ETV Bharat / sports

Suryakumar Yadav: ಟಿ20ಯಲ್ಲಿ ಶತಕ ಸಿಕ್ಸ್​ ಪೂರೈಸಿದ ಸ್ಕೈ.. ಶಿಖರ್​ ದಾಖಲೆ ಮುರಿದ ಸೂರ್ಯ ಕುಮಾರ್​​ ​

author img

By

Published : Aug 9, 2023, 1:15 PM IST

Suryakumar Yadav
ಸೂರ್ಯ ಕುಮಾರ್​ ಯಾದವ್

ವೆಸ್ಟ್​ ಇಂಡೀಸ್​ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ 3ನೇ ಸಿಕ್ಸ್​ ಗಳಿಸಿದ ಸೂರ್ಯ ಶತಕ ಸಿಕ್ಸ್​ನ ದಾಖಲೆ ಬರೆದರು.

ಜಾರ್ಜ್‌ಟೌನ್ (ಗಯಾನಾ): ಟಿ20 ಟಾಪ್ ರ್‍ಯಾಂಕಿಂಗ್​ ಬ್ಯಾಟರ್​ ಸೂರ್ಯ ಕುಮಾರ್​ ಯಾದವ್​ ವೆಸ್ಟ್​ ಇಂಡೀಸ್​ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ 100 ಸಿಕ್ಸ್​ ಪೂರೈಸಿದ ದಾಖಲೆಯನ್ನು ಮಾಡಿದ್ದಾರೆ. ಕಳೆದ ಕೆಲ ಪಂದ್ಯಗಳಲ್ಲಿ ಮಂಕಾಗಿದ್ದ ಅವರ ಬ್ಯಾಟ್​ ನಿನ್ನೆಯ ಮ್ಯಾಚ್​ನಲ್ಲಿ ಘರ್ಜಿಸಿತ್ತು. ವಿಂಡೀಸ್​ ನೀಡಿದ್ದ 160 ರನ್​ ಗುರಿಯನ್ನು ಚೇಸ್​ ಮಾಡುವಾಗ ಸ್ಕೈ 44 ಎಸೆತದಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್​ನಿಂದ 83 ರನ್​ ಗಳಿಸಿದರು.

ಕಡಿಮೆ ಇನ್ನಿಂಗ್ಸ್​ನಲ್ಲಿ 100 ಸಿಕ್ಸ್​ ದಾಖಲಿಸಿದ ಭಾರತೀಯ ಆಟಗಾರ ಎಂಬ ಮೈಲಿಗಲ್ಲನ್ನು ಸೂರ್ಯ ಮಾಡಿದ್ದಾರೆ. ಕೇವಲ 49 ಇನ್ನಿಂಗ್ಸ್​ನಲ್ಲಿ ಅವರು 100 ಸಿಕ್ಸ್​ಗಳನ್ನು ದಾಖಲಿಸಿದ್ದಾರೆ. ಎವಿನ್​ ಲೂಯಿಸ್​ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಡಿಮೆ ಪಂದ್ಯದಲ್ಲಿ ಹೆಚ್ಚು ಸಿಕ್ಸ್​ಗಳನ್ನು ದಾಖಲಿಸಿದ ಆಟಗಾರ ಆಗಿದ್ದಾರೆ.

