ETV Bharat / sports

ಸಂಜು ಸ್ಯಾಮ್ಸನ್ ಶೀಘ್ರವೇ ಭಾರತ ತಂಡದ ನಾಯಕನಾಗಲಿದ್ದಾನೆ: ಎಬಿ ಡಿವಿಲಿಯರ್ಸ್ ಭವಿಷ್ಯ

author img

By

Published : Apr 8, 2023, 7:54 AM IST

ಎಬಿ ಡಿವಿಲಿಯರ್ಸ್ ಭವಿಷ್ಯ
ಎಬಿ ಡಿವಿಲಿಯರ್ಸ್ ಭವಿಷ್ಯ

ರಾಜಸ್ಥಾನ ರಾಯಲ್ಸ್​ ತಂಡದ ನಾಯಕ ಸಂಜು ಸ್ಯಾಮ್ಸನ್​ ಅವರನ್ನು ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್​ ಹೊಗಳಿದ್ದಾರೆ. ಭಾರತ ತಂಡದಲ್ಲೂ ಪ್ರಮುಖ ಸ್ಥಾನ ಪಡೆಯಲಿದ್ದಾನೆ ಎಂದು ಭವಿಷ್ಯ ನುಡಿದಿದ್ದಾರೆ.

ಮುಂಬೈ (ಮಹಾರಾಷ್ಟ್ರ): ಆಸ್ಟ್ರೇಲಿಯಾದ ಸ್ಪಿನ್​ ದಿಗ್ಗಜ ಶೇನ್​ ವಾರ್ನ್​ರ ನೀಲಿಗಣ್ಣಿನ ಹುಡುಗನಾಗಿದ್ದ ಸಂಜು ಸ್ಯಾಮ್ಸನ್​ "ಮುಂದೊಂದು ದಿನ ಭಾರತ ತಂಡದ ಪ್ರಮುಖ ಆಟಗಾರನಾಗಲಿದ್ದಾನೆ" ಎಂದು ಭವಿಷ್ಯ ನುಡಿದಿದ್ದರು. ಸ್ಪಿನ್​ ದಂತಕಥೆಯ ಅಂದಿನ ಮಾತಿಗೆ ಮಿಸ್ಟರ್​ ಪರ್ಫೆಕ್ಟ್, 360 ಡಿಗ್ರಿ ಆಟಗಾರ ಎಬಿ ಡಿವಿಲಿಯರ್ಸ್​ ಬಲ ನೀಡುವಂತಹ ಹೇಳಿಕೆ ನೀಡಿದ್ದಾರೆ.

ಸಂಜು ಸ್ಯಾಮ್ಸನ್​ ರಾಜಸ್ಥಾನ ರಾಯಲ್ಸ್​ ತಂಡವನ್ನು ಮುನ್ನಡೆಸುತ್ತಿರುವ ರೀತಿಯನ್ನು ಹೊಗಳಿರುವ ಎಬಿಡಿ, ಈತ ಕ್ರಿಕೆಟ್​ನಲ್ಲಿ ಉತ್ತಮ ಲಯ ಮುಂದುವರಿಸಿದರೆ ಭಾರತ ತಂಡದ ನಾಯಕತ್ವ ವಹಿಸಲಿದ್ದಾನೆ ಎಂದು ಹೇಳಿದ್ದಾರೆ. ಸ್ಯಾಮ್ಸನ್​ನಲ್ಲಿನ ಶಾಂತ ಮನೋಭಾವ, ನಾಯಕತ್ವದ ಗುಣಗಳು ಈತನನ್ನು ಉನ್ನತ ಹಂತಕ್ಕೆ ಕೊಂಡೊಯ್ಯಲಿವೆ ಎಂದಿದ್ದಾರೆ.

ಕ್ರಿಕೆಟ್​ ಪಂದ್ಯದ ವೇಳೆ ಸಂಜು ಬಗ್ಗೆ ಮೆಚ್ಚುಗೆ ಮಾತನ್ನಾಡಿರುವ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ಇನ್ನು 2-3 ವರ್ಷಗಳಲ್ಲಿ ಸಂಜು ಸ್ಯಾಮ್ಸನ್​ ಭಾರತ ತಂಡದ ನಾಯಕನಾದಲ್ಲಿ ಆಶ್ಚರ್ಯ ಪಡಬೇಕಿಲ್ಲ. ಬ್ಯಾಟಿಂಗ್​ ಪ್ರದರ್ಶನವನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿದರೆ, ಆತ ತಂಡದ ಆಧಾರಸ್ತಂಭವಾಗಲಿದ್ದಾನೆ ಎಂದು ಹೇಳಿದ್ದಾರೆ.

