ETV Bharat / sports

ಟಿ20 ವರ್ಲ್ಡ್​ಕಪ್​​​ಗೆ ನ್ಯೂಜಿಲ್ಯಾಂಡ್ ತಂಡ ಪ್ರಕಟ: 7ನೇ ಸಲ ವಿಶ್ವಕಪ್​ ಆಡಲಿರುವ ಗಪ್ಟಿಲ್​

author img

By

Published : Sep 20, 2022, 9:32 AM IST

New Zealand name squad
New Zealand name squad

2022ರ ಐಸಿಸಿ ಟಿ20 ವಿಶ್ವಕಪ್​​​ಗೋಸ್ಕರ ನ್ಯೂಜಿಲ್ಯಾಂಡ್ ತಂಡ ಪ್ರಕಟಗೊಂಡಿದೆ. ಹಿರಿಯ ಆಟಗಾರ ಮಾರ್ಟಿನ್ ಗಪ್ಟಿಲ್​ಗೆ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಸಿಕ್ಕಿದೆ.

ನ್ಯೂಜಿಲ್ಯಾಂಡ್​: ಮುಂದಿನ ತಿಂಗಳಿಂದ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್​ ಟೂರ್ನಿ​​​ಗೋಸ್ಕರ ನ್ಯೂಜಿಲ್ಯಾಂಡ್ ತಂಡ ಪ್ರಕಟವಾಗಿದೆ. 15 ಸದಸ್ಯರ ಬಳಗದಲ್ಲಿ ಅನುಭವಿ ಆಟಗಾರ ಮಾರ್ಟಿನ್ ಗಪ್ಟಿಲ್​​ಗೆ ಮಣೆ ಹಾಕಲಾಗಿದೆ. ಈ ಮೂಲಕ ಕಿವೀಸ್ ಆಟಗಾರ ವಿಶ್ವಕಪ್​​ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ನಾಥನ್​ ಮೆಕಲಮ್​ ಹಾಗೂ ರಾಸ್ ಟೇಲರ್ ಈಗಾಗಲೇ ದಾಖಲೆಯ 6ನೇ ಸಲ ವಿಶ್ವಕಪ್​​ನಲ್ಲಿ ಭಾಗಿಯಾಗಿದ್ದರು. 35 ವರ್ಷದ ಗಪ್ಟಿಲ್ ಜೊತೆಗೆ ಉದಯೋನ್ಮುಖ ಆಟಗಾರರಾದ ಫಿನ್​ ಅಲೆನ್​, ಮಿಚೆಲ್​​ ಬ್ರಾಚ್ವೆಲ್​​ಗೆ ಚೊಚ್ಚಲ ಅವಕಾಶ ದೊರೆತಿದೆ.

ವಿಶ್ವಕಪ್​ಗೆ ನ್ಯೂಜಿಲ್ಯಾಂಡ್ ತಂಡ ಹೀಗಿದೆ: ಕೇನ್​ ವಿಲಿಯಮ್ಸನ್​(ಕ್ಯಾಪ್ಟನ್​), ಫಿನ್​ ಅಲೆನ್​​, ಟ್ರೆಂಟ್​ ಬೌಲ್ಟ್​, ಮಿಚೆಲ್​​​ ಬ್ರಾಚ್ವೆಲ್​, ಮಾರ್ಕ್​ ಚಾಂಪನ್​, ಡ್ವೇನ್​ ಕಾನ್ವೆ, ಲೂಕಿ ಫರ್ಗ್ಯೂಸನ್​,ಮಾರ್ಟಿಲ್ ಗಫ್ಟಿಲ್​, ಆ್ಯಡಂ ಮಿಲ್ನೆ, ಡ್ರಾಲ್​ ಮಿಚೆಲ್​, ಜಿಮಿ ನಿಶಾಮ್​, ಗ್ಲೆನ್​​ ಫಿಲಿಪ್ಸ್​, ಮಿಚೆಲ್​ ಸ್ಯಾಂಟ್ನರ್, ಇಶ್ ಸೋಧಿ ಹಾಗೂ ಥಿಮ್ ಸೌಥಿ

ಟಿ20 ವಿಶ್ವಕಪ್​​ನಲ್ಲಿ ನ್ಯೂಜಿಲ್ಯಾಂಡ್ ತಂಡ ಅಕ್ಟೋಬರ್​ 22ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್​ ವಿರುದ್ಧ ಪಂದ್ಯವಾಡಲಿದೆ. ಪ್ರಶಸ್ತಿಗೆ ಮುತ್ತಿಕ್ಕುವ ಗುರಿಯೊಂದಿಗೆ ನ್ಯೂಜಿಲ್ಯಾಂಡ್ ತಂಡದ ನಾಯಕತ್ವವನ್ನು ಕೇನ್​ ವಿಲಿಯಮ್ಸನ್​ಗೆ ನೀಡಲಾಗಿದ್ದು, ಟಿ20ಯಲ್ಲಿ ಮೂರನೇ ಸಲ ತಂಡವನ್ನು ಅವರು ಮುನ್ನಡೆಸುವರು. ಮಾಹಿತಿ ಪ್ರಕಾರ, ಇದು ಅವರ ಕೊನೆಯ ಟಿ20 ವಿಶ್ವಕಪ್ ಆಗಿರಲಿದೆ.

ಇದನ್ನೂ ಓದಿ: ಪಂತ್​ vs ಕಾರ್ತಿಕ್: ವಿಶ್ವಕಪ್​​​ ದೃಷ್ಟಿಯಿಂದ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಯಾರಿಗೆ ಮಣೆ?

2021ರ ಟಿ20 ವಿಶ್ವಕಪ್​ ಫೈನಲ್​​ನಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಕಾಂಗರೂ ತಂಡ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಸೇರಿದಂತೆ ಬಹುತೇಕ ಎಲ್ಲ ತಂಡಗಳು ವಿಶ್ವಕಪ್​​ಗೋಸ್ಕರ ತಂಡಗಳನ್ನು ಪ್ರಕಟಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.