ETV Bharat / sports

ವೆಸ್ಟ್​ ಇಂಡೀಸ್ ವಿರುದ್ಧ ಪಾಕ್​​ ಸಂಘಟಿತ ಪ್ರದರ್ಶನ.. 2ನೇ ಏಕದಿನ ಗೆದ್ದು ಸರಣಿ ಕೈವಶ

author img

By

Published : Jun 11, 2022, 10:23 AM IST

Pakistan clinch series victory over West Indies
Pakistan clinch series victory over West Indies

ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಗೆಲುವಿನ ನಗೆ ಬೀರಿದ್ದು, ಈ ಮೂಲಕ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ.

ಮುಲ್ತಾನ್​(ಪಾಕಿಸ್ತಾನ): ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಪಾಕಿಸ್ತಾನ ಪಾರಮ್ಯ ಮೆರೆದಿದ್ದು, ಬರೋಬ್ಬರಿ 120 ರನ್​​ಗಳ ಅಂತರದಿಂದ ಗೆಲುವು ದಾಖಲು ಮಾಡಿದೆ. ಈ ಮೂಲಕ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿ ಕೈವಶ ಮಾಡಿಕೊಂಡಿದೆ.

ಮುಲ್ತಾನ್ ಕ್ರಿಕೆಟ್​ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಇಮಾಮ್ ಉಲ್​ ಹಕ್​​(72) ಹಾಗೂ ಕ್ಯಾಪ್ಟನ್ ಬಾಬರ್ ಆಜಮ್​​(77)ರನ್​​ಗಳ ನೆರವಿನಿಂದ ನಿಗದಿತ 50 ಓವರ್​​​ಗಳಲ್ಲಿ 8 ವಿಕೆಟ್​​ನಷ್ಟಕ್ಕೆ 275ರನ್​​​ಗಳಿಕೆ ಮಾಡಿತು.

ಇದನ್ನೂ ಓದಿ: ವೆಸ್ಟ್​ ಇಂಡೀಸ್​ ವಿರುದ್ಧ ಶತಕ ಸಿಡಿಸಿ ಅಬ್ಬರ, ಕಿಂಗ್​ ಕೊಹ್ಲಿ ದಾಖಲೆ ಮುರಿದ ಬಾಬರ್​ ಆಜಂ

276 ರನ್​​ಗಳ ಟಾರ್ಗೆಟ್​ ಬೆನತ್ತಿದ್ದ ವೆಸ್ಟ್ ಇಂಡೀಸ್ ತಂಡ ಪಾಕ್ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿ, ಕೇವಲ 155 ರನ್​​ ಮಾತ್ರಗಳಿಕೆ ಮಾಡಿತು. ತಂಡದ ಪರ ಬ್ರೊಕ್ಸ್​​(42) ಹಾಗೂ ಮೈರ್ಸ್​​(33) ವೈಯಕ್ತಿಕ ಗರಿಷ್ಠ ಸ್ಕೋರ್​ ಆಗಿತ್ತು. ಪಾಕಿಸ್ತಾನದ ಪರ ಬೌಲಿಂಗ್​ನಲ್ಲಿ ಮಿಂಚು ಹರಿಸಿದ ಮೊಹಮ್ಮದ್ ನವಾಜ್​​​ 4 ವಿಕೆಟ್​, ಮೊಹಮ್ಮದ್ ವಾಸೀಂ 3 ವಿಕೆಟ್​, ಸಹ್ಬಾದ್​ ಖಾನ್ 2 ವಿಕೆಟ್​ ಪಡೆದರೆ, ಶಾಹೀನ್ ಆಫ್ರಿದಿ 1 ವಿಕೆಟ್ ಕಿತ್ತರು.

ಪಾಕ್ ಕ್ಯಾಪ್ಟನ್ ಬಾಬರ್ ದಾಖಲೆ: ಸಿಮೀತ್ ಓವರ್​​ಗಳ ಕ್ರಿಕೆಟ್​ನಲ್ಲಿ ಮೇಲಿಂದ ಮೇಲೆ ಹೊಸ ದಾಖಲೆ ಸೃಷ್ಟಿ ಮಾಡುತ್ತಿರುವ ಪಾಕಿಸ್ತಾನದ ಕ್ಯಾಪ್ಟನ್​ ಬಾಬರ್ ಆಜಮ್​ ನಿನ್ನೆಯ ಪಂದ್ಯದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ(ಮೂರು ಮಾದರಿ) ಸತತವಾಗಿ 9 ಅರ್ಧಶತಕ ಸಿಡಿಸಿರುವ ಮೊದಲ ಬ್ಯಾಟರ್​ ಆಗಿ ಬಾಬರ್​ ಹೊರಹೊಮ್ಮಿದ್ದಾರೆ.

ಕ್ರಿಕೆಟ್​ ಜಗತ್ತಿನಲ್ಲಿ ಹೊಸ ದಾಖಲೆ ಬರೆದ ಪಾಕ್ ಕ್ಯಾಪ್ಟನ್​
ಕ್ರಿಕೆಟ್​ ಜಗತ್ತಿನಲ್ಲಿ ಹೊಸ ದಾಖಲೆ ಬರೆದ ಪಾಕ್ ಕ್ಯಾಪ್ಟನ್​

ಸಂಕ್ಷೀಪ್ತ ಸ್ಕೋರ್​​​: ಪಾಕಿಸ್ತಾನ 275/8(ಬಾಬರ್ ಆಜಮ್​ 77, ಇಮಾನ್​ ಉಲ್ ಹಕ್​​​ 72)

ವೆಸ್ಟ್ ಇಂಡೀಸ್​​ 155/10( ಬ್ರೊಕ್ಸ್​​ 42, ಮೈರ್ಸ್​​ 33)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.