದ್ಯಗಳನ್ನಾಡಿದ್ದ ವಿಜಯ್​​ ಶಂಕರ್​ ಆಯ್ಕೆ ಮಾಡಿದ್ದರು, ನಂತರ ಆತನ ಜಾಗಕ್ಕೆ ರಿಷಭ್ ಪಂತ್​ಗೆ ಅವಕಾಶ ನೀಡಿದರು. ಆತ ಕೇವಲ 4 ಪಂದ್ಯಗಳನ್ನಾಡಿದ್ದ. ನಾವು 2003ರ ವಿಶ್ವಕಪ್​ ಆಡುವಾಗ ಮೊಹಮ್ಮದ್ ಕೈಫ್​, ದಿನೇಶ್ ಮೊಂಗಿಯಾ ಮತ್ತು ನಾನು ಅಷ್ಟರಲ್ಲಾಗಲೇ 50ಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿದ್ದೆವು ಎಂದು ಮಧ್ಯಮ ಕ್ರಮಾಂಕದ ವೈಫಲ್ಯಕ್ಕೆ ಕಾರಣ ತಿಳಿಸಿದ್ದಾರೆ.

ಟೀಮ್​ ಇಂಡಿಯಾ 2021ರ ಟಿ20 ವಿಶ್ವಕಪ್​ನಲ್ಲೂ ಅದೇ ಸಮಸ್ಯೆಯನ್ನು ಅನುಭವಿಸಿತು ಎಂದು ಯುವಿ ತಿಳಿಸಿದ್ದಾರೆ. ಟೀಮ್​ ಇಂಡಿಯಾ ಯುಎಇಯಲ್ಲಿ ನಡೆದ ಟೂರ್ನಿಯಲ್ಲಿ ಕಳೆದ 8 ವರ್ಷಗಳಲ್ಲಿ ಮೊದಲ ಬಾರಿಗೆ ನಾಕೌಟ್ ಪ್ರವೇಶಿಸಲು ವಿಫಲವಾಗಿ ಟೂರ್ನಿಯಿಂದ ಹೊರಬಿದ್ದಿತ್ತು.

ಟಿ-20 ಕ್ರಿಕೆಟ್​​ನಲ್ಲಿ ನಮ್ಮ ಮಧ್ಯಮ ಕ್ರಮಾಂಕಕ್ಕೆ ಫ್ರಾಂಚೈಸಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರನ್ನು ಆಯ್ಕೆ ಮಾಡುತ್ತಾರೆ. ಆದ್ದರಿಂದಲೇ ಕಳೆದ ವರ್ಷ ಟಿ-20 ವಿಶ್ವಕಪ್​​ನಲ್ಲಿ ನಮ್ಮ ತಂಡದ ವೈಫಲ್ಯಕ್ಕೆ ಕಾರಣ ಎಂದು ಯುವಿ ತಿಳಿಸಿದ್ದಾರೆ.

ಇದನ್ನೂ ಓದಿ:ಕಳಪೆ ಫಾರ್ಮ್​ನಿಂದ ಹೊರಬರಲು ಕೊಹ್ಲಿಗೆ ಸಲಹೆ ನೀಡಿದ ಎಬಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.