ETV Bharat / sports

ICC T20 World Cup.. ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಜೊತೆ ಸೆಣಸಾಡಲಿದೆ ಭಾರತ

author img

By

Published : Sep 8, 2022, 6:03 PM IST

India to face Australia, New Zealand in warm-up fixtures of ICC T20 World Cup
ಐಸಿಸಿ ಟಿ20 ವಿಶ್ವಕಪ್‌ .. ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ,ನ್ಯೂಜಿಲೆಂಡ್ ಜೊತೆ ಸೆಣಸಾಡಲಿದೆ ಭಾರತ

ಐಸಿಸಿಯು ಟಿ20 ವಿಶ್ವಕಪ್ ನಲ್ಲಿ ಭಾಗವಹಿಸುವ 16 ತಂಡಗಳ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡದೊಂದಿಗೆ ಸೆಣಸಾಡಲಿದೆ.

ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಮುಂಬರುವ ಟಿ 20 ವಿಶ್ವಕಪ್ ನಲ್ಲಿ ಭಾಗವಹಿಸುವ 16 ತಂಡಗಳ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಭಾರತವು ಕ್ರಮವಾಗಿ ಅ.17 ಮತ್ತು ಅ.19 ರಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಬ್ರಿಸ್ಬೇನ್‌ನ ಗಬ್ಬಾದಲ್ಲಿ ತನ್ನ ಎರಡೂ ಅಭ್ಯಾಸ ಪಂದ್ಯಗಳನ್ನು ಆಡಲಿದೆ ಎಂದು ತಿಳಿಸಿದೆ.

ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ : ಅ.10 ರಿಂದ 13ರ ವರೆಗೆ ನಡೆಯುವ ಮೊದಲ ಸುತ್ತಿನ ಅಭ್ಯಾಸ ಪಂದ್ಯಗಳು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಬಳಿಕ ನಡೆಯುವ ಸೂಪರ್ 12 ತಂಡಗಳ ಪಂದ್ಯಾವಳಿಯು ಬ್ರಿಸ್ಬೇನ್‌ನ ಗಬ್ಬಾ ಮತ್ತು ಅಲನ್ ಬಾರ್ಡರ್ ಫೀಲ್ಡ್ ನಲ್ಲಿ ಅಕ್ಟೋಬರ್ 17ರಿಂದ 19 ರವರೆಗೆ ನಡೆಯಲಿದೆ. ಮೊದಲ ಅಭ್ಯಾಸ ಪಂದ್ಯವು ಎರಡು ಬಾರಿ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ಅ. 10 ರಂದು ಜಂಕ್ಷನ್ ಓವಲ್‌ನಲ್ಲಿ ನಡೆಯಲಿದೆ. ಅ.18 ರಂದು ಪಾಕಿಸ್ತಾನ ಮತ್ತು ಇಂಗ್ಲೆಂಡ್ ಗಬ್ಬಾದಲ್ಲಿ ಸೆಣಸಾಡಲಿವೆ.

2014 ರಲ್ಲಿ ಚಾಂಪಿಯನ್ ಆಗಿದ್ದ ಶ್ರೀಲಂಕಾ, ಜಿಂಬಾಬ್ವೆ ಮತ್ತು ಐರ್ಲೆಂಡ್ ವಿರುದ್ಧ ಕ್ರಮವಾಗಿ ಅ.10 ಮತ್ತು ಅ.13 ರಂದು ಎಂಸಿಜಿಯಲ್ಲಿ ಆಡಲಿದೆ. ಅಭ್ಯಾಸ ಪಂದ್ಯಗಳ ವೀಕ್ಷಣೆಗೆ ಜನರಿಗೆ ಅವಕಾಶವಿಲ್ಲ ಎಂದು ಐಸಿಸಿ ತಿಳಿಸಿದೆ.

ಅ.16 ಐಸಿಸಿ ಟಿ20 ವಿಶ್ವಕಪ್ ಆರಂಭ : ಐಸಿಸಿ ಪುರುಷರ ಟಿ20 ವಿಶ್ವಕಪ್ ಅಕ್ಟೋಬರ್ 16 ರಂದು ಪ್ರಾರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ನಮೀಬಿಯಾ ಜಿಲಾಂಗ್‌ನ ಕಾರ್ಡಿನಿಯಾ ಪಾರ್ಕ್ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ.

ಇದನ್ನೂ ಓದಿ : ಏಷ್ಯಾ ಕಪ್​ ತಂಡದಲ್ಲಿ ವೇಗಿ ಮೊಹಮದ್​ ಶಮಿ ಯಾಕಿಲ್ಲ.. ತಂಡದ ಆಯ್ಕೆ ಬಗ್ಗೆ ರವಿಶಾಸ್ತ್ರಿ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.