ETV Bharat / sports

IND vs PAK: ಕಿಶನ್​, ಹಾರ್ದಿಕ್ ಅರ್ಧಶತಕದ ಆಸರೆ.. ಪಾಕಿಸ್ತಾನಕ್ಕೆ 267 ರನ್​ ಸ್ಪರ್ಧಾತ್ಮಕ ಗುರಿ

author img

By ETV Bharat Karnataka Team

Published : Sep 2, 2023, 3:48 PM IST

Updated : Sep 2, 2023, 8:21 PM IST

Asia Cup 2023: ಪಾಕಿಸ್ತಾನದ ವೇಗಿಗಳಾದ ಶಹೀನ್​ ಆಫ್ರಿದಿ ಮತ್ತು ಹ್ಯಾರಿಸ್ ರೌಫ್​​ ಭಾರತ ತಂಡಕ್ಕೆ ಕಾಡಿದ್ದರು, ನಂತರ ಕಿಶನ್​ ಮತ್ತು ಹಾರ್ದಿಕ್​ ಭಾರತಕ್ಕೆ ಆಸರೆ ಆಗಿದ್ದಾರೆ.

Pakistan vs India Asia Cup 2023 3rd Match at  Pallekele
Pakistan vs India Asia Cup 2023 3rd Match at Pallekele

ಪಲ್ಲೆಕೆಲೆ (ಶ್ರೀಲಂಕಾ): ಪಾಕಿಸ್ತಾನದ ಎದುರು ಭಾರತ ತಂಡ ಆರಂಭಿಕ ವೈಫಲ್ಯದ ನಡುವೆಯೂ ಇಶಾನ್​ ಕಿಶನ್​ ಮತ್ತು ಹಾರ್ದಿಕ್​ ಪಾಂಡ್ಯರ ಬ್ಯಾಟಿಂಗ್​ ಬಲದಿಂದ ಸ್ಪರ್ಧಾತ್ಮಕ ಗುರಿಯನ್ನು ಕಲೆಹಾಕಿದೆ. 66ಕ್ಕೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ 5ನೇ ವಿಕೆಟ್​ನಲ್ಲಿ ಕಿಶನ್​ ಮತ್ತು ಹಾರ್ದಿಕ್​ ಪಾಂಡ್ಯರ 138 ರನ್​ ಜೊತೆಯಾಟದ ಆಸರೆ 267 ರನ್​ ಗುರಿಗೆ ಕಾರಣವಾಯಿತು.

ಪಾಕ್​ ತಂಡ ತನ್ನ ಮಾರಕ ವೇಗಿಗಳಿಂದ ಎದುರಾಳಿಗಳನ್ನು ಕಾಡುತ್ತಲೇ ಬಂದಿದೆ. ಇಂದಿನ ಪಂದ್ಯದಲ್ಲೂ, ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಭಾರತೀಯ ಮೊದಲ ನಾಲ್ಕು ವಿಕೆಟ್​​​ಗೆ ಮುಳುವಾದರು. ಸತತ 145ಕ್ಕೂ ಹೆಚ್ಚು ವೇಗದಲ್ಲಿ ಬೌಲಿಂಗ್​ ಮಾಡುವ ಈ ಜೋಡಿಯ ದಾಳಿಗೆ ಭಾರತದ ಟಾಪ್​ ಆರ್ಡರ್​ ಕುಸಿತ ಕಂಡಿತು.

ಮಳೆಯ ಮುನ್ಸೂಚನೆಯಲ್ಲೇ ಟಾಸ್​ ಆಗಿ ಪಂದ್ಯ ಆರಂಭವಾಯಿತು. 4.2ನೇ ಓವರ್​​ನಲ್ಲಿ ವರುಣನ ಕಾಟಕ್ಕೆ ಪಂದ್ಯ 20 ನಿಮಿಷಗಳ ಕಾಲ ಬ್ರೇಕ್​ ಆಯಿತು. ನಂತರ ಪಂದ್ಯ ಆರಂಭ ಆಗುತ್ತಿದ್ದಂತೆ ಪಾಕ್​ ಬೌಲರ್​ ಶಾಹೀನ್ ಅಫ್ರಿದಿ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿಯ ವಿಕೆಟ್​ ಪಡೆದರು. 4.6 ನೇ ಬಾಲ್​ನಲ್ಲಿ 11 ರನ್ ಗಳಸಿದ್ದ ರೋಹಿತ್ ಕ್ಲೀನ್​ ಬೌಲ್ಡ್​ ಆದರೆ, ಬಂದ ಕೂಡಲೇ ಬೌಂಡರಿ ಗಳಿಸಿ ವಿರಾಟ್​ ಇನ್​ಸೈಡ್ ಎಡ್ಜ್​ಗೆ ಔಟ್​ ಆದರು.

