ETV Bharat / sports

ಹರ್ಷಲ್​, ಭುವನೇಶ್ವರ್​ ಕಳಪೆ ಆಟಕ್ಕೆ ಟೀಕೆ.. ಬೆಂಬಲಕ್ಕೆ ನಿಂತ ನಾಯಕ ರೋಹಿತ್​ ಶರ್ಮಾ

author img

By

Published : Sep 26, 2022, 3:58 PM IST

rohit-defends-bhuvneshwar-and-harshal
ಬೆಂಬಲಕ್ಕೆ ನಿಂತ ನಾಯಕ ರೋಹಿತ್​ ಶರ್ಮಾ

ಭಾರತ ತಂಡದ ಬೌಲಿಂಗ್​ ವಿಭಾಗದ ಕಳಪೆ ಪ್ರದರ್ಶನ ಟೀಕೆಗೆ ಗುರಿಯಾಗಿದೆ. ಅದರಲ್ಲೂ ಮುಂಚೂಣಿ ವೇಗಿಗಳಾದ ಭುವನೇಶ್ವರ್​, ಹರ್ಷಲ್​ ಪಟೇಲ್​ ಹೆಚ್ಚು ರನ್​ ಬಿಟ್ಟು ಕೊಡುತ್ತಿರುವುದು ಚರ್ಚಾ ವಿಷಯವಾಗಿದೆ. ಆದರೆ, ನಾಯಕ ರೋಹಿತ್​ ಶರ್ಮಾ ಇಬ್ಬರು ಆಟಗಾರರನ್ನು ಬೆಂಬಲಿಸಿದ್ದಾರೆ.

ಹೈದರಾಬಾದ್: ಭಾರತ ತಂಡದ ಮುಂಚೂಣಿ ವೇಗಿಗಳಾದ ಭುವನೇಶ್ವರ್​ ಕುಮಾರ್​ ಮತ್ತು ಹರ್ಷಲ್​ ಪಟೇಲ್​ ಸತತ ವೈಫಲ್ಯ ಕಾಣುತ್ತಿದ್ದರೂ, ಅವರ ಆಟವನ್ನು ನಾಯಕ ರೋಹಿತ್​ ಶರ್ಮಾ ಸಮರ್ಥಿಸಿಕೊಂಡಿದ್ದಾರೆ. ಟಿ-20 ವಿಶ್ವಕಪ್​ ವೇಳೆಗೆ ಅವರು ಫಾರ್ಮ್​ಗೆ ಮರಳುತ್ತಾರೆ ಎಂಬ ವಿಶ್ವಾಸವನ್ನು ರೋಹಿತ್​ ವ್ಯಕ್ತಪಡಿಸಿದ್ದಾರೆ.

ಡೆತ್​ಓವರ್​ ಸ್ಪೆಷಲಿಸ್ಟ್​ ಭುವಿಗೆ ಡೆತ್​ಓವರೇ ಮಾರಕ: ಡೆತ್​ ಓವರ್​ನಲ್ಲಿ ಭುವನೇಶ್ವರ್​​ ಕುಮಾರ್​ ಬೌಲ್​ ಮಾಡಿದರೆ ಎದುರಾಳಿ ತಂಡ ಸಣ್ಣಗೆ ನಡುಗುತ್ತಿತ್ತು. ರನ್​ ಗಳಿಸಲು ಪರದಾಡಬೇಕಿತ್ತು. ಆದರೆ, ಏಷ್ಯಾಕಪ್​ ವೇಳೆಯಿಂದ ಭುವನೇಶ್ವರ್​ ಕುಮಾರ್​ ಬೌಲಿಂಗ್​ ಮೊನಚು ಕಳೆದುಕೊಂಡಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಡೆತ್​ ಓವರ್​ ಸ್ಪೆಷಲಿಸ್ಟ್​ ಭುವಿ 19ಕ್ಕೂ ಅಧಿಕ ರನ್​ ಚಚ್ಚಿಸಿಕೊಂಡು ಪಂದ್ಯ ಸೋಲಿಗೆ ಕಾರಣವಾಗಿದ್ದರು.

ಅದಾದ ಬಳಿಕ ಆಸೀಸ್​ ಸರಣಿಯಲ್ಲೂ ಭುವನೇಶ್ವರ್​ 12 ರ ಎಕಾನಮಿಯನ್ನು ಬೌಲಿಂಗ್​ ಮಾಡಿ ಹೆಚ್ಚು ರನ್​ ಬಿಟ್ಟುಕೊಡುತ್ತಿದ್ದಾರೆ. ಇದು ತಂಡದ ಮೇಲೆ ಭಾರಿ ಹೊರೆ ಬೀಳುತ್ತಿದ್ದು, ಸೋಲಿಗೂ ಕಾರಣವಾಗುತ್ತಿದೆ.

