ETV Bharat / sports

IPL​ ಫೈನಲ್​ಗೆ ವರುಣ ಅಡ್ಡಿ: ಇಂದೂ ಮಳೆ ಸುರಿದರೆ ಫಲಿತಾಂಶ ನಿರ್ಣಯ ಹೀಗೆ!

author img

By

Published : May 29, 2023, 7:09 AM IST

Updated : May 29, 2023, 7:20 AM IST

ಐಪಿಎಲ್​ ಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿ
ಐಪಿಎಲ್​ ಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿ

ಐಪಿಎಲ್ ​2023 ರ ಫೈನಲ್​ ಪಂದ್ಯಕ್ಕೆ ನಿನ್ನೆ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯ ರದ್ದುಗೊಳಿಸಿ ಮೀಸಲು ದಿನವಾದ ಇಂದು ನಡೆಸಲು ತೀರ್ಮಾನಿಸಲಾಗಿದೆ.

ಅಹಮದಾಬಾದ್ (ಗುಜರಾತ್) : ಭಾನುವಾರ ಸಂಜೆ (ನಿನ್ನೆ) ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಫೈನಲ್ ಪಂದ್ಯವನ್ನು ಮಳೆಯಿಂದಾಗಿ ಇಂದಿಗೆ ಮುಂದೂಡಲಾಗಿದೆ. ನರೇಂದ್ರ ಮೋದಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದು, ಆಟಗಾರರು ಮತ್ತು ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಶೆಯಾಯಿತು.

ಟಾಸ್​ಗೂ ಅರ್ಧ ಘಂಟೆ ಮುನ್ನವೇ ಪ್ರಾರಂಭವಾದ ಮಳೆ ಮುಂದಿನ ಎರಡೂವರೆ ಗಂಟೆಗೂ ಹೆಚ್ಚು ಕಾಲ ಸುರಿಯಿತು. ನಿರಂತರವಾಗಿ ಸುರಿದ ಮಳೆಯಿಂದ ಪಂದ್ಯವನ್ನು ರದ್ದುಗೊಳಿಸಿ ಸೋಮವಾರಕ್ಕೆ (ಇಂದು) ಮುಂದೂಡಲಾಯಿತು. ರಾತ್ರಿ 10:55ಕ್ಕೆ ಈ ಘೋಷಣೆ ಮಾಡಲಾಯಿತು.

ಐಪಿಎಲ್​ ನಿಯಮವೇನು?:

  • ಪ್ರತಿ ತಂಡವು ಕನಿಷ್ಠ 5 ಓವರ್‌ ಆಡಲು ಸಾಧ್ಯವಾಗದಿದ್ದರೆ, ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆ.
  • ಕೇವಲ ಒಂದೇ ಎಸೆತವಾಗಿ ಮಳೆಯಾದಲ್ಲಿ ಮೀಸಲು ದಿನದಂದು ಅಲ್ಲಿಂದಲೇ ಪಂದ್ಯ ಮುಂದುವರಿಯುತ್ತದೆ.
  • ಟಾಸ್ ನಂತರ ಒಂದೇ ಒಂದು ಎಸೆತ ಕಾಣದೆ ಪಂದ್ಯ ರದ್ದಾದರೆ ಮೀಸಲು ದಿನದಂದು ಪಂದ್ಯ ಮತ್ತೆ ಆರಂಭವಾಗಲಿದೆ. ಆದರೆ ಮೀಸಲು ದಿನದಂದು ಪುನಃ ಟಾಸ್ ಮಾಡಬೇಕು. ಅಲ್ಲದೇ ತಂಡದ ನಾಯಕರೂ ತಂಡದ ಆಟಗಾರರನ್ನು ಬದಲಿಸಬಹುದು.

ಇಂದೂ ಮಳೆಯಾದರೆ?: ಇದೀಗ ಉಭಯ ತಂಡಗಳ ನಡುವಿನ ಪಂದ್ಯವನ್ನು ಇಂದು ಅದೇ ಮೈದಾನದಲ್ಲಿ ಆಯೋಜಿಸಲಾಗಿದೆ. ಮಳೆಯಿಂದಾಗಿ ಮೀಸಲು ದಿನವೂ ಪಂದ್ಯ ಆಡಲಾಗದಿದ್ದರೆ, ಲೀಗ್ ಹಂತದ ನಂತರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ವಿಜಯಶಾಲಿಯಾಗಲಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್​ಗೆ ಲಾಭವಾಗಲಿದೆ. ಐಪಿಎಲ್ ​2023 ಚಾಂಪಿಯನ್ ಆಗಲಿದೆ.

ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಲೀಗ್ ಹಂತದಲ್ಲಿ ಅಗ್ರಸ್ಥಾನಕ್ಕೇರಿತು. ಗುಜರಾತ್ ತಾನು ಆಡಿದ 14 ಪಂದ್ಯಗಳಲ್ಲಿ 20 ಅಂಕ ಗಳಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಲ್ಲಿ 17 ಅಂಕ ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ ಲೀಗ್​ನಲ್ಲಿ 10 ಪಂದ್ಯಗಳನ್ನು ಗೆದ್ದು 4 ಪಂದ್ಯಗಳಲ್ಲಿ ಸೋತಿದೆ. ಚೆನ್ನೈ ಸೂಪರ್ ಕಿಂಗ್ಸ್ 8 ಪಂದ್ಯಗಳನ್ನು ಗೆದ್ದು 5 ರಲ್ಲಿ ಸೋಲು ಕಂಡಿದೆ.

ಸಂಭಾವ್ಯ ತಂಡಗಳು: ಗುಜರಾತ್​ ಟೈಟಾನ್ಸ್​: ಶುಭಮನ್ ಗಿಲ್, ವೃದ್ಧಿಮಾನ್ ಸಹಾ, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶ್ ಲಿಟಲ್

ಚೆನ್ನೈ ಸೂಪರ್​ ಕಿಂಗ್ಸ್​: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶಿವಂ ದುಬೆ, ಅಂಬಟಿ ರಾಯುಡು, ಮೊಯಿನ್ ಅಲಿ, ರವೀಂದ್ರ ಜಡೇಜಾ, ಧೋನಿ, ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮಥೀಶ ಪತಿರಾಣ

ಇದನ್ನೂ ಓದಿ: IPL 2023 Final: ಇದೇ ನನ್ನ ಕೊನೆಯ ಪಂದ್ಯ... ಐಪಿಎಲ್​ಗೆ ಅಂಬಟಿ ರಾಯಡು ನಿವೃತ್ತಿ

Last Updated :May 29, 2023, 7:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.