ETV Bharat / sports

ರಿಜ್ವಾನ್, ಬಾಬರ್​ ಅಬ್ಬರ: ನಮೀಬಿಯಾಗೆ 190 ರನ್​ಗಳ ಬೃಹತ್ ಟಾರ್ಗೆಟ್ ನೀಡಿದ ಪಾಕಿಸ್ತಾನ

author img

By

Published : Nov 2, 2021, 9:30 PM IST

ಬಾಬರ್​ ಅಜಮ್​ 49 ಎಸೆತಗಳಲ್ಲಿ 7 ಬೌಂಡರಿ ಸಹಿತ 70 ರನ್​ಗಳಿಸಿ ಔಟಾದರೆ, ರಿಜ್ವಾನ್​ 50 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್​ಗಳ ನೆರವಿನಿಂದ ಅಜೇಯ 79 ರನ್​ಗಳಿಸಿದರು.

T20 World Cup
ಪಾಕಿಸ್ತಾನ vs ನಮೀಬಿಯಾ

ಅಬುಧಾಬಿ: ಆರಂಭಿಕ ಬ್ಯಾಟರ್​ಗಳಾದ ಮೊಹಮ್ಮದ್ ರಿಜ್ವಾನ್​ ಮತ್ತು ನಾಯಕ ಬಾಬರ್​ ಅಜಮ್ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ ತಂಡ ನಮೀಬಿಯಾಗೆ 190 ರನ್​ಗಳ ಬೃಹತ್ ಗುರಿ ನೀಡಿದೆ.

ಟಾಸ್​ ಗೆದ್ದ ಪಾಕಿಸ್ತಾನ ತಂಡ ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದ ರಿಜ್ವಾನ್ ಮತ್ತು ಬಾಬರ್​ ಅಜಮ್​ ಮೊದಲ ವಿಕೆಟ್​ಗೆ 113 ರನ್​ಗಳ ಭರ್ಜರಿ ಜೊತೆಯಾಟ ನೀಡಿದರು.

ಬಾಬರ್​ ಅಜಮ್​ 49 ಎಸೆತಗಳಲ್ಲಿ 7 ಬೌಂಡರಿ ಸಹಿತ 70 ರನ್​ಗಳಿಸಿ ಔಟಾದರೆ, ರಿಜ್ವಾನ್​ 50 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್​ಗಳ ನೆರವಿನಿಂದ ಅಜೇಯ 79 ರನ್​ಗಳಿಸಿದರು. ಇವರಿಗೆ ಸಾಥ್ ನೀಡಿದ ಮೊಹಮ್ಮದ್ ಹಫೀಜ್​ 16 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 32 ರನ್​ಗಳಿಸಿ 190 ರನ್​ಗಳ ಬೃಹತ್ ಗುರಿ ನೀಡಲು ನೆರವಾದರು.

ನಮೀಬಿಯಾ ಉತ್ತಮ ಬೌಲಿಂಗ್ ಮಾಡಿದರೂ ಕಳಪೆ ಕ್ಷೇತ್ರರಕ್ಷಣೆಯಿಂದ ಸಾಕಷ್ಟು ರನ್​ ಬಿಟ್ಟುಕೊಟ್ಟರು. ಡೇವಿಡ್​ ವೀಸ್​ 31ಕ್ಕೆ1 ಮತ್ತು ಜಾನ್ ಫ್ರಾಲಿಂಕ್ 31ಕ್ಕೆ1 ವಿಕೆಟ್​ ಪಡೆದರು.

ಇದನ್ನು ಓದಿ: T20 World Cup: ಬಾಂಗ್ಲಾದೇಶ ಬಗ್ಗುಬಡಿದು ಸೆಮಿಫೈನಲ್ಸ್ ಸನಿಹ ತಲುಪಿದ ದಕ್ಷಿಣ ಆಫ್ರಿಕಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.