ಇದಲ್ಲದೇ ಸ್ಕೋರ್​ ಗಳಿಕೆಯಲ್ಲೂ ಸೂರ್ಯ ರೆಕಾರ್ಡ್​ ಮಾಡಿದ್ದಾರೆ. ಶಿಖರ್ ಧವನ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್​​ ಆಗಿದ್ದಾರೆ. ಪ್ರಸ್ತುತ ಸೂರ್ಯ 51 ಪಂದ್ಯದಲ್ಲಿ 49 ಇನ್ನಿಂಗ್ಸ್​​ಗಳನ್ನು ಆಡಿದ್ದು, ಅವರು ಮೂರು ಶತಕಗಳು ಮತ್ತು 14 ಅರ್ಧಶತಕಗಳೊಂದಿಗೆ 45.64 ಸರಾಸರಿಯಲ್ಲಿ 174ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 1,780 ರನ್ ಗಳಿಸಿದ್ದಾರೆ. 117 ಅವರ ಉತ್ತಮ ಸ್ಕೋರ್ ಆಗಿದೆ. ಧವನ್​ 68 ಪಂದ್ಯಗಳಿಂದ 27.92ರ ಸರಾಸರಿಯಲ್ಲಿ 126ರ ಸ್ಟ್ರೈಕ್ ರೇಟ್‌ನಲ್ಲಿ 1759 ರನ್​ ಗಳಿಸಿದ್ದಾರೆ. ಶಿಖರ್​ ಟಿ20ಯಲ್ಲಿ 11 ಅರ್ಧಶತಕ ಕಲೆ ಹಾಕಿದ್ದಾರೆ.

ಮೊದಲ ಮೂರು ಸ್ಥಾನದಲ್ಲಿ ವಿರಾಟ್​, ರೋಹಿತ್​ ಮತ್ತು ರಾಹುಲ್​ ಇದ್ದಾರೆ. ವಿರಾಟ್ ಕೊಹ್ಲಿ 115 ಪಂದ್ಯಗಳಿಂದ 52.73 ಸರಾಸರಿಯಲ್ಲಿ ಒಂದು ಶತಕ ಮತ್ತು 37 ಅರ್ಧಶತಕ ಸಹಿತ 4,008 ರನ್​ ಗಳಸಿದ್ದಾರೆ. ರೋಹಿತ್ ಶರ್ಮಾ 148 ಪಂದ್ಯಗಳಲ್ಲಿ 4ಶತಕ ಮತ್ತು 29 ಅರ್ಧಶತಕವನ್ನು ಗಳಿಸಿದ್ದು, 31.32 ಸರಾಸರಿ ಮತ್ತು 139.24 ಸ್ಟ್ರೈಕ್ ರೇಟ್​ನಿಂದ ಒಟ್ಟು 3,853 ರನ್ ಕಲೆಹಾಕಿದ್ದಾರೆ. ಕೆಎಲ್ ರಾಹುಲ್ 72 ಪಂದ್ಯಗಳಲ್ಲಿ 37.75 ಸರಾಸರಿಯಲ್ಲಿ 2,265 ರನ್ ಗಳಿಸಿದ್ದು, ಅದರಲ್ಲಿ ಎರಡು ಶತಕ ಮತ್ತು 22 ಅರ್ಧಶತಕ ಒಳಗೊಂಡಿವೆ.

ಪಂದ್ಯ ಶ್ರೇಷ್ಠ ಪ್ರಶಸ್ತಿಯಲ್ಲೂ ಸ್ಕೈ ಸಾಧನೆ: ಈ ಪಂದ್ಯದ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ವಿನ್ನಿಂಗ್​ ಆಟ​ ಆಡಿದ ಸೂರ್ಯ ಕುಮಾರ್​ ಯಾದವ್​ಗೆ ಕೊಡಲಾಯಿತು. ಇದರಿಂದ ಸೂರ್ಯ 51 ಪಂದ್ಯದಲ್ಲಿ 12 ನೇ 'ಪಂದ್ಯದ ಆಟಗಾರ' ಪ್ರಶಸ್ತಿ ಪಡೆದರು. ಈ ಮೂಲಕ ಪಂದ್ಯ ಶ್ರೇಷ್ಠವನ್ನು ಅತಿ ಹೆಚ್ಚು ಬಾರಿ ಪಡೆದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಜೊತೆಗೆ ಜಂಟಿಯಾಗಿ ಎರಡನೇ ಸ್ಥಾನವನ್ನು ಅಲಂಕರಿಸಿದರು. 15 ಬಾರಿ ಪ್ರಶಸ್ತಿ ಗೆದ್ದಿರುವ ಕಿಂಗ್​​ ಕೊಹ್ಲಿ ಅಗ್ರ ಮಾನ್ಯರಾಗಿದ್ದಾರೆ.

