ETV Bharat / sports

ತಮ್ಮ ರೆಸ್ಟೋರೆಂಟ್​ಗೆ ಆರ್‌ಸಿಬಿ ಆಟಗಾರರನ್ನು ಆಹ್ವಾನಿಸಿ ಅದ್ಧೂರಿ ಔತಣ ನೀಡಿದ ಕಿಂಗ್​ ಕೊಹ್ಲಿ

author img

By

Published : May 4, 2023, 7:11 PM IST

Virat Kohli
ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಅವರ ರೆಸ್ಟೋರೆಂಟ್ ​ನಲ್ಲಿ ಆರ್​ಸಿಬಿ ಆಟಗಾರರು ಸಖತ್​ ಮೋಜು ಮಸ್ತಿ ಮಾಡಿದ್ದಾರೆ.

ನವದೆಹಲಿ : ಸ್ಟಾರ್​ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ತಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತಮ್ಮ ರೆಸ್ಟೋರೆಂಟ್​ಗೆ ಆಹ್ವಾನಿಸಿ ಅದ್ಧೂರಿ ಔತಣ ನೀಡಿದ್ದಾರೆ. ಮುಂದಿನ ಪಂದ್ಯಕ್ಕೂ ಮುನ್ನ ಆರ್​ಸಿಬಿ ತಂಡದ ಎಲ್ಲ ಆಟಗಾರರು ಕೊಹ್ಲಿ ಅವರು ಒನ್​8 ರೆಸ್ಟೋರೆಂಟ್​ನಲ್ಲಿ ಸಖತ್ ಮೋಜು ಮಸ್ತಿ ಮಾಡಿದ್ದಾರೆ. ರೆಸ್ಟೊರೆಂಟ್‌ನಲ್ಲಿ ಊಟ ಮುಗಿದ ಬಳಿಕ ತಂಡದ ನಾಲ್ವರು ಆಟಗಾರರು ತಮ್ಮ ಚಿತ್ರಗಳನ್ನು ಹಂಚಿಕೊಂಡು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Post shared by Mohammad Siraj on his social media
ಮೊಹಮ್ಮದ್ ಸಿರಾಜ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಸ್ಟ್​

ಇದನ್ನೂ ಓದಿ : ಲಕ್ನೋ ತಂಡಕ್ಕೆ ತವರಿನಲ್ಲೇ ಶಾಕ್ ಕೊಟ್ಟ ಆರ್​ಸಿಬಿ: ಫೋಟೋಗಳಲ್ಲಿ ಪಂದ್ಯದ ಹೈಲೈಟ್ಸ್​ ನೋಡಿ..

ನಿನ್ನೆ (ಬುಧುವಾರ) ರಾತ್ರಿ ಆರ್​ಸಿಬಿ ತಂಡ ದೆಹಲಿಗೆ ಆಗಮಿಸಿದ್ದು, ಬಳಿಕ ವಿರಾಟ್ ಕೊಹ್ಲಿ ಇಡೀ ತಂಡವನ್ನು ತಮ್ಮ ರೆಸ್ಟೋರೆಂಟ್‌ಗೆ ಆಹ್ವಾನಿಸಿದ್ದು, ಆಟಗಾರರಿಗಾಗಿ ಏರ್ಪಡಿಸಿದ ರಸದೌತಣವನ್ನು ಸವಿದು ಎಲ್ಲರೂ ಸಂತೋಷಗೊಂಡಿದ್ದಾರೆ. ಈ ಸಂದರ್ಭದಲ್ಲಿ, ಆರ್​ಸಿಬಿ ಸ್ಟಾರ್​ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕರಣ್ ಶರ್ಮಾ, ವೇಯ್ನ್ ಪಾರ್ನೆಲ್ ಸೇರಿದಂತೆ ಸಿದ್ಧಾರ್ಥ್ ಕೌಲ್ ಜೊತೆಗಿರುವ ಫೋಟೊವೊಂದನ್ನು ಹಂಚಿಕೊಂಡಿದ್ದು, " ಡಿನ್ನರ್ ಕ್ಲಾಸ್​ ಥ್ಯಾಂಕ್ಸ್​ ವಿರಾಟ್​ ಭಾಯ್ " ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ನಾವು ನೋಡೋದೆಲ್ಲ ದೃಷ್ಟಿಕೋನವಷ್ಟೇ, ಸತ್ಯವಲ್ಲ: ವಿರಾಟ್​ ಕೊಹ್ಲಿ ಮಾರ್ಮಿಕ ಪೋಸ್ಟ್​

