ETV Bharat / sports

ಭಾರತ vs ಆಸ್ಟ್ರೇಲಿಯಾ ಸರಣಿ: ಕಾಂಗರೂ ತಂಡದಿಂದ ಮಾರ್ಷ್​, ಸ್ಟಾರ್ಕ್​, ಸ್ಟೋಯ್ನಿಸ್​ ಔಟ್​​

author img

By

Published : Sep 14, 2022, 2:25 PM IST

India tour of Australia
India tour of Australia

ಟಿ20 ವಿಶ್ವಕಪ್ ಟೂರ್ನಾಮೆಂಟ್​​ಗೂ ಮುಂಚಿತವಾಗಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಈ ಸರಣಿಗೋಸ್ಕರ ಕಾಂಗರೂ ತಂಡದ ಪ್ರಮುಖ ಪ್ಲೇಯರ್ಸ್ ಗಾಯದಿಂದ ಹೊರಬಿದ್ದಿದ್ದಾರೆ.

ಮೆಲ್ಬೋರ್ನ್​(ಆಸ್ಟ್ರೇಲಿಯಾ): ಸೆಪ್ಟೆಂಬರ್​ 20ರಿಂದ ಆರಂಭಗೊಳ್ಳಲಿರುವ ಟಿಂ ಇಂಡಿಯಾ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ ಈಗಾಗಲೇ ಪ್ರಕಟಗೊಂಡಿದೆ. ಆದರೆ, ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿ ವೇಳೆ ಗಾಯಗೊಂಡಿರುವ ಮೂವರು ಪ್ರಮುಖ ಪ್ಲೇಯರ್ ಇದೀಗ ಮಹತ್ವದ ಸರಣಿಯಿಂದ ಹೊರಬಿದ್ದಿದ್ದಾರೆ.

ತಂಡದ ಪ್ರಮುಖ ಆಟಗಾರರಾದ ಮಿಚೆಲ್ ಮಾರ್ಷ್​, ಮಿಚೆಲ್​ ಸ್ಟಾರ್ಕ್​ ಹಾಗೂ ಮಾರ್ಕಸ್ ಸ್ಟೋಯ್ನಿಸ್​​ ಸರಣಿಯಿಂದ ಹೊರಗುಳಿಯಲಿದ್ದಾರೆಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ಹಂಚಿಕೊಂಡಿದೆ. ಮಿಚೆಲ್​ ಸ್ಟಾರ್ಕ್​ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದು, ಮಾರ್ಷ್​ ಹಾಗೂ ಸ್ಟೋಯ್ನಿಸ್ ಕ್ರಮವಾಗಿ ಪಾದದ ಸಮಸ್ಯೆಗೊಳಗಾಗಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ಮೂವರು ಪ್ಲೇಯರ್ಸ್​​ಗೆ ವಿಶ್ರಾಂತಿ ನೀಡಲಾಗಿದೆ.

ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್​ ಈಗಾಗಲೇ ಈ ಟೂರ್ನಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇದೀಗ ಮತ್ತೆ ಮೂವರು ಪ್ಲೇಯರ್ಸ್​ ಹೊರಗುಳಿಯತ್ತಿರುವ ಕಾರಣ, ತಂಡ ಮತ್ತಷ್ಟು ಸಂಕಷ್ಟಕ್ಕೊಳಗಾಗಿದೆ. ಇದೀಗ ಬದಲಿ ಆಟಗಾರರಾಗಿ ನಾಥನ್ ಎಲ್ಲಿಸ್, ಡೇನಿಯಲ್​ ಸ್ಯಾಮ್ಸ್​ ಹಾಗೂ ಸೀನ್​ ಅಬಾಟ್​ ತಂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ICC T20 World Cup.. ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಜೊತೆ ಸೆಣಸಾಡಲಿದೆ ಭಾರತ

ಆಸ್ಟ್ರೇಲಿಯಾ ತಂಡ ಆತಿಥೇಯ ಭಾರತದ ವಿರುದ್ಧ ಸೆಪ್ಟೆಂಬರ್​ 20ರಂದು ಮೊಹಾಲಿ, ಸೆಪ್ಟೆಂಬರ್​ 23ರಂದು ನಾಗ್ಪುರ್​ದಲ್ಲಿ ಟಿ20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ತದನಂತರ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್​ ಟೂರ್ನಾಮೆಂಟ್ ನಡೆಯಲಿದೆ. ಮೂರು ಟೂರ್ನಿಗಳಿಗೋಸ್ಕರ ಈಗಾಗಲೇ ಟೀಂ ಇಂಡಿಯಾ ಪ್ರಕಟಗೊಂಡಿದೆ.

ಆಸ್ಟ್ರೇಲಿಯಾ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯಾ, ಆರ್. ಅಶ್ವಿನ್, ಯಜುವೇಂದ್ರ ಚಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಮಹಮ್ಮದ್. ಶಮಿ, ಹರ್ಷಲ್ ಪಟೇಲ್, ದೀಪಕ್ ಚಹರ್, ಜಸ್ಪ್ರೀತ್ ಬೂಮ್ರಾ

ಟೀಂ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಸರಣಿ: ಸೆಪ್ಟೆಂಬರ್ 20, 1ನೇ ಟಿ20 (ಮೊಹಾಲಿ)

ಸೆಪ್ಟೆಂಬರ್ 23, 2ನೇ ಟಿ20 (ನಾಗ್ಪುರ)

ಸೆಪ್ಟೆಂಬರ್ 25, 3ನೇ ಟಿ20 (ಹೈದರಾಬಾದ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.