ETV Bharat / sports

3rd T20I:ಸೂರ್ಯನ ತಾಪಕ್ಕೆ ತತ್ತರಿಸಿದ ವೆಸ್ಟ್​ ಇಂಡೀಸ್​.. ಸತತ ಸೋಲಿನ ಬಳಿಕ ಟಿ20 ಸರಣಿಯಲ್ಲಿ ಭಾರತಕ್ಕೆ ಮೊದಲ ಗೆಲುವು

author img

By

Published : Aug 9, 2023, 7:18 AM IST

Surya and Tilak blitzkrieg power India  India tour of West Indies 2023  Providence Stadium in Guyana  West Indies vs India 3rd T20I  West Indies won the toss and opt to bat  Nigel Duguid in Patrick Gustard  3rd T20I  ಭಾರತ ತಂಡಕ್ಕೆ ಆರಂಭಿಕ ಆಘಾತ  ಸೂರ್ಯನ ತಾಪಕ್ಕೆ ತತ್ತರಿಸಿದ ವೆಸ್ಟ್​ ಇಂಡೀಸ್​ ಸತತ ಸೋಲಿನ ಬಳಿಕ ಭಾರತಕ್ಕೆ ಮೊದಲ ಗೆಲುವು  ಟಿ20 ಸರಣಿಯಲ್ಲಿ ಭಾರತಕ್ಕೆ ಮೊದಲ ಗೆಲುವು  ಸತತ ಸೋಲುಂಡ ಭಾರತ ತಂಡ  ಭಾರತ ತಂಡ ಗೆಲುವಿನ ಲಯ  ಭಾರತ ತಂಡ ವೆಸ್ಟ್​ ಇಂಡೀಸ್​ ವಿರುದ್ಧ ಜಯ  ಟೀಂ ಇಂಡಿಯಾ ಪರ ಕುಲದೀಪ್ ಯಾದವ್  ವಿಂಡೀಸ್​ ನೀಡಿದ ಗುರಿಯನ್ನು ಬೆನ್ನತ್ತಿದ್ದ ಭಾರತ
3rd T20I:ಸೂರ್ಯನ ತಾಪಕ್ಕೆ ತತ್ತರಿಸಿದ ವೆಸ್ಟ್​ ಇಂಡೀಸ್

3rd T20I: ಟಿ20 ಸರಣಿಯಲ್ಲಿ ಸತತ ಸೋಲುಂಡ ಭಾರತ ತಂಡ ಗೆಲುವಿನ ಲಯಕ್ಕೆ ಮರಳಿದೆ. ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ 11 ಎಸೆತಗಳು ಬಾಕಿ ಉಳಿದಿರುವಾಗಲೇ ಭಾರತ ತಂಡ ವೆಸ್ಟ್​ ಇಂಡೀಸ್​ ವಿರುದ್ಧ ಜಯ ಸಾಧಿಸಿದೆ.

ಜಾರ್ಜ್‌ಟೌನ್, ಗಯಾನಾ: ನಿನ್ನೆ ಪಂದ್ಯ ರೋಚಕತೆಯಿಂದ ಕೂಡಿತ್ತು. ಅಷ್ಟೇ ಅಲ್ಲ ಈ ಸರಣಿ ಜೀವಂತವಾಗಿರಿಸಲು ಭಾರತ ತಂಡ ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಅದರಂತೆ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯ ಮೂರನೇ ಪಂದ್ಯವನ್ನು (3rd T20I) ಗೆದ್ದುಕೊಂಡಿತು.

ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ರೋವ್ಮನ್ ಪೊವೆಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಬಳಿಕ ತಂಡ ನಿಗದಿತ 20 ಓವರ್​ಗಳಿಗೆ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತ್ತು. ವಿಂಡೀಸ್ ಪರ ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ 42 ಎಸೆತಗಳಲ್ಲಿ 42 ರನ್ ಗಳಿಸಿದರು. ಇದಾದ ಬಳಿಕ ನಾಯಕ ರೋವ್ಮನ್ ಪೊವೆಲ್ 19 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರು. ಟೀಂ ಇಂಡಿಯಾ ಪರ ಕುಲದೀಪ್ ಯಾದವ್ 28 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಮತ್ತು ಮುಖೇಶ್ ಕುಮಾರ್ ತಲಾ ಒಂದೊಂದು ವಿಕೆಟ್​ ಪಡೆದು ಮಿಂಚಿದರು.