ಮುಂದಿನ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದ ಆರ್​ಸಿಬಿ ಇದೇ ಶನಿವಾರ 6 ರಂದು ಆಡಲಿದ್ದು, ಇದಕ್ಕಾಗಿ ಆರ್​ಸಿಬಿ ದೆಹಲಿ ತಲುಪಿದೆ. ಲಕ್ನೋದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿದ ಆರ್​ಸಿಬಿ ಭಾರಿ ಉತ್ಸಾಹದಲ್ಲಿದೆ. ಆರ್​ಸಿಬಿ ಈವರೆಗೆ 9 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 5 ಪಂದ್ಯಗಳನ್ನು ಗೆದ್ದು, 4 ರಲ್ಲಿ ಸೋಲಿನ ಕಹಿ ಕಂಡಿದೆ. ಈ ಮೂಲಕ ಒಟ್ಟು 10 ಅಂಕ ಗಳಿಸಿದೆ. ಡೆಲ್ಲಿ ವಿರುದ್ದ ಪಂದ್ಯವನ್ನು ಗೆಲ್ಲುವ ಮೂಲಕ 5 ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಮುಂದಿನ ಪಂದ್ಯ ಗೆಲ್ಲುವ ಮೂಲಕ ಆರ್​ಸಿಬಿ ಅಗ್ರಸ್ಥಾನದಲ್ಲಿರುವ ಎರಡು ತಂಡಗಳ ಸಾಲಿನಲ್ಲಿ ಸೇರ್ಪಡೆಗೊಳ್ಳಲು ಕಾತರತೆ ಹೊಂದಿದೆ. ಅದಕ್ಕಾಗಿಯೇ ಆರ್​ಸಿಬಿ ಆಡಗಾರರು ಮೈದಾನದಲ್ಲಿ ಅಭ್ಯಾಸಕ್ಕೂ ಮುನ್ನ ರಿಲೀಪ್​ ಮೂಡ್​ಗೆ ಜಾರಿದ್ದಾರೆ.

ಭಾರತ ತಂಡದ ಸ್ಟಾರ್​ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮದೇ ಆದ ಆನೇಕ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ದೇಶದ ಇತರ ಪ್ರಮುಖ ನಗರಗಳಲ್ಲಿ ' ಒನ್​8 ಎಂಬ ಹೆಸರಿನಿಂದ ರೆಸ್ಟೋರೆಂಟ್​ಗಳನ್ನು ನಡೆಸುತ್ತಿದ್ದಾರೆ. ವಿರಾಟ್​ ಕೊಹ್ಲಿ ಆನೇಕ ಬಾರಿ ಹೀಗೆ ತಂಡದ ಆಟಗಾರರನ್ನು ತಮ್ಮ ರೆಸ್ಟೋರೆಂಟ್​ಗೆ ಆಹ್ವಾನಿಸಿ ಹಲವು ಪಾರ್ಟಿಗಳನ್ನು ಮಾಡಿದ್ದಾರೆ.

ಆಟಗಾರರಿಗೆ ಪಾರ್ಟಿ ಕೊಡುವ ಮೂಲಕ ಮುಂದಿನ ಪಂದ್ಯಗಳಲ್ಲಿ ಯಾವುದೇ ಒತ್ತಡ ಇಲ್ಲದೇ ಆಟ ಆಡುವ ಮೂಲಕ ಉತ್ತಮ ಫಲಿತಾಂಶ ಪಡೆಯುವುದು ಕೊಹ್ಲಿ ಲೆಕ್ಕಾಚಾರವಾಗಿರಬಹುದು.

ಇದನ್ನೂ ಓದಿ : ವಿರಾಟ್​ - ಗಂಭೀರ್​ ವಾಗ್ವಾದ: ಜಾಗೃತಿ ಮೂಡಿಸಿದ ಹುಬ್ಬಳ್ಳಿ ಧಾರವಾಡ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.