ETV Bharat / sports

7 ಪಂದ್ಯಗಳಿಗೆ 491ರನ್​! ಕೊಹ್ಲಿಯ 2016ರ ದಾಖಲೆಯತ್ತ ಬಟ್ಲರ್​ ಓಟ

author img

By

Published : Apr 23, 2022, 7:51 PM IST

Updated : Apr 25, 2022, 2:44 PM IST

ಈಗಾಗಲೇ 15ನೇ ಆವೃತ್ತಿಯಲ್ಲಿ 3 ಶತಕ ಪೂರ್ಣಗೊಳಿಸಿರುವ ಇಂಗ್ಲೆಂಡ್ ಮೂಲದ ಬ್ಯಾಟರ್​ ಟೂರ್ನಿಯಲ್ಲಿ ಇನ್ನೂ ಕಡಿಮೆ ಅಂದರೂ 8ರಿಂದ 9 ಪಂದ್ಯಗಳನ್ನಾಡಲಿದ್ದಾರೆ. ಹಾಗಾಗಿ ಡ್ರೀಮ್​ ಫಾರ್ಮ್​ನಲ್ಲಿರುವ ಬ್ಯಾಟರ್ ಖಂಡಿತ ಐಪಿಎಲ್​ ಆವೃತ್ತಿವೊಂದರಲ್ಲಿ ಹೆಚ್ಚು ಶತಕ ಸಿಡಿಸಿದ ದಾಖಲೆಗೆ ಪಾತ್ರರಾಗುವ ಅವಕಾಶವಿದೆ.

Joss Butler just one step away from Virat Kohli
ಜೋಶ್ ಬಟ್ಲರ್​ vs ವಿರಾಟ್​ ಕೊಹ್ಲಿ

ಮುಂಬೈ: ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್​ ಜಾಸ್ ಬಟ್ಲರ್​ 2022ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಫಾರ್ಮ್​ನಲ್ಲಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ 3 ಶತಕ ಮತ್ತು 2 ಅರ್ಧಶತಕಗಳ ಸಹಿತ 491 ರನ್​ಗಳಿಸಿದ್ದಾರೆ.

ಈಗಾಗಲೇ 15ನೇ ಆವೃತ್ತಿಯಲ್ಲಿ 3 ಶತಕ ಪೂರ್ಣಗೊಳಿಸಿರುವ ಇಂಗ್ಲೆಂಡ್ ಮೂಲದ ಬ್ಯಾಟರ್​ ಇನ್ನೂ ಟೂರ್ನಿಯಲ್ಲಿ ಕಡಿಮೆ ಅಂದರೂ 8ರಿಂದ 9 ಪಂದ್ಯಗಳನ್ನಾಡಲಿದ್ದಾರೆ. ಹಾಗಾಗಿ ಡ್ರೀಮ್​ ಫಾರ್ಮ್​ನಲ್ಲಿರುವ ಬಟ್ಲರ್​ ಖಂಡಿತ ಐಪಿಎಲ್​ ಆವೃತ್ತಿವೊಂದರಲ್ಲಿ ಹೆಚ್ಚು ಶತಕ ಸಿಡಿಸಿದ ದಾಖಲೆಗೆ ಪಾತ್ರರಾಗುವ ಅವಕಾಶವಿದೆ.

2016ರಲ್ಲಿ ಆರ್​ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 4 ಶತಕ ಸಿಡಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿದೆ. ಇನ್ನು ಗರಿಷ್ಠ ರನ್​ಗಳಿಸಿರುವ ದಾಖಲೆ ಕೂಡ ಇವರ ಹೆಸರಿನಲ್ಲಿಯೇ ಇದ್ದು, ಟೀಮ್ ಇಂಡಿಯಾ ಮಾಜಿ ನಾಯಕ 973 ರನ್​ಗಳಿಸಿದ್ದಾರೆ.

ಪ್ರಸ್ತುತ 7 ಪಂದ್ಯಗಳಿಂದ ಬಟ್ಲರ್​ 491 ರನ್​ಗಳಿಸಿದ್ದಾರೆ. ವಿರಾಟ್​ ಕೊಹ್ಲಿ ದಾಖಲೆ ಮುರಿಯಲು ರಾಜಸ್ಥಾನ್ ರಾಯಲ್ಸ್ ಬ್ಯಾಟರ್​ಗೆ ಇನ್ನೂ 482 ರನ್​ಗಳ ಅವಶ್ಯಕತೆಯಿದೆ. ಲೀಗ್​ನಲ್ಲಿ 7 ಪಂದ್ಯಗಳಿವೆ ಮತ್ತು ರಾಯಲ್ಸ್ ಪ್ಲೇ ಆಫ್​ ಪ್ರವೇಶಿಸುವ ಅವಕಾಶ ಹೆಚ್ಚಿರುವುದರಿಂದ ಪ್ಲೇ ಆಫ್​ ಪಂದ್ಯಗಳು ಸೇರಿದಂತೆ 8ರಿಂದ 9 ಪಂದ್ಯಗಳ ಸಿಗಲಿದ್ದು ಐಪಿಎಲ್​ನಲ್ಲಿ 1000 ರನ್​ಗಳಿಸುವ ಅವಕಾಶ ಕೂಡ ಬಟ್ಲರ್​ಗಿದೆ.

2016ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿರುವ ಜಾಸ್ ಬಟ್ಲರ್​ 72 ಪಂದ್ಯಗಳನ್ನಾಡಿದ್ದು, 2459 ರನ್​ಗಳಿಸಿದ್ದಾರೆ. ಒಟ್ಟಾರೆ 4 ಶತಕ ಸಿಡಿಸಿದ್ದು, ಗರಿಷ್ಠ ಶತಕ ಸಿಡಿಸಿದ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಂಡೀಸ್ ದಿಗ್ಗಜ ಕ್ರಿಸ್​ ಗೇಲ್ 6, ವಿರಾಟ್ ಕೊಹ್ಲಿ 5, ಶೇನ್​ ವಾಟ್ಸನ್ ಮತ್ತು ಡೇವಿಡ್​​ ವಾರ್ನರ್​ ತಲಾ 4 ಶತಕ ಸಿಡಿಸಿದ್ದಾರೆ.

ಇದನ್ನೂ ಓದಿ:ಏಷ್ಯನ್ ಕುಸ್ತಿ ಚಾಂಪಿಯನ್​ಶಿಪ್​: ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ದಹಿಯಾ

Last Updated :Apr 25, 2022, 2:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.