ETV Bharat / sports

IPL 2023: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ರೋಹಿತ್​, ಮತ್ತೊಂದು ಗೆಲುವಿಗೆ ಧೋನಿ ತಂತ್ರ ಏನು?

author img

By

Published : Apr 8, 2023, 6:33 AM IST

ಬೆಂಗಳೂರು ಸೋಲು ಕಂಡಿರುವ ಮುಂಬೈ ಇಂಡಿಯನ್ಸ್​ ತವರಿನ ನೆಲದಲ್ಲಿ ಚೆನ್ನೈಯನ್ನು ಸೋಲಿಸಲು ಸಂಚುರೂಪಿಸುತ್ತಿದೆ.

Mumbai Indians vs Chennai Super Kings Preview
IPL 2023: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ರೋಹಿತ್​, ಮತ್ತೊಂದು ಗೆಲುವಿಗೆ ಧೋನಿ ತಂತ್ರ ಏನು?

ಮುಂಬೈ (ಮಹಾರಾಷ್ಟ್ರ): ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡದ ಮಾಜಿ ನಾಯಕ ಎಂ ಎಸ್​ ಧೋನಿಯ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಹಾಲಿ ನಾಯಕನ ಮುಂಬೈ ಇಂಡಿಯನ್ಸ್​ನ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್​ನ 12ನೇ ಪಂದ್ಯ ನಡೆಯಲಿದೆ. ರೋಹಿತ್​ ಪಡೆ ತವರು ನೆಲದಲ್ಲಿ ಗೆಲುವಿನ ಟ್ರ್ಯಾಕ್​ ಮರಳುವ ಪ್ರಯತ್ನದಲ್ಲಿದೆ. ಎರಡನೇ ಪಂದ್ಯ ಗೆದ್ದಿರುವ ಸಿಎಸ್​ಕೆ ಜಯವನ್ನು ಮುಂದುವರೆಸುವ ಚಿಂತನೆಯಲ್ಲಿದೆ.

  • Ready for Round 2, Chennai? Get in on the early access to ticket sales and much more! Sign up today! #WhistlePodu #Yellove

    — Chennai Super Kings (@ChennaiIPL) April 7, 2023 " class="align-text-top noRightClick twitterSection" data=" ">

ಕಳೆದ ಐಪಿಎಲ್ ಸೀಸನ್​ನಲ್ಲಿ ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡದ ಕಾರಣ ಈ ಬಾರಿ ಅದನ್ನು ಮರೆಮಾಚುವ ಪ್ರದರ್ಶನ ನೀಡಬೇಕಿದೆ. ಇಬ್ಬರು ನಾಯಕರ ಮೇಲೆ ಈ ಒತ್ತಡ ಇದ್ದು, ಅತಿ ಹೆಚ್ಚು ಕಪ್​ಗಳನ್ನು ಗೆದ್ದ ತಂಡಗಳಾಗಿದ್ದು, ವೈಫಲ್ಯ ಕಾಣುತ್ತಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ರೋಹಿತ್​ ಶರ್ಮಾ ಮತ್ತು ಮಹೇಂದ್ರ ಸಿಂಗ್​ ಧೋನಿ ಯಶಸ್ವಿ ನಾಯಕರಾಗಿದ್ದು, ತಂಡವನ್ನು ಗೆಲುವಿನ ಲಯಕ್ಕೆ ತರಬೇಕಿದೆ.

ಚೆನ್ನೈ ಸೂಪರ್ ಕಿಂಗ್ಸ್ ತನ್ನ ಎರಡು ಪಂದ್ಯಗಳಲ್ಲಿ ಒಂದು ಸೋಲು ಮತ್ತು ಒಂದು ಗೆಲುವಿನೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡ ಒಂದು ಪಂದ್ಯದಲ್ಲಿ ಒಂದು ಸೋಲಿನೊಂದಿಗೆ 9 ನೇ ಸ್ಥಾನದಲ್ಲಿದೆ. ಮುಂಬೈ ತಂಡ ರಾಯಲ್ ಚಾಲೆಂಜ್ ಬೆಂಗಳೂರು ವಿರುದ್ಧ ಆಡಿದ ಒಂದು ಪಂದ್ಯದಲ್ಲಿ ಸೋತಿದೆ. ಮುಂಬೈ ಇಂಡಿಯನ್ಸ್ ತವರು ನೆಲದಲ್ಲಿ ಗೆಲುವಿನ ಭರವಸೆಯಲ್ಲಿದೆ.