ವಿಂಡೀಸ್​ ನೀಡಿದ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡ ಆರಂಭಿಕ ಆಘಾತ ಎದುರಿಸಿತ್ತು. 5 ಓವರ್​ಗಳ ಅಂತರದಲ್ಲಿ ಭಾರತ ತಂಡ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಬಳಿಕ ಬಂದ ಸೂರ್ಯಕುಮಾರ್​ ಭರ್ಜರಿ ಬ್ಯಾಟ್​ ಬೀಸಿದರು. ವೆಸ್ಟ್​ ಇಂಡೀಸ್​ ಬೌಲರ್​ಗಳ ಬೆವರಿಳಿಸಿದರು.

ಭಾರತ ತಂಡಕ್ಕೆ ಆರಂಭಿಕ ಆಘಾತ: ಭಾರತ ತಂಡದ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ತಂಡವು 6 ರನ್‌ಗಳಿಗೆ ಮೊದಲ ವಿಕೆಟ್ ಮತ್ತು 34 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ 1 ಮತ್ತು ಶುಭಮನ್ ಗಿಲ್ 6 ರನ್ ಗಳಿಸಿ ಔಟಾದರು. ಇದಾದ ನಂತರ ಸೂರ್ಯಕುಮಾರ್ ಯಾದವ್ ಅವರು ತಿಲಕ್ ವರ್ಮಾ ಅವರೊಂದಿಗೆ ಅರ್ಧಶತಕದ ಜೊತೆಯಾಟ ಹಂಚಿಕೊಳ್ಳುವ ಮೂಲಕ ಗೆಲುವನ್ನು ತಮ್ಮದಾಗಿಸಿಕೊಂಡರು. ಸೂರ್ಯ ಕೂಡ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ತಂಡದ ಪರ ಸೂರ್ಯಕುಮಾರ್ ಯಾದವ್ 44 ಎಸೆತಗಳಲ್ಲಿ 83 ರನ್ ಸಿಡಿಸಿದರು. ಈ ವೇಳೆ, ಅವರು 4 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಗಳಿಸಿದರು. ಇನ್ನು ಸೂರ್ಯಕುಮಾರ್​ಗೆ ಸಾಥ್ ನೀಡಿದ್ದ ತಿಲಕ್ ವರ್ಮಾ 37 ಎಸೆತಗಳಲ್ಲಿ 49 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು.

ಇನ್ನು ಹಾರ್ದಿಕ್​ ಪಾಂಡ್ಯ 15 ಎಸೆತಗಳಲ್ಲಿ 20 ರನ್​ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿಂಡೀಸ್ ಪರ ಅಲ್ಜಾರಿ ಜೋಸೆಫ್ 2 ಹಾಗೂ ಒಬೆದ್ ಮೆಕಾಯ್ 1 ವಿಕೆಟ್ ಪಡೆದರು. 160 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ ತಂಡ 17.5 ಓವರ್‌ಗಳಲ್ಲಿ 3 ವಿಕೆಟ್​ಗಳ ನಷ್ಟಕ್ಕೆ 164 ರನ್ ಗಳಿಸಿ ಈ ಪಂದ್ಯವನ್ನು ಗೆದ್ದುಕೊಂಡಿತು. ಈ ಗೆಲುವಿನ ಮೂಲಕ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ 1-2 ಹಿನ್ನಡೆ ಕಾಯ್ದುಕೊಂಡಿದೆ. ಮುಂಬರುವ ಪಂದ್ಯಗಳು ಶನಿವಾರ ಮತ್ತು ಭಾನುವಾರ ನಡೆಯಲಿದೆ.

ಓದಿ: IND vs WI 3rd T20: ಟಾಸ್ ​ಗೆದ್ದ ವಿಂಡೀಸ್​ ಬ್ಯಾಟಿಂಗ್​ ಆಯ್ಕೆ.. ಟೀಂ ಇಂಡಿಯಾಕ್ಕೆ ಯಶಸ್ವಿ ಜೈಸ್ವಾಲ್​ ಪಾದಾರ್ಪಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.