ಗಾಯದಿಂದ ಚೇತರಿಸಿಕೊಂಡು ಮಧ್ಯಮ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಅಯ್ಯರ್​​ ಉತ್ತಮವಾಗಿ ಬ್ಯಾಟಿಂಗ್​ ಮಾಡುತ್ತಿದ್ದರು. ಎರಡು ಬೌಂಡರಿ ಸಹಾಯದಿಂದ 14 ರನ್​ ಗಳಿಸಿದ್ದ ಅಯ್ಯರ್​ ಬೌನ್ಸ್​ ಬಾಲ್​ ಟಾಸ್​ ಮಾಡಲು ಹೋಗಿ ಕ್ಯಾಚ್​ ಕೊಟ್ಟರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಗಿಲ್​ ಪ್ರತಿ ಬಾಲ್​ನ್ನು ಭಯದಲ್ಲೇ ಎದುರಿಸುತ್ತಿದ್ದರು. 32 ಬಾಲ್​ಗಳನ್ನು ಆಡಿದ ಗಿಲ್​ ಪಿಚ್​ಗೆ ಸೆಟಲ್​ ಆಗಲೇ ಇಲ್ಲ. ಪಾಕಿಸ್ತಾನದ ವೇಗಿಗಳ ಮುಂದೆ ಪ್ರಿನ್ಸ್​ ಆರ್ಭಟ ನಡೆಯಲಿಲ್ಲ. 32ನೇ ಬಾಲ್​ನಲ್ಲಿ ವಿರಾಟ್ ರೀತಿಯಲ್ಲೇ ಇನ್​​ಸೈಡ್​ ಎಡ್ಜ್​ಗೆ ಬಲಿಯಾದರು.

15 ಓವರ್ ವೇಳೆಗೆ ಭಾರತ 66 ರನ್​​ಗೆ 4 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಭಾರತ ಪಾಕ್​ಗೆ ಸ್ಪರ್ಧಾತ್ಮಕ ಗುರಿಯನ್ನಾದರೂ ನೀಡುತ್ತದೆಯೇ ಎಂಬ ಅನುಮಾನ ಕಾಡುತ್ತಿತ್ತು. ಆದರೆ 5ನೇ ವಿಕೆಟ್​ಗೆ ಒಂದಾದ ಇಶಾನ್​ ಕಿಶನ್​ ಮತ್ತು ಹಾರ್ದಿಕ್​ ಜೋಡಿ ಭಾರತಕ್ಕೆ ಆಸರೆಯಾದರು. ಈ ಜೋಡಿ ತಲಾ ಅರ್ಧಶತಕ ಸಿಡಿಸುವ ಮೂಲಕ 138 ರನ್​ ಜೊತೆಯಾಟ ಆಡಿತು. ಪಾಕಿಸ್ತಾನದ ಸ್ಪಿನ್​ ಮತ್ತು ಸ್ಪೀಡ್​ ಬೌಲಿಂಗ್​ನ್ನು ತಾಳ್ಮೆಯಿಂದ ಎದುರಿಸಿದ ಕಿಶನ್​ 81 ಬಾಲ್​ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸ್​ನಿಂದ 82 ರನ್​ ಗಳಿಸಿದರು. ಉಪನಾಯಕ ಹಾರ್ದಿಕ್​ ಪಾಂಡ್ಯ 7 ಬೌಂಡರಿ ಮತ್ತು 1 ಸಿಕ್ಸ್​​ನಿಂದ 90 ಬಾಲ್​ನಲ್ಲಿ 87 ರನ್​ ಗಳಿಸಿ ವಿಕೆಟ್​ ಕೊಟ್ಟರು. ಅಭಿಮಾನಿಗಳಿಗೆ ಬೇಸರದ ವಿಷಯ ಎಂದರೆ ಇಬ್ಬರು ಆಟಗಾರರು ಶತಕ ವಂಚಿತರಾಗಿದ್ದು.

ಈ ಎರಡು ವಿಕೆಟ್​ನ ಬೆನ್ನಲ್ಲೇ ಜಡೇಜ (14) ಮತ್ತು ಶಾರ್ದೂಲ್​ ಠಾಕೂರ್​ (3) ವಿಕೆಟ್​ ಸಹ ಪತನವಾಯಿತು. ಕೊನೆಯ ಬಾಲಂಗೋಚಿಗಳಾದ ಕುಲ್​ದೀಪ್ (4)​, ಬುಮ್ರಾ ಹೆಚ್ಚು ಹೊತ್ತು ಪಾಕ್​ ವೇಗಿಗಳಿಗೆ ಸಾವಾಲೊಡ್ಡಲಿಲ್ಲ. ಬುಮ್ರಾ 3 ಬೌಂಡರಿಯನ್ನು ಯಶಸ್ವಿಯಾಗಿ ಗಳಿಸಿದರು. ಆದರೆ 48.5 ಬಾಲ್​ನಲ್ಲಿ ವಿಕೆಟ್​ ಕೊಟ್ಟಿದ್ದರಿಂದ ಭಾರತ 266ಕ್ಕೆ ಸರ್ವಪತನ ಕಂಡಿತು. ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ 4 ವಿಕೆಟ್​ ಮತ್ತು ನಸೀಮ್ ಶಾ, ಹ್ಯಾರಿಸ್ ರೌಫ್ ತಲಾ 3 ವಿಕೆಟ್​ ಪಡೆದರು.

ಇದನ್ನೂ ಓದಿ: IND vs PAK: ಟಾಸ್​ ಗೆದ್ದ ರೋಹಿತ್​ ಶರ್ಮಾ ಬ್ಯಾಟಿಂಗ್​ ಆಯ್ಕೆ.. ಬಳಗದಲ್ಲಿ ಜಡೇಜ, ಕುಲದೀಪ್ ಸ್ಪಿನ್ ಜೋಡಿ​ ​

Last Updated :Sep 2, 2023, 8:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.