ETV Bharat / sports

MI vs CSK ಪಂದ್ಯದಲ್ಲೊಂದು ಅಚ್ಚರಿ ಘಟನೆ.. ಸ್ಟೇಡಿಯಂನಲ್ಲಿ ಪವರ್​ಕಟ್​​ ಲಾಭ ಪಡೆದ ಮುಂಬೈ!

author img

By

Published : May 12, 2022, 9:40 PM IST

Devon Conway denied DRS help
Devon Conway denied DRS help

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್​​ಕೆ ಬ್ಯಾಟಿಂಗ್ ಮಾಡ್ತಿದ್ದ ವೇಳೆ ದಿಢೀರ್​ ವಿದ್ಯುತ್ ಕೈಕೊಟ್ಟ ಕಾರಣ ಇದರ ಲಾಭ ಪಡೆದುಕೊಳ್ಳುವಲ್ಲಿ ರೋಹಿತ್ ಬಳಗ ಯಶಸ್ವಿಯಾಗಿದೆ.

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​​ನ 59ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​​ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿದ್ಯುತ್​ ಕಡಿತ ಉಂಟಾಗಿದ್ದರಿಂದ ಡಿಆರ್​​ಎಸ್​ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಚನ್ನೈ ತಂಡದ ಆರಂಭಿಕ ಬ್ಯಾಟರ್​ ಡೆವೊನ್ ಕಾನ್ವೆ ಪೆವಿಲಿಯನ್​​ ಕಡೆ ಲಗ್ಗೆ ಹಾಕಿದರು.

ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ - ಚೆನ್ನೈ ನಡುವಿನ ಪಂದ್ಯಕ್ಕೆ ಪವರ್​ಕಟ್​ ಸಮಸ್ಯೆ ಕಾಡಿದ್ದು, ಮುಂಬೈ ತಂಡದ ಡ್ಯಾನಿಯಲ್​ ಸ್ಯಾಮ್ಸ್​ ಎಸೆದ ಮೊದಲ ಓವರ್​​ನ ಎರಡನೇ ಎಸೆತದಲ್ಲೇ ಕಾನ್ವೆ ಎಲ್​ಬಿ ಬಲೆಗೆ ಬಿದ್ದರು.

ಈ ವೇಳೆ ಮೈದಾನದಲ್ಲಿದ್ದ ಅಂಪೈರ್​ ಔಟ್​ ಎಂಬ ತೀರ್ಪು ನೀಡಿದರು. ಈ ವೇಳೆ ಮೂರನೇ ಅಂಪೈರ್​​ಗೆ ಮನವಿ ಸಲ್ಲಿಕೆ ಮಾಡಲು ಡಿಆರ್​​ಎಸ್​​ ಅವಕಾಶವಿದ್ದರೂ, ವಿದ್ಯುತ್​ ಕಡಿತದ ಕಾರಣ ಡಿಆರ್​ಎಸ್​ ತಂತ್ರಜ್ಞಾನ ಬಳಕೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಪೆವಿಲಿಯನ್​ ಕಡೆ ಮುಖ ಮಾಡಿದರು. ಹೀಗಾಗಿ, ಪವರ್ ಕಟ್​ ಮುಂಬೈ ತಂಡಕ್ಕೆ ವರವಾಗಿ ಪರಿಣಮಿಸಿತು.ಇದರ ಬೆನ್ನಲ್ಲೇ ಮೈದಾನಕ್ಕೆ ಬಂದ ರಾಬಿನ್ ಉತ್ತಪ್ಪ ಕೂಡ ಜಸ್ಪ್ರೀತ್ ಬುಮ್ರಾ ಓವರ್​​ನಲ್ಲೇ ಎಲ್​​ಬಿ ಬಲೆಗೆ ಬಿದ್ದರು.

ಇದನ್ನೂ ಓದಿ: ಕಿವೀಸ್​ ದಿಗ್ಗಜನಿಗೆ ಮಣೆ: ಇಂಗ್ಲೆಂಡ್ ತಂಡದ ಮುಖ್ಯ ಕೋಚ್​​ ಆಗಿ ಬ್ರೆಂಡನ್​ ಮೆಕಲಮ್​ ಆಯ್ಕೆ

ವ್ಯಾಪಕ ಟ್ರೋಲ್​: ವಿಶ್ವದ ಶ್ರೀಮಂತ ಕ್ರಿಕೆಟ್ ನಡೆಯುತ್ತಿದ್ದ ಮೈದಾನದಲ್ಲೂ ಪವರ್ ಕಟ್​ ಆಗಿರುವ ವಿಚಾರ ಹೆಚ್ಚು ಟ್ರೋಲ್​​ಗೊಳಗಾಗಿದೆ. ಕ್ರಿಕೆಟ್​ ಅಭಿಮಾನಿಗಳು ಟ್ವಿಟರ್​​ನಲ್ಲಿ ನೋ ಡಿಆರ್​​ಎಸ್​​ ಎಂಬ ಹ್ಯಾಶ್​​ಟ್ಯಾಗ್​​​​ ಟ್ರೆಂಡ್​ ಆಗಿದೆ.

ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಸಂಪೂರ್ಣವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಚೆನ್ನೈ ತಂಡ ಕೇವಲ 97ರನ್​​ಗಳಿಗೆ ಆಲೌಟ್​​ ಆಗಿದೆ. ತಂಡದ ಪರ ಧೋನಿ 36ರನ್​ಗಳಿಸಿ, ವೈಯಕ್ತಿಕ ಗರಿಷ್ಠ ಸ್ಕೋರ್​ರ ಆಗಿ ಹೊರಹೊಮ್ಮಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.