ಬೆಂಗಳೂರು ಎದುರು ಮುಂಬೈ ಇಂಡಿಯನ್ಸ್​ನ ಮಧ್ಯಮ ಕ್ರಮಾಂಕದ ತಿಲಕ್​ ವರ್ಮ ಮಾತ್ರ ಬ್ಯಾಟಿಂಗ್​ನಲ್ಲಿ ಘರ್ಜಿಸಿದ್ದು, ಮತ್ಯಾವ ಬ್ಯಾಟರ್​ಗಳು ದೊಡ್ಡ ಮೊತ್ತ ಕಲೆ ಹಾಕಲಿಲ್ಲ. ನಾಯಕ ರೋಹಿತ್​ ಶರ್ಮಾ ಮತ್ತು ಆರಂಭಿಕ ಇಶಾನ್​ ಕಿಶನ್​ ಲಯಕ್ಕೆ ಮರಳ ಬೇಕಿದೆ. ಸೂರ್ಯ ಕುಮಾರ್​ ಯಾದವ್​ ಬ್ಯಾಟ್​ನಿಂದಲೂ ರನ್​ ಬರಬೇಕಿದೆ.

ಚೆನ್ನೈ ಸೂಪರ್​​ ಕಿಂಗ್ಸ್​ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ತಂಡ ಗುಜರಾತ್​ ವಿರುದ್ಧ 5 ವಿಕೆಟ್​ಗಳ ಸೋಲನುಭವಿಸಿತು. 179 ರನ್​ ಗುರಿಯನ್ನು ಕಟ್ಟಿ ಹಾಕುವಲ್ಲಿ ಧೋನಿ ಪಡೆಯ ಬೌಲಿಂಗ್​ ವಿಫಲವಾಯಿತು. ತವರಿನಲ್ಲಿ ಲಕ್ನೋ ವಿರುದ್ಧ 217 ಗುರಿ ನೀಡಿತ್ತಾದರೂ, 12 ರನ್​ಗಳಿಂದ ಗೆದ್ದುಕೊಂಡಿತು. ಬೃಹತ್ ರನ್​ ನೀಡಿದರೂ ಚೆನ್ನೈ ಕಡಿಮೆ ಅಂತರದ ಗೆಲುವು ದಾಖಲಿಸಿರುವುದು ಬೌಲಿಂಗ್​ ವೈಫಲ್ಯ ತೋರುತ್ತದೆ.

ಮುಖಾಮುಖಿ: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕಳೆದ ಐದು ಪಂದ್ಯಗಳಲ್ಲಿ, ಮುಂಬೈ ಇಂಡಿಯನ್ಸ್ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 2 ಪಂದ್ಯಗಳನ್ನು ಗೆದ್ದಿದೆ.

ಸಂಭಾವ್ಯ ತಂಡಗಳು..: ಚೆನ್ನೈ ಸೂಪರ್​ ಕಿಂಗ್ಸ್​: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ(ವಿಕೆಟ್​ ಕೀಪರ್​/ನಾಯಕ), ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಆರ್‌ಎಸ್ ಹಂಗರ್ಗೇಕರ್

ಮಂಬೈ ಇಂಡಿಯನ್ಸ್​: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಅರ್ಷದ್ ಖಾನ್

ಇದನ್ನೂ ಓದಿ: IPLನಲ್ಲಿ ನಾಳೆ: ಚೊಚ್ಚಲ ಗೆಲುವಿಗೆ ಡೆಲ್ಲಿ ಪ್ರಯತ್ನ, ಪ್ರಯೋಗದಿಂದ ಕೈ ಸುಟ್ಟುಕೊಂಡ ಸಂಜು ನಡೆ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.