ETV Bharat / sports

West Indies T20 squad: ಭಾರತದ ವಿರುದ್ಧದ ಐದು ಟಿ20 ಪಂದ್ಯಕ್ಕೆ ಹೀಗಿದೆ ವೆಸ್ಟ್ ಇಂಡೀಸ್​​ ತಂಡ

author img

By

Published : Aug 1, 2023, 5:11 PM IST

ತವರಿನಲ್ಲಿ ನಡೆಯುವ ವಿಶ್ವಕಪ್​ಗೆ​ ವಿಂಡೀಸ್ ಈಗಿನಿಂದಲೇ​ ತಯಾರಿ ನಡೆಸುತ್ತಿದ್ದು, ಅನುಭವಿಗಳ ಜೊತೆಗೆ ಯುವಕರಿಗೆ ಮಣೆ ಹಾಕಿ ಇಂಡಿಯಾ ವಿರುದ್ಧದ ಐದು ಟಿ20ಗೆ 15 ಜನರ ತಂಡವನ್ನು ಪ್ರಕಟಿಸಿದೆ.

West Indies name squad for T20I series
West Indies name squad for T20I series

ಪೋರ್ಟ್ ಆಫ್ ಸ್ಪೇನ್ (ವೆಸ್ಟ್ ಇಂಡೀಸ್): ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ವೆಸ್ಟ್ ಇಂಡೀಸ್ 15 ಸದಸ್ಯರ 'ತಾತ್ಕಾಲಿಕ' ತಂಡವನ್ನು ಪ್ರಕಟಿಸಿದೆ. ಗುರುವಾರ ತಾರೌಬಾದಲ್ಲಿ ಆರಂಭವಾಗಲಿರುವ ಟಿ20 ಸರಣಿಗೆ ಏಕದಿನ ತಂಡದ ನಾಯಕ ಶಾಯ್ ಹೋಪ್ ಮತ್ತು ವೇಗದ ಬೌಲರ್ ಒಶಾನೆ ಥಾಮಸ್ ಅವರನ್ನು ಉಳಿಸಿಕೊಳ್ಳಲಾಗಿದೆ. ರೋವ್‌ಮನ್ ಪೊವೆಲ್ ನೇತೃತ್ವದಲ್ಲಿ 15 ಸದಸ್ಯರನ್ನು ಒಳಗೊಂಡ ತಂಡವನ್ನು ಕೆರಿಬಿಯನ್​ ಕ್ರಿಕೆಟ್​ ಸಂಸ್ಥೆ ಪ್ರಕಟಿಸಿದೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ನಾಯಕರಾಗಿರುವ 29 ವರ್ಷದ ಹೋಪ್ ಕಳೆದ ವರ್ಷ ಫೆಬ್ರವರಿಯ ಭಾರತ ಪ್ರವಾಸದ ವೇಳೆ ಕೋಲ್ಕತ್ತಾದಲ್ಲಿ ಕೊನೆಯ ಬಾರಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಮತ್ತೊಂದೆಡೆ 26 ವರ್ಷದ ಥಾಮಸ್ ಡಿಸೆಂಬರ್ 2021 ರಲ್ಲಿ ಕರಾಚಿಯಲ್ಲಿ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಈ ಇಬ್ಬರು ಅನುಭವಿ ಆಟಗಾರರು ಬಹಳಾ ಸಮಯದ ನಂತರ ಟಿ20 ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯೂಐ-CWI) ಹಿರಿಯ ಪುರುಷರ ಆಯ್ಕೆ ಸಮಿತಿಯು ಪ್ರಕಟಿಸಿದ ತಂಡದಲ್ಲಿ ಕೈಲ್ ಮೇಯರ್ಸ್ ಅವರಿಗೆ ಉಪನಾಯಕನ ಸ್ಥಾನವನ್ನು ನೀಡಲಾಗಿದೆ. ಮುಂದಿನ ವರ್ಷ ತವರಿನಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಮುಖ ಆಯ್ಕೆಗಾರ ಡೆಸ್ಮಂಡ್ ಹೇನ್ಸ್ ಹೇಳಿದ್ದಾರೆ. "ನಾವು ಸರಿಯಾದ ಸಂಯೋಜನೆಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಇನ್ನು ಒಂದು ವರ್ಷದ ಒಳಗೆ ತವರಿನಲ್ಲಿ ಟಿ20 ವಿಶ್ವಕಪ್​ ನಡೆಯಲಿರುವ ಕಾರಣ ಸೂಕ್ತ ತಂಡವನ್ನು ಸಿದ್ಧಪಡಿಸಿಕೊಳ್ಳುವುದು ಅಗತ್ಯವಿದೆ. ಈ ದೃಷ್ಟಿಕೋನದಿಂದ ನಾವು ಆಯ್ಕೆಯ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇವೆ" ಎಂದು ಸಿಡಬ್ಲ್ಯೂಐ ತಿಳಿಸಿದೆ.