ಭುವಿ ದಾರಿಯಲ್ಲಿ ಹರ್ಷಲ್​ ಪಟೇಲ್​: ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಹರ್ಷಲ್​ ಪಟೇಲ್​ ಕೂಡ ಭುವನೇಶ್ವರ್​ ಹಾದಿಯಲ್ಲಿದ್ದಾರೆ. ಆಸೀಸ್​ ವಿರುದ್ಧದ ಮೂರು ಪಂದ್ಯಗಳಲ್ಲಿ ಹರ್ಷಲ್​ 8 ಓವರ್​ ಬೌಲಿಂಗ್​ ಮಾಡಿದ್ದು 99 ರನ್​ಗಳನ್ನು ಚಚ್ಚಿಸಿಕೊಂಡು ದುಬಾರಿಯಾಗಿದ್ದಾರೆ. ಅಲ್ಲದೇ ವಿಕೆಟ್​ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ವಿಶ್ವಾಸ ಕಳೆದುಕೊಳ್ಳದ ನಾಯಕ: ಇನ್ನು ಇಬ್ಬರು ಮುಂಚೂಣಿ ದಾಳಿಕೋರರ ಬೌಲಿಂಗ್​ ಮೊನಚು ಕಳೆದುಕೊಂಡಿದ್ದರೂ, ನಾಯಕ ರೋಹಿತ್​ ಶರ್ಮಾ ಮಾತ್ರ ಅವರ ಮೇಲೆ ವಿಶ್ವಾಸ ಕಳೆದುಕೊಂಡಿಲ್ಲ. "ಭುವಿ ಮತ್ತು ಹರ್ಷಲ್​ ಪಟೇಲ್​ಗೆ ಸಮಯ ಬೇಕಿದೆ. ಅವರ ಕಳಪೆ ಫಾರ್ಮ್ ಹೆಚ್ಚು ಕಾಲ ಹೀಗೆಯೇ ಉಳಿಯುವುದಿಲ್ಲ. ಅವರ ಆಟ ಏನೆಂಬುದನ್ನು ನಾವು ಹಿಂದೆ ನೋಡಿದ್ದೇವೆ" ಎಂದು ಹೇಳಿದ್ದಾರೆ.

ಭುವನೇಶ್ವರ್​ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದ್ದಾರಾ ಎಂಬ ಪ್ರಶ್ನೆಗೆ, ಆತನಲ್ಲಿ ಯಾವುದೇ ಆತ್ಮವಿಶ್ವಾಸದ ಕೊರತೆ ಇಲ್ಲ. ಆತನ ಕೌಶಲ್ಯಗಳ ಮೇಲೆ ನಾವು ನಂಬಿಕೆ ಇಡಬೇಕು. ಪಂದ್ಯದಲ್ಲಿ ಡೆತ್ ಓವರ್‌ ವೇಳೆ ಏನು ಬೇಕಾದರೂ ಆಗಬಹುದು. ಆಟಗಾರನೊಬ್ಬನನ್ನು ಟೀಕಿಸಲು ಸಾಧ್ಯವಿಲ್ಲ. ಇದಕ್ಕಾಗಿ ಬೌಲಿಂಗಹ್​ ಆಯ್ಕೆಯನ್ನು ಹೊಂದಿಸಬೇಕಿದೆ ಎಂದು ಹೇಳಿದರು.

ಹರ್ಷಲ್​ ಪಟೇಲ್​ ಕೂಡ ಗಾಯಗೊಂಡು ಸುಮಾರು 2 ತಿಂಗಳು ಕ್ರಿಕೆಟ್​ನಿಂದ ದೂರವಿದ್ದರು. ಆಸೀಸ್​ ವಿರುದ್ಧದ ಮೂರು ಪಂದ್ಯಗಳಿಂದ ಅವರ ಆಟವನ್ನು ನಿರ್ಣಯಿಸಬಾರದು. ಗಾಯದಿಂದ ಮರಳಿ ಕ್ರಿಕೆಟ್​ ಆಡುವುದು ಸುಲಭವಲ್ಲ. ಅವರೂ ಕೂಡ ಬೇಗನೆ ಫಾರ್ಮ್​ಗೆ ಮರಳುತ್ತಾರೆ ಎಂದು ಬೆಂಬಲ ನೀಡಿದರು.

ಓದಿ: ಕಿಂಗ್​ ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ.. ಕೋಚ್​​ ದ್ರಾವಿಡ್​​​ ಹಿಂದಿಕ್ಕಿದ ವಿರಾಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.