ETV Bharat / sports

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ರ‍್ಯಾಂಕಿಂಗ್​ನಲ್ಲಿ 2ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

author img

By

Published : Jul 25, 2023, 4:59 PM IST

Updated : Jul 25, 2023, 6:03 PM IST

ವೆಸ್ಟ್​ ವಿಂಡೀಸ್​ ವಿರುದ್ಧ ಆಡಿದ ಅಂತಿಮ ಟೆಸ್ಟ್​ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ರ‍್ಯಾಕಿಂಗ್​
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ರ‍್ಯಾಕಿಂಗ್​

ದುಬೈ : ವಿಂಡೀಸ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದ ಗೆಲುವಿನ ಹೊಸ್ತಿಲಲ್ಲಿದ್ದ ಭಾರತಕ್ಕೆ ಮಳೆರಾಯ ನಿರಾಶೆ ಉಂಟು ಮಾಡಿದ್ದ. ಇದರಿಂದ 2ನೇ ಪಂದ್ಯ ಡ್ರಾಗೊಂಡಿತು. ಭಾರತ ಟೆಸ್ಟ್​ ಸರಣಿಯನ್ನು 1-0 ಯಿಂದ ಕೈವಶ ಮಾಡಿಕೊಂಡರೂ, ಐಸಿಸಿ ಮಂಗಳವಾರ ಬಿಡುಗಡೆ ಮಾಡಿರುವ ನೂತನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 16 ಅಂಕಗಳಿಸಿದ್ದು, ಶೇ. 66.67 (PCT)ಗಳೊಂದಿಗೆ 2ನೇ ಸ್ಥಾನದಲ್ಲಿದೆ.

ವಿಂಡೀಸ್​ ಪ್ರವಾಸ ಕೈಗೊಂಡಿರುವ ಭಾರತ ಎರಡು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಎರಡನೇ ಟೆಸ್ಟ್‌ನಲ್ಲಿ ವಿಂಡೀಸ್​ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ವೈಟ್​ವಾಶ್​ ಮಾಡುವ ಲೆಕ್ಕಚಾರದಲ್ಲಿದ್ಧ ಟೀಂ ಇಂಡಿಯಾಗೆ ವರುಣಾ ಧಯೆ ತೋರಲಿಲ್ಲ. ಹೀಗಾಗಿ ಎರಡನೇ ಟೆಸ್ಟ್​ ಪಂದ್ಯ ಡ್ರಾ ನಲ್ಲಿ ಅಂತ್ಯ ಕಂಡಿತ್ತು. ಕಳೆದ ವಾರ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್​ನಲ್ಲಿ 4 ವಿಕೆಟ್‌ಗಳ ಭರ್ಜರಿ ಜಯಗಳಿಸಿದ ಪಾಕಿಸ್ತಾನ 12 ಅಂಕಗಳಿಂದ ಶೇ. 100 ​​(PCT) ದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆಶಸ್ ಟೆಸ್ಟ್​ ಸರಣಿ ಭಾರತದ ರ‍್ಯಾಂಕಿಂಗ್​ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ಇದನ್ನೂ ಓದಿ : West Indies vs India, 2nd Test: ಭಾರತ-ವೆಸ್ಟ್​ ಇಂಡೀಸ್​ 2ನೇ ಟೆಸ್ಟ್​​ ಡ್ರಾ: ಸರಣಿ ಗೆದ್ದ ಭಾರತ

ನಾಲ್ಕನೇ ಟೆಸ್ಟ್ ಗೆದ್ದು ಆಶಸ್​ ಸರಣಿಯಲ್ಲಿ ಸಮಬಲ ಸಾಧಿಸುವ ಭರವಸೆಯಲ್ಲಿದ್ದ ಇಂಗ್ಲೆಂಡ್​ಗೆ ಮಳೆ ಅಡ್ಡಿಯಾಗಿ ಪಂದ್ಯ ಡ್ರಾ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಯಿತು. ಈಗಾಗಲೇ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ನಡುವೆ ಆಶಸ್ 4 ಟೆಸ್ಟ್​ ಪಂದ್ಯಗಳು ನಡೆದಿದ್ದು, ಇಂಗ್ಲೆಂಡ್​ 1 ಪಂದ್ಯ ಗೆದ್ದರೆ, ಆಸ್ಟ್ರೇಲಿಯಾ 2 ಗೆಲುವು ದಾಖಲಿಸಿದೆ. ನಾಲ್ಕನೇ ಟೆಸ್ಟ್​ ಡ್ರಾ ಆದ ಕಾರಣ ಆಸ್ಟ್ರೇಲಿಯಾ ಆಶಸ್​ ಕಪ್​ ಅನ್ನು ತನ್ನಲೆ ಉಳಿಸಿಕೊಂಡಿದೆ. ಇನ್ನು ಅಂತಿಮ ಟೆಸ್ಟ್​ ಪಂದ್ಯವನ್ನು ಇಂಗ್ಲೆಂಡ್​ ಗೆದ್ದರೂ ಸಹ ಕೇವಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರ‍್ಯಾಂಕಿಂಗ್​ನಲ್ಲಿ ಬದಲಾವಣೆಯಾಗಲಿದ್ದು, ಆಶಸ್​ ಗೆಲ್ಲುವ ಕನಸು ನನಸಾಗುವುದಿಲ್ಲ.​

ಇದೀಗ ಆಸ್ಟ್ರೇಲಿಯಾ 26 ಅಂಕಗಳೊಂದಿಗೆ 54.17 (PCT) ಮತ್ತು ಇಂಗ್ಲೆಂಡ್ 14 ಅಂಕಗಳಿಂದ 29.17 (PCT) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಡ್ರಾ ಲಾಭ ಪಡೆದಿದೆ. ಏಕೆಂದರೆ 4 ಅಂಕಗಳೊಂದಿಗೆ 16.67 (PTC)ಕ್ಕೆ ಏರಿದ್ದು, ಐದನೇ ಸ್ಥಾನದಲ್ಲಿದೆ. ಪಾಕಿಸ್ತಾನ ವಿರುದ್ದ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲಿ ಒಂದು ಸೋಲು ಕಂಡಿರುವ ಶ್ರೀಲಂಕಾ 6ನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಪ್ರಾರಂಭವಾದ ಹೊಸ 2023-25 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ ರ‍್ಯಾಕಿಂಗ್​ನಲ್ಲಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಗದೆ ಗೆದ್ದ ನ್ಯೂಜಿಲ್ಯಾಂಡ್​ ತಂಡ ಇನ್ನೂ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ : ವಿಶ್ವ ಟೆಸ್ಟ್​ ಚಾಂಪಿಯನ್​ನಲ್ಲಿ ವಾರ್ನರ್​ ಹಿಂದಿಕ್ಕಿದ ರೋಹಿತ್: ಶರ್ಮಾ ಹೆಸರಿನಲ್ಲಿ ಮತ್ತೊಂದು ದಾಖಲೆ

Last Updated : Jul 25, 2023, 6:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.