ಪಂದ್ಯ ಹೀಗಿತ್ತು..: ಮೂರನೇ ಪಂದ್ಯವನ್ನು ಭಾರತ ಗೆಲ್ಲುವ ಮೂಲಕ ಸರಣಿಯನ್ನು ಜೀವಂತವಾಗಿ ಉಳಿಸಿಕೊಂಡಿದೆ. ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಹಿನ್ನಡೆಯನ್ನು ಹೊಂದಿದೆ. ಬಾಕಿ ಇರುವ ಇನ್ನೆರಡು ಪಂದ್ಯಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಬಂದ ವೆಸ್ಟ್​ ಇಂಡೀಸ್​ 20 ಓವರ್‌ಗಳಲ್ಲಿ 159/5 ಗಳಿಸಿತು. ಕೈಲ್ ಮೇಯರ್ಸ್ (25), ಬ್ರಾಂಡನ್ ಕಿಂಗ್ (42) ಮತ್ತು ನಾಯಕ ರೋವ್‌ಮನ್ ಪೊವೆಲ್ 19 ಎಸೆತಗಳಲ್ಲಿ ಅಜೇಯ 40 ರನ್​ ಗಳಿಸಿ ಭಾರತಕ್ಕೆ ಸಾಧಾರಣ ಗುರಿಯನ್ನು ನೀಡಿದರು. ಭಾರತದ ಪರ ಕುಲದೀಪ್ ಯಾದವ್ ಮೂರು ವಿಕೆಟ್​ ಪಡೆದರು.

ಆರಂಭಿಕರಾದ ಯಶಸ್ವಿ ಜೈಸ್ವಾಲ್ (1) ಮತ್ತು ಶುಭಮನ್ ಗಿಲ್ (6)ಕ್ಕೆ ಔಟಾದ ನಂತರ 160 ರನ್ ಬೆನ್ನಟ್ಟುವಲ್ಲಿ ತಂಡಕ್ಕೆ ಆಸರೆಯಾಗಿದ್ದು ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ. 83 ರನ್​ ಗಳಿಸಿ ಸೂರ್ಯ ಕುಮಾರ್​ ಯಾದವ್​ ವಿಕೆಟ್​ ಕೊಟ್ಟರು. ನಂತರ ಬಂದ ನಾಯಕ ಹಾರ್ದಿಕ್​ ಪಾಂಡ್ಯ ವೆಸ್ಟ್​ ಇಂಡೀಸ್​ ಬೌಲರ್​ಗಳ ವಿರುದ್ಧ ಅಬ್ಬರದ ಬ್ಯಾಟಿಂಗ್​ ಮಾಡಿದರು. ಭಾರತ 17.5 ಓವರ್​​ಗೆ 7 ವಿಕೆಟ್​ ಉಳಿಸಿಕೊಂಡು ಪಂದ್ಯವನ್ನು ಗೆದ್ದುಕೊಂಡಿತು. ತಿಲಕ್​ ವರ್ಮಾ ಅಜೇಯ 49 ಮತ್ತು ಹಾರ್ದಿಕ್​ ಅಜೇಯ 20 ರನ್​ ಗಳಿಸಿದರು.

ಇದನ್ನೂ ಓದಿ: 3rd T20I:ಸೂರ್ಯನ ತಾಪಕ್ಕೆ ತತ್ತರಿಸಿದ ವೆಸ್ಟ್​ ಇಂಡೀಸ್​.. ಸತತ ಸೋಲಿನ ಬಳಿಕ ಟಿ20 ಸರಣಿಯಲ್ಲಿ ಭಾರತಕ್ಕೆ ಮೊದಲ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.