ETV Bharat / sports

ಟೀಂ ಇಂಡಿಯಾ ವಿರುದ್ಧ ಒಂದೇ ಇನ್ಸಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆದು ಅಜಾಜ್‌ ಪಟೇಲ್‌ ದಾಖಲೆ

author img

By

Published : Dec 4, 2021, 1:23 PM IST

Updated : Dec 4, 2021, 1:35 PM IST

ಮುಂಬೈನ ವಾಂಖೆಡೆಯಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ನ ಅಜಾಜ್‌ ಪಟೇಲ್‌ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ..

ind vs new zealnad 2nd test: 10 wickets for Ajaz Patel
ಟೀಂ ಇಂಡಿಯಾ ವಿರುದ್ಧ ಒಂದೇ ಇನ್ಸಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆದು ಅಜಾಜ್‌ ಪಟೇಲ್‌ ದಾಖಲೆ

ಮುಂಬೈ : ಭಾರತ-ನ್ಯೂಜಿಲೆಂಡ್‌ ನಡುವಿನ 2 ಟೆಸ್ಟ್‌ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಕಿವೀಸ್‌ನ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಟೀಂ ಇಂಡಿಯಾದ 10 ವಿಕೆಟ್‌ಗಳನ್ನು ಪಡೆದುಕೊಳ್ಳುವ ಮೂಲಕ ಮುಂಬೈನ ವಾಂಖೆಡೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯದಲ್ಲಿ ಅಜಾಜ್‌ ಪಟೇಲ್‌ 10 ವಿಕೆಟ್‌ ಪಡೆದ ಮೂರನೇ ಆಟಗಾರರಾಗಿದ್ದಾರೆ. ಈ ಮೊದಲು 1956ರಲ್ಲಿ ಇಂಗ್ಲೆಂಡ್‌ನ ಜಿಮ್‌ ಲೇಕರ್‌ ಹಾಗೂ 1999ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡದ ಕನ್ನಡಿಗ ಅನಿಲ್‌ ಕುಂಬ್ಳೆ ಈ ಸಾಧನೆ ಮಾಡಿದ್ದರು.

ಅಜಾಜ್‌ ಪಟೇಲ್‌ ಮೂಲತಃ ಮುಂಬೈನವರು ಎಂಬುದು ಮತ್ತೊಂದು ವಿಶೇಷವಾಗಿದೆ. ತಾನಾಡಿದ 12ನೇ ಟೆಸ್ಟ್‌ ಪಂದ್ಯದಲ್ಲೇ ಮಹತ್ವದ ದಾಖಲೆ ಮಾಡಿದ್ದಾರೆ.

Last Updated :Dec 4, 2021, 1:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.