ಸಂಜು ಸ್ಯಾಮ್ಸನ್ ಅವರ ನಾಯಕತ್ವವನ್ನು ಶ್ಲಾಘಿಸಿದ ಎಬಿ ಡಿವಿಲಿಯರ್ಸ್, ಸಂಜು ಸ್ಯಾಮ್ಸನ್ ಅದ್ಭುತ ಆಟಗಾರ. ನಾಯಕತ್ವದಲ್ಲೂ ಆತ ಉತ್ತಮ ಹಿಡಿತ ಹೊಂದಿದ್ದಾನೆ. ಯಾವುದೇ ಪರಿಸ್ಥಿತಿಯನ್ನೂ ಆತ ಶಾಂತ ರೀತಿಯಿಂದ ಎದುರಿಸುತ್ತಾನೆ. ಇದು ನಾಯಕನಿಗೆ ಇರಬೇಕಾದ ಮೊದಲ ಲಕ್ಷಣ. ಆತ ಗೊಂದಲಕ್ಕೆ ಒಳಗಾಗುವುದಿಲ್ಲ. ನಾಯಕನಾಗಿ ಆತನಲ್ಲಿನ ಒಳ್ಳೆಯ ಸಂಕೇತ ಇದಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಬಲಗೈ ಬ್ಯಾಟರ್​ ನಾಯಕನಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾನೆಂದು ನಾನು ಭಾವಿಸುತ್ತೇನೆ. ಯಾರಿಗೆ ಗೊತ್ತು, ಬಹುಶಃ ಎರಡು ಅಥವಾ ಮೂರು ವರ್ಷಗಳಲ್ಲಿ ಭಾರತ ತಂಡದ ನಾಯಕನಾದರೂ ಅಚ್ಚರಿ ಇಲ್ಲ. ದೀರ್ಘಕಾಲದವರೆಗೆ ಆತ ತಂಡವನ್ನು ಮುನ್ನಡೆಸಲೂಬಹುದು. ಮುಂಬರುವ ವರ್ಷಗಳಲ್ಲಿ ಟೀಂ ಇಂಡಿಯಾದ ಪರವಾಗಿ ಉತ್ತಮ ಪ್ರದರ್ಶನ ನೀಡಿದಲ್ಲಿ ಭಾರತ ಕಂಡ ಅತ್ಯುತ್ತಮ 'ಯುವ ಕ್ಯಾಪ್ಟನ್'ಗಳಲ್ಲಿ ಒಬ್ಬರು ಎಂದು ಸಾಬೀತುಪಡಿಸುವ ಸಾಮರ್ಥ್ಯ ಆತನಿಗಿದೆ ಎಂದು ಹೊಗಳಿದ್ದಾರೆ.

ಸಂಜು ಸ್ಯಾಮ್ಸನ್​ ಐಪಿಎಲ್ ದಾಖಲೆ: ರಾಜಸ್ಥಾನ್ ರಾಯಲ್ಸ್‌ ಪರವಾಗಿ 118 ಪಂದ್ಯಗಳಲ್ಲಿ ಆಡಿರುವ ಸ್ಯಾಮ್ಸನ್ 30.46 ರ ಸರಾಸರಿಯಲ್ಲಿ 3,138 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಮತ್ತು 18 ಅರ್ಧಶತಕಗಳನ್ನು ಗಳಿಸಿದ್ದಾರೆ. 119 ಗರಿಷ್ಠ ಸ್ಕೋರ್​. 137.99 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್​ ಬೀಸಿದ್ದಾರೆ.

ಪಂಜಾಬ್​ ಕಿಂಗ್ಸ್​ ಎದುರಿನ ಪಂದ್ಯದಲ್ಲಿ 42 ರನ್​ ಸಿಡಿಸಿದ ಸ್ಯಾಮ್ಸನ್​ ರಾಯಲ್ಸ್​ ಪರವಾಗಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎನಿಸಿಕೊಂಡರು. ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಶೇನ್​ ವಾರ್ನ್​ ಬಳಿಕ ತಂಡವನ್ನು ಫೈನಲ್​ ತಲುಪಿಸಿದ 2ನೇ ನಾಯಕ ಎಂಬ ಖ್ಯಾತಿ ಹೊಂದಿದ್ದಾರೆ. ಇದಲ್ಲದೇ ಸ್ಯಾಮ್ಸನ್​ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರವೂ ಆಡಿದ್ದಾರೆ.

ಇದಕ್ಕೂ ಮೊದಲು ಅಜಿಂಕ್ಯಾ ರಹಾನೆ ತಂಡದ ಪರ ಗರಿಷ್ಠ ರನ್​ ಬಾರಿಸಿದ ಆಟಗಾರರಾಗಿದ್ದರು. 106 ಪಂದ್ಯಗಳಲ್ಲಿ 3,098 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 21 ಅರ್ಧಶತಕಗಳನ್ನು ಗಳಿಸಿದ್ದಾರೆ. ಇವರ ಬಳಿಕ ಶೇನ್ ವ್ಯಾಟ್ಸನ್ 84 ಪಂದ್ಯಗಳಲ್ಲಿ 2 ಶತಕ ಮತ್ತು 14 ಅರ್ಧಶತಕಗಳೊಂದಿಗೆ 2,474 ರನ್, ಜೋಸ್ ಬಟ್ಲರ್ 60 ಪಂದ್ಯಗಳಲ್ಲಿ 5 ಶತಕ ಮತ್ತು 15 ಅರ್ಧಶತಕಗಳೊಂದಿಗೆ 2,377 ರನ್ ಗಳಿಸಿದ ಪ್ರಮುಖರಾಗಿದ್ದಾರೆ.

ಓದಿ: IPL 2023: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ರೋಹಿತ್​, ಮತ್ತೊಂದು ಗೆಲುವಿಗೆ ಧೋನಿ ತಂತ್ರ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.