ETV Bharat / sports

IPL ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆವೇಶ್ ಖಾನ್​... ಬರೋಬ್ಬರಿ ₹10 ಕೋಟಿ ಮೊತ್ತಕ್ಕೆ ಅನ್​​ಕ್ಯಾಪ್ಡ್​ ಪ್ಲೇಯರ್ ಬಿಕರಿ!

author img

By

Published : Feb 13, 2022, 1:04 AM IST

Fast bowler Avesh Khan
Fast bowler Avesh Khan

14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಪ್ರತಿಭಾನ್ವಿತ ವೇಗದ ಬೌಲರ್ ಆವೇಶ್ ಖಾನ್​ಗೆ ಈ ಸಲದ ಮೆಗಾ ಹರಾಜು ವೇಳೆ ಜಾಕ್​ಪಾಟ್​ ಹೊಡೆದಿದೆ.

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್​​ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಯಂಗ್ ಪ್ಲೇಯರ್ಸ್​ಗೆ ಜಾಕ್​ಪಾಟ್​ ಹೊಡೆದಿದ್ದು, ಕೋಟ್ಯಂತರ ರೂ. ನೀಡಿ ವಿವಿಧ ಫ್ರಾಂಚೈಸಿಗಳು ಖರೀದಿ ಮಾಡಿವೆ. ಈ ಸಾಲಿನಲ್ಲಿ ಅನ್​ಕ್ಯಾಪ್ಡ್​​ ಪ್ಲೇಯರ್​ ಆವೇಶ್ ಖಾನ್​ ಸಹ ಸೇರಿಕೊಂಡಿದ್ದು, ಯುವ ವೇಗದ ಬೌಲರ್​ಗೆ ಬರೋಬ್ಬರಿ 10 ಕೋಟಿ ರೂ. ನೀಡಿ ಖರೀದಿ ಮಾಡಲಾಗಿದೆ.

ಕಳೆದ ಎರಡು ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರ ಕಣಕ್ಕಿಳಿದು ಮಿಂಚು ಹರಿಸಿರುವ ವೇಗದ ಬೌಲರ್​ ಆವೇಶ್ ಖಾನ್​ ಈ ಸಲದ ಐಪಿಎಲ್ ಹರಾಜಿನಲ್ಲಿ 10 ಕೋಟಿ ರೂಪಾಯಿಗೆ ಲಕ್ನೋ ತಂಡಕ್ಕೆ ಸೇಲ್​ ಆಗಿದ್ದಾರೆ. ಈ ಮೂಲಕ ಐಪಿಎಲ್​ ಇತಿಹಾಸದಲ್ಲೇ ಅತಿ ಹೆಚ್ಚಿನ ಬೆಲೆಗೆ ಬಿಕರಿಯಾಗಿರುವ ಅನ್​​ಸೋಲ್ಡ್​ ಪ್ಲೇಯರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 25 ವರ್ಷದ ಆವೇಶ್​ಖಾನ್​ಗೆ ಡೆಲ್ಲಿ ತಂಡ ರಿಟೈನ್ ಮಾಡಿಕೊಂಡಿರಲಿಲ್ಲ. 20 ಲಕ್ಷ ಮೂಲ ಬೆಲೆ ಹೊಂದಿದ್ದ ಈ ಪ್ಲೇಯರ್​​ ಈಗಾಗಲೇ ಈ ಹಿಂದಿನ ಐಎಪಿಎಲ್​ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಈ ಬೌಲರ್​​ ಖರೀದಿ ಮಾಡಲು ವಿವಿಧ ಫ್ರಾಂಚೈಸಿಗಳು ಪೈಪೋಟಿ ನಡೆಸಿದವು.

ಇದನ್ನೂ ಓದಿರಿ: ಮೂಲ ಬೆಲೆಗಿಂತಲೂ 22 ಪಟ್ಟು ಅಧಿಕ ಮೊತ್ತಕ್ಕೆ ಬಿಕರಿಯಾದ ಅನ್​​ಕ್ಯಾಪ್ಡ್​​ ಶಾರುಖ್ ಖಾನ್​!

ಕಳೆದ ಐಪಿಎಲ್​​ನಲ್ಲಿ ತಾವಾಡಿರುವ 16 ಪಂದ್ಯಗಳಿಂದ 24 ವಿಕೆಟ್ ಪಡೆದುಕೊಂಡಿದ್ದ ಆವೇಶ್ ಖಾನ್​, ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು. ಗಮನಾರ್ಹ ಪ್ರದರ್ಶನ ನೀಡಿದ್ದರಿಂದಲೇ ಈ ಪ್ಲೇಯರ್​ಗೆ ಅದೃಷ್ಟ ಲಕ್ಷ್ಮೀ ಒಲಿದು ಬಂದಿದ್ದಾಳೆ.

ಕನ್ನಡಿಗ ಕೆ.ಗೌತಮ್ ದಾಖಲೆ ಮುರಿದ ಆವೇಶ್ ಖಾನ್​

ಈ ಹಿಂದೆ 2021ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಕನ್ನಡಿಗ ಕೃಷ್ಣಪ್ಪ ಗೌತಮ್​ಗೆ ದಾಖಲೆಯ 9.25 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಹಣ ನೀಡಿ, ಅನ್​ಸೋಲ್ಡ್ ಪ್ಲೇಯರ್​ಗೆ ಖರೀದಿ ಮಾಡಿತ್ತು. ಆದರೆ, ಇದೀಗ ಈ ದಾಖಲೆ ಬ್ರೇಕ್​ ಆಗಿದೆ. ಉಳಿದಂತೆ ಆಲ್​ರೌಂಡರ್ ಶಾರುಖ್​ ಖಾನ್​ಗೆ ಪಂಜಾಬ್ ತಂಡ 9 ಕೋಟಿ ರೂ. ನೀಡಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.