ETV Bharat / sports

'ಸದ್ಯ ಭಾರತ ತಂಡ ಉತ್ತಮ ಸ್ಥಿತಿಯಲ್ಲಿದೆ'.. ಆಟಗಾರರ ಪ್ರದರ್ಶನಕ್ಕೆ ನಾಯಕ ರೋಹಿತ್​ ಶರ್ಮಾ ಮೆಚ್ಚುಗೆ

author img

By

Published : Jul 25, 2023, 6:10 PM IST

ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ನೀಡಿದ ಪ್ರದರ್ಶನಕ್ಕೆ ನಾಯಕ ರೋಹಿತ್​ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಯಕ ರೋಹಿತ್​ ಶರ್ಮಾ
ನಾಯಕ ರೋಹಿತ್​ ಶರ್ಮಾ

ಪೋರ್ಟ್ ಆಫ್ ಸ್ಪೇನ್: ಹಿರಿಯ ಬೌಲರ್​ಗಳ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್​ ಪ್ರವಾಸ ಕೈಗೊಂಡಿರುವ ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಯಲ್ಲಿ ತನ್ನದಾಗಿಸಿಕೊಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್​ ವಿಭಾಗದಲ್ಲಿ ಆಟಗಾರರು ತೋರಿದ ಪ್ರದರ್ಶನಕ್ಕೆ ನಾಯಕ ರೋಹಿತ್​ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ತಂಡ ಸದ್ಯ ಅತ್ಯುತ್ತಮ ಸ್ಥಿತಿಯಲ್ಲಿದೆ' ಎಂದು ಹೇಳಿದ್ದಾರೆ.

ಹಿರಿಯ ವೇಗಿಗಳಾದ ಮೊಹಮದ್​ ಶಮಿ, ಜಸ್ಪ್ರೀತ್​ ಬೂಮ್ರಾ, ಉಮೇಶ್​ ಯಾದವ್​ ಇರದ ಸರಣಿಯಲ್ಲಿ ಮೊಹಮದ್​ ಸಿರಾಜ್​ ಅದ್ಭುತ ಪ್ರದರ್ಶನ ನೀಡಿದರು. ವೇಗಿಗಳ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 60 ರನ್‌ಗಳಿಗೆ 5 ವಿಕೆಟ್ ಗಳಿಸಿದರು. ಇದು ತಂಡಕ್ಕೆ ನೆರವು ನೀಡಿದ್ದಲ್ಲದೇ, ಮೊದಲ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಇದನ್ನವರು ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ವೇಗಿಗಳ ನೇತೃತ್ವ ವಹಿಸಲಿದ್ದಾರಾ ಎಂಬ ಪ್ರಶ್ನೆಗೆ, ಒಬ್ಬ ಬೌಲರ್​ ಮಾತ್ರ ನೇತೃತ್ವ ವಹಿಸಬಾರದು. ಎಲ್ಲರು ತಮ್ಮ ಕೌಶಲ್ಯವನ್ನು ಪ್ರದರ್ಶಿಸಬೇಕು. ಆಗ ಮಾತ್ರ ವಿಭಾಗ ಗಟ್ಟಿಯಾಗಿರಲಿದೆ. ಸಿರಾಜ್​ ಇದರಲ್ಲಿ ಯಶಸ್ವಿಯಾಗಿದ್ದಾನೆ ಎಂದು ಭಾವಿಸುತ್ತೇನೆ. ವೇಗಿಗಳು ಪರಿಸ್ಥಿತಿಗೆ ತಕ್ಕಂತೆ ಬೌಲ್​ ಮಾಡಿ ತಂಡಕ್ಕೆ ಗೆಲುವು ತಂದುಕೊಡಬೇಕು ಎಂದು ಹೇಳಿದರು.