"ನಮ್ಮ ಲೈನ್-ಅಪ್‌ನಲ್ಲಿ ನಾವು ಕೆಲವು ಗೇಮ್​ ವಿನ್ನರ್​ಗಳನ್ನು ಹೊಂದಿದ್ದೇವೆ. ವಿಶ್ವಕಪ್​ಗಾಗಿ ನಾವು ಸರಿಯಾದ ರೀತಿಯ ತಯಾರಿಯನ್ನು ನಡೆಸುವ ಪ್ರಯತ್ನದಲ್ಲಿದ್ದೇವೆ. ಮುಂದಿನ ತಿಂಗಳಿನಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್‌ ಪ್ರಾರಂಭವಾಗಲಿದ್ದು, ಅದರಲ್ಲಿ ಮಿಂಚುವ ಯುವ ಹಾಗೂ ಅನುಭವಿ ಆಟಗಾರರಿಗೆ ವಿಶ್ವಕಪ್​ ತಂಡದಲ್ಲಿ ಅವಕಾಶ ನೀಡುವ ಬಗ್ಗೆ ಚಿಂತಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.

ಟ್ರಿನಿಡಾಡ್‌ನ ತರೌಬಾದಲ್ಲಿರುವ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ಗುರುವಾರ ಸರಣಿಯ ಮೊದಲ ಟಿ20ಯನ್ನು ಆಡಲಿದೆ. ತಂಡಗಳು ನಂತರ ಆಗಸ್ಟ್ 6 ಮತ್ತು 8 ರಂದು ಎರಡನೇ ಮತ್ತು ಮೂರನೇ ಪಂದ್ಯಗಳಿಗಾಗಿ ಗಯಾನಾ ನ್ಯಾಷನಲ್ ಸ್ಟೇಡಿಯಂಗೆ ತೆರಳುತ್ತವೆ. ಆಗಸ್ಟ್ 12 ಮತ್ತು 13 ರಂದು ಎರಡು ಅಂತಿಮ ಟಿ20 ಪಂದ್ಯಗಳು ಫ್ಲೋರಿಡಾದ (USA) ಬ್ರೋವರ್ಡ್ ಕೌಂಟಿ ಸ್ಟೇಡಿಯಂನಲ್ಲಿ ಬ್ರೋವರ್ಡ್ ಕೌಂಟಿ ಸ್ಟೇಡಿಯಂನಲ್ಲಿ ನಡೆಯಲಿದೆ.

ವೆಸ್ಟ್ ಇಂಡೀಸ್ ತಂಡ: ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಓಬೆಡ್ ಮೆಕಾಯ್, ನಿಕೋಲಸ್ ಪೂರನ್, ಒಮಾರಿಯೋ ಶೆಫರ್ಡ್, ರೊಮಾರಿಯೋ ಶೆಫರ್ಡ್ ಸ್ಮಿತ್, ಒಶಾನೆ ಥಾಮಸ್.

ಇದನ್ನೂ ಓದಿ: IND vs WI 3rd ODI: ಲಾರಾ ಪಿಚ್​ನಲ್ಲಿ ಮೊದಲ ಅಂತಾರಾಷ್ಟ್ರೀಯ ಏಕದಿನ.. ಭಾರತ ತಂಡಕ್ಕೆ ದ್ರಾವಿಡ್​ ಪ್ರಯೋಗ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.