ETV Bharat / sports

Ranji Trophy: ಜಮ್ಮು ಕಾಶ್ಮೀರದ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ಕರುಣ್ ನಾಯರ್

author img

By

Published : Feb 24, 2022, 3:10 PM IST

Karnataka batter Karun nair hist his 15th first class century
ಕರುಣ್ ನಾಯರ್ ಶತಕ

ನಾಯರ್​ 175 ಎಸೆತಗಳಲ್ಲಿ 15 ಬೌಂಡರಿ ಮತ್ತು ಒಂದು ಸಿಕ್ಸರ್​ ಸಹಿತ ತಮ್ಮ ವೃತ್ತಿ ಜೀವನದ 15ನೇ ಪ್ರಥಮ ದರ್ಜೆ ಶತಕ ಪೂರೈಸಿದ್ದಾರೆ.

ಚೆನ್ನೈ: ಜಮ್ಮು ಕಾಶ್ಮೀರದ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿಯ ಪಂದ್ಯದಲ್ಲಿ ಕರ್ನಾಟಕ ತಂಡದ ಅನುಭವಿ ಬ್ಯಾಟರ್​ ಕರುಣ್ ನಾಯರ್​ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ನಾಯರ್​ 175 ಎಸೆತಗಳಲ್ಲಿ 15 ಬೌಂಡರಿ ಮತ್ತು ಒಂದು ಸಿಕ್ಸರ್​ ಸಹಿತ ತಮ್ಮ ವೃತ್ತಿ ಜೀವನದ 15ನೇ ಪ್ರಥಮ ದರ್ಜೆ ಶತಕ ಪೂರೈಸಿದ್ದಾರೆ.

ಕರುಣ್​ರನ್ನು ಬಿಟ್ಟರೆ ಕರ್ನಾಟಕದ ಬೇರೇ ಯಾವ ಬ್ಯಾಟರ್​ಗಳು ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಮಯಾಂಕ್​ ಅಗರ್ವಾಲ್​ ರಾಷ್ಟ್ರೀಯ ತಂಡದ ಪರ ಆಡುವುದಕ್ಕೆ ತೆರಳಿರುವುದರಿಂದ ರವಿ ಕುಮಾರ್ ಸಮರ್ಥ್​ ಇಂದು ಇನ್ನಿಂಗ್ಸ್ ಆರಂಭಿಸಿ 45 ರನ್​ಗಳಿಸಿದರು.

ಇವರಿಬ್ಬರನ್ನು ಹೊರತುಪಡಿಸಿದರೆ ಬೇರೆ ಯಾವ ಬ್ಯಾಟರ್​​ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಕಳೆದ ಪಂದ್ಯಗಳ ಶತಕ ವೀರರಾದ ಮನೀಶ್​ ಪಾಂಡೆ(1) ಮತ್ತು ಕೆವಿ ಸಿದ್ಧಾರ್ಥ್​(16) ಉಮ್ರಾನ್ ಮಲಿಕ್​ಗೆ ವಿಕೆಟ್​ ಒಪ್ಪಿಸಿದರು. ಯುವ ಬ್ಯಾಟರ್​ ದೇವದತ್​ ಪಡಿಕ್ಕಲ್​ 8, ಬಿಆರ್ ಶರತ್​ 11 ರನ್​ಗಳಿಸಿಗೆ ವಿಕೆಟ್​ ಒಪ್ಪಿಸಿದ್ದಾರೆ.

ಪ್ರಸ್ತುತ ಟೀ ವಿರಾಮಕ್ಕೆ ಕರ್ನಾಟಕ 5 ವಿಕೆಟ್​ ಕಳೆದುಕೊಂಡು 190 ರನ್​ಗಳಿಸಿದೆ. ಕರುಣ್ ನಾಯಕರ್​ ಅಜೇಯ 107 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಇದನ್ನೂ ಓದಿ:ಆಯ್ಕೆಯ ಬಗ್ಗೆ ಚಿಂತೆ ಬಿಡಿ, ನೀವು ರಣಜಿಯಲ್ಲಿ ರನ್ ಗಳಿಸಿ : ಯುವ ಪ್ರತಿಭೆಗಳಿಗೆ ರೋಹಿತ್ ಪಾಠ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.