ಗೆಲುವು ಕಸಿದ ಮಳೆ: ಕೊನೆಯ ದಿನ ಮಳೆ ನಿರಂತರವಾಗಿ ಸುರಿದ ಕಾರಣ ಪಂದ್ಯ ಡ್ರಾ ಆಯಿತು. ಇಲ್ಲವಾದಲ್ಲಿ ಗೆಲುವು ನಮ್ಮದೇ ಆಗಿತ್ತು. ಕೊನೆಯ ದಿನ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟ. ಅದನ್ನು ಅರಿತೇ ನಾವು ವಿಂಡೀಸ್​ ತಂಡಕ್ಕೆ ದೊಡ್ಡ ಗುರಿ ನೀಡಿದ್ದೆವು. ಆದರೆ, ಎಲ್ಲ ಲೆಕ್ಕಾಚಾರಗಳು ಉಲ್ಟಾ ಆದವು. ಮಳೆಯಾಟದ ಮುಂದೆ ನಮ್ಮ ಆಟ ನಡೆಯಲಿಲ್ಲ ಎಂದು ರೋಹಿತ್​ ಬೇಸರಿಸಿದರು.

ಬ್ಯಾಟಿಂಗ್​ ಪಡೆಗೂ ಭೇಷ್​: ಸದ್ಯ ಬ್ಯಾಟಿಂಗ್​ ವಿಭಾಗವೂ ಬಲಿಷ್ಠವಾಗಿದೆ. ನಾನು, ವಿರಾಟ್​ ಕೊಹ್ಲಿ, ಇಶಾನ್​ ಕಿಶನ್​, ಯಶಸ್ವಿ ಜೈಶ್ವಾಲ್​ರಿಂದ ಅದ್ಭುತ ಪ್ರದರ್ಶನ ಮೂಡಿಬಂತು. ನಮಗೆ ಇಶಾನ್‌ರಂತಹ ಆಟಗಾರ ಬೇಕು. ವೇಗವಾಗಿ ರನ್​ ಕಲೆಹಾಕುವ ವೇಳೆ ಇಂತಹ ಆಟ ನೆರವಾಗುತ್ತದೆ. ಹೀಗಾಗಿ 2ನೇ ಇನಿಂಗ್ಸ್​ನಲ್ಲಿ ಆತನಿಗೆ ಬಡ್ತಿ ನೀಡಿದ್ದೆವು. ತಮ್ಮಲ್ಲಿನ ಶಕ್ತಿ ತೋರಿಸಿದ ಕಿಶನ್​ ಸ್ಫೋಟಿಸಿದರು. ಮುಂದೆ ವಿರಾಟ್​ ಕೊಹ್ಲಿ ಜಾಗವನ್ನು ತುಂಬುವ ಆಟಗಾರ ಬರಬೇಕಿದೆ. ದಿಗ್ಗಜನ ಸ್ಥಾನ ತುಂಬುವುದು ಅಷ್ಟು ಸುಲಭವಲ್ಲ ಎಂದು ಅಭಿಪ್ರಾಯಪಟ್ಟರು.

2ನೇ ಟೆಸ್​​ ಪಂದ್ಯದಲ್ಲಿ ಮೊದಲ ಇನಿಂಗ್ಸ್​ನಲ್ಲಿ ಭಾರತ ವಿರಾಟ್​ ಕೊಹ್ಲಿ ಶತಕದ ಬಲದಿಂದ 438 ರನ್​ ಗಳಿಸಿತ್ತು. ಕೆರೆಬಿಯನ್ನರು 255 ರನ್​ ಗಳಿಸಿ, 181 ರನ್ ಹಿನ್ನಡೆ ಅನುಭವಿಸಿದರು. 2ನೇ ಇನಿಂಗ್ಸ್​ನಲ್ಲಿ ಭಾರತ 2 ವಿಕೆಟ್​ಗೆ 181 ರನ್​ ಗಳಿಸಿ ವಿಂಡೀಸ್​ಗೆ ಗೆಲುವಿಗಾಗಿ 365 ರನ್​ ಗುರಿ ನೀಡಿತ್ತು. ಆದರೆ, ಕೊನೆಯ ಇಡೀ ದಿನ ಮಳೆ ಸುರಿದ ಕಾರಣ ಪಂದ್ಯ ಡ್ರಾ ಆಯಿತು.

ಇದನ್ನೂ ಓದಿ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ರ‍್ಯಾಂಕಿಂಗ್​ನಲ್ಲಿ 2ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.