ETV Bharat / sports

ಟಿ20 ವಿಶ್ವಕಪ್‌ಗೆ ಆಯ್ಕೆಯಾಗದಿರುವುದು ನೋವಿನ ಸಂಗತಿ, ಆದರೂ ನಾನು ಬಿಟ್ಟುಕೊಡುವುದಿಲ್ಲ: ಶಾರ್ದೂಲ್

author img

By

Published : Oct 8, 2022, 10:58 PM IST

ಚಹರ್​ ಜಾಗಕ್ಕೆ ಪರ್ಯಾಯ ಆಟಗಾರನಾಗಿ ಆಯ್ಕೆ ಮಾಡಿದರೆ ತಂಡದಲ್ಲಿ ಆಡಲು ಸಿದ್ಧನಿದ್ದೇನೆ ಎಂದು ರಾಂಚಿಯಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯದ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಶಾರ್ದೂಲ್​ ಹೇಳಿಕೊಂಡಿದ್ದಾರೆ.

Shardul
ಶಾರ್ದೂಲ್

ರಾಂಚಿ: ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಲುಪಿದ್ದು, ಅಭ್ಯಾಸವನ್ನೂ ಆರಂಭಿಸಿದೆ. ಭಾರತದ ವೇಗಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಟಿ 20 ವಿಶ್ವಕಪ್‌ಗೆ ಆಯ್ಕೆಯಾಗದಿರುವುದು ನಿರಾಶೆ ಆಗಿದೆ. ಮುಂಬರುವ ಪಂದ್ಯಗಳಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ನಾನಿನ್ನೂ ಸಾಕಷ್ಟು ಕ್ರಿಕೆಟ್​ ಆಡುವುದು ಬಾಕಿ ಇದೆ ಎಂದಿದ್ದಾರೆ.

ಆಲ್​ ರೌಡರ್​ ಹಾರ್ದಿಕ್​ ಪಾಂಡ್ಯ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾಗ ಶಾರ್ದೂಲ್ ಭಾರತ ಟಿ 20ಯಲ್ಲಿ ಸ್ಥಾನ ಲಭಿಸಿತ್ತು. ಆದರೆ ಪ್ರತಿ ಪಂದ್ಯಗಳಲ್ಲಿ ಸರಾಸರಿ ಓವರ್‌ಗೆ 9.15 ರನ್‌ಗಳನ್ನು ಬಿಟ್ಟುಕೊಟ್ಟಿದ್ದರಿಂದ ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.

ರಾಂಚಿಯಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯದ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾರ್ದೂಲ್,' ಸಂದೇಹ ಇಲ್ಲ, ನಾನು ವಿಶ್ವಕಪ್ ಗೆ ಆಯ್ಕೆ ಆಗದಿರುವ ಬಗ್ಗೆ ನನಗೆ ಬೇಸರ ಇದೆ. ವಿಶ್ವಕಪ್​ನಲ್ಲಿ ಆಡುವುದು ಪ್ರತಿಯೊಬ್ಬ ಆಟಗಾರನ ಕನಸು. ಈ ಬಾರಿ ಆಯ್ಕೆ ಆಗದಿದ್ದರೂ ಮುಂದಿನ ಬಾರಿ ನಡೆಯುವ ಏಕದಿನ ವಿಶ್ವ ಕಪ್​ನಲ್ಲಿ ಸ್ಥಾನ ಪಡೆಯಲು ತಯಾರಾಗುತ್ತೇನೆ' ಎಂದು ಹೇಳಿದ್ದಾರೆ.

ಈ ವೇಳೆ ಗಾಯದ ಸಮಸ್ಯೆ ಟೀಂ ಇಂಡಿಯಾಕ್ಕೆ ಕಾಡುತ್ತಿರುವ ಬಗ್ಗೆಯೂ ಮಾತನಾಡಿದ ಶಾರ್ದೂಲ್​, ದೀಪಕ್ ಚಹರ್ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ. ಅವರು ವಿಶ್ವಕಪ್ ಮೀಸಲು ಆಟಗಾರರಾಗಿದ್ದರು. ಗಾಯದ ಸಮಸ್ಯೆಯಿಂದ ಅವರೂ ವಿಶ್ವಕಪ್​ನಿಂದ ಹೊರಗುಳಿಯುವ ಸಾಧ್ಯತೆ ಇದೆ' ಎಂದು ಬೇಸರ ವ್ಯಕ್ತಪಡಿಸಿದರು.

ಅವಕಾಶ ಸಿಕ್ಕರೆ ನಾನು ಸಿದ್ಧ- ಠಾಕೂರ್ : ಚಹರ್ ಬದಲಿ ಶಾರ್ದೂಲ್ ಅವರ ಅವಕಾಶಗಳ ಬಗ್ಗೆ ಕೇಳಿದಾಗ, ಯಾರಾದರೂ ಗಾಯಗೊಂಡರೆ, ಅವರ ಸ್ಥಾನಕ್ಕೆ ಯಾವುದೇ ಆಟಗಾರ ಬರಬಹುದು. ಅವಕಾಶ ಸಿಕ್ಕಾಗಲೆಲ್ಲಾ ನಮ್ಮ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕು. ಅವಕಾಶ ಸಿಕ್ಕರೆ ನಾನು ಮಾನಸಿಕವಾಗಿ ಸಿದ್ಧನಾಗಿದ್ದೇನೆ' ಎಂದರು.

ಕೆಳ ಕ್ರಮಾಂಕದಲ್ಲೂ ಬ್ಯಾಟಿಂಗ್​ ಪ್ರಾಬಲ್ಯ ಅಗತ್ಯ : ದಕ್ಷಿಣ ಆಫ್ರಿಕಾದ ಎದುರು ಶಾರ್ದೂಲ್ ಮತ್ತು ಸಂಜು​ ಸ್ಯಾಮ್ಸನ್ 66 ಎಸೆತಗಳಲ್ಲಿ 93 ರನ್‌ಗಳ ಜೊತೆಯಾಟ ಮಾಡಿದ್ದರು. ಅವರ ಅಭಿಪ್ರಾಯದಂತೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡಗಳಂತೆ ಕೆಳ ಕ್ರಮಾಂಕದಲ್ಲೂ ಬ್ಯಾಟ್​ ಬೀಸುವ ಅವಶ್ಯಕತೆ ಇದೆ. ಹೀಗಾಗಿ ಕೊನೆಯ 10, 20 ರನ್​ಗಳನ್ನು ಕಲೆ ಹಾಕುವ ರೀತಿಯಲ್ಲಿ ಕೊನೆಯ ಆಟಗಾರರು ಸಿದ್ಧರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ: ಚಹರ್ ಬದಲಿಗೆ ವಾಷಿಂಗ್ಟನ್​​ ಸುಂದರ್​​​​​ ಇನ್​​​


ETV Bharat Logo

Copyright © 2024 Ushodaya Enterprises Pvt. Ltd., All Rights Reserved.