ETV Bharat / sports

ಇಂದಿನಿಂದ U19 ಏಕದಿನ ವಿಶ್ವಕಪ್​: ಉದ್ಘಾಟನಾ ಪಂದ್ಯದಲ್ಲಿ ಆಸೀಸ್‌-ವಿಂಡೀಸ್‌ ಫೈಟ್‌

author img

By

Published : Jan 13, 2022, 9:57 PM IST

Updated : Jan 14, 2022, 5:56 AM IST

under 19 world cup: Host west indies U19 meet Australia U19 in inaugural match
ಅಂಡರ್ 19 ವಿಶ್ವಕಪ್​

ಅಭ್ಯಾಸ ಪಂದ್ಯದಲ್ಲಿ ಭಾರತದೆದುರು ಹೀನಾಯ ಸೋಲು ಕಂಡಿರುವ ಆಸ್ಟ್ರೇಲಿಯಾ ತಮ್ಮ ತಪ್ಪನ್ನು ತಿದ್ದಿಕೊಂಡು ವೆಸ್ಟ್​ ಇಂಡೀಸ್​ ವಿರುದ್ಧ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಕಿರಿಯರ ವಿಶ್ವಕಪ್​ ಇತಿಹಾಸದಲ್ಲಿ ಆಸ್ಟ್ರೇಲಿಯಾ ಮೂರು ಬಾರಿ ವಿಶ್ವ ಚಾಂಪಿಯನ್​ ಆಗಿದೆ. 1988, 2002 ಮತ್ತು 2010ರಲ್ಲಿ ವಿಶ್ವಕಪ್​ ಎತ್ತಿ ಹಿಡಿದಿದ್ದ ಆಸೀಸ್​ 2 ಬಾರಿ ರನ್ನರ್ ಅಪ್ ಆಗಿದೆ.

ಗಯಾನ: ಕೋವಿಡ್‌ ಭೀತಿಯ ನಡುವೆಯೂ ವೆಸ್ಟ್‌ ಇಂಡೀಸ್‌ನಲ್ಲಿ ಇಂದಿನಿಂದ ಅಂಡರ್‌-19 ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಮೊದಲ ಬಾರಿಗೆ ವಿಂಡೀಸ್‌ ಆತಿಥ್ಯ ವಹಿಸಿದ್ದು, 16 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ಇಂದಿನ ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್​ ಇಂಡೀಸ್​ ತಂಡ ಆಸ್ಟ್ರೇಲಿಯಾ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಕಾದಾಡಲಿದೆ. ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ ತಂಡ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ.

ಅಭ್ಯಾಸ ಪಂದ್ಯದಲ್ಲಿ ಭಾರತದೆದುರು ಹೀನಾಯ ಸೋಲು ಕಂಡಿರುವ ಆಸ್ಟ್ರೇಲಿಯಾ ತಮ್ಮ ತಪ್ಪು ತಿದ್ದುಕೊಂಡು ವೆಸ್ಟ್​ ಇಂಡೀಸ್​ ವಿರುದ್ಧ ಗೆದ್ದು ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಕಿರಿಯರ ವಿಶ್ವಕಪ್​ ಇತಿಹಾಸದಲ್ಲಿ ಆಸ್ಟ್ರೇಲಿಯಾ ಮೂರು ಬಾರಿ ವಿಶ್ವ ಚಾಂಪಿಯನ್​ ಆಗಿದೆ. 1988, 2002 ಮತ್ತು 2010ರಲ್ಲಿ ವಿಶ್ವಕಪ್​ ಎತ್ತಿ ಹಿಡಿದಿದ್ದ ಆಸೀಸ್​ 2 ಬಾರಿ ರನ್ನರ್ ಅಪ್ ಆಗಿದೆ.

2004ರಲ್ಲಿ ರನ್ನರ್ ಅಪ್ ಅಗಿದ್ದ ವೆಸ್ಟ್​ ಇಂಡೀಸ್​ 2016ರಲ್ಲಿ ಭಾರತ ತಂಡವನ್ನು ಮಣಿಸಿ ಮೊದಲ ಬಾರಿ ಚಾಂಪಿಯನ್​ ಆಗಿತ್ತು. ಇದೀಗ ತವರಿನ ಲಾಭ ಪಡೆಯುವ ಆಲೋಚನೆಯಲ್ಲಿದೆ.

ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ ತಂಡ ಜಾರ್ಜ್​ಟನ್​​ನಲ್ಲಿ ಸ್ಕಾಟ್ಲೆಂಡ್​ ತಂಡವನ್ನು ಎದುರಿಸಲಿದೆ. ಎರಡು ಅಭ್ಯಾಸ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಲಂಕಾ ತನ್ನ ಮೊದಲ ಸುಲಭದ ಎದುರಾಳಿಯಾಗಿರುವ ಸ್ಕಾಟ್ಲೆಂಡ್ ವಿರುದ್ಧ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.

ಫೆ.5ಕ್ಕೆ ಫೈನಲ್‌ ಕದನ

4 ಬಾರಿಯ ಚಾಂಪಿಯನ್, ಮೂರು ಬಾರಿ ರನ್ನರ್‌ ಅಪ್‌ ಆಗಿರುವ​ ಭಾರತ ತಂಡ ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು 10 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಫೆ.5ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಯೋಬಬಲ್‌ನಲ್ಲಿ ಟೂರ್ನಿಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ:ಯುಎಇ ಅಲ್ಲ, 2022ರ ಐಪಿಎಲ್ ಈ ದೇಶದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ!

Last Updated :Jan 14, 2022, 5:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.