ETV Bharat / sports

IND vs SL 1st ODI: ಟಾಸ್ ಗೆದ್ದು ಶ್ರೀಲಂಕಾ ಬೌಲಿಂಗ್‌, ವಿಶ್ವಕಪ್‌ಗೆ ಟೀಂ ಇಂಡಿಯಾ ಕಸರತ್ತು ಶುರು

author img

By

Published : Jan 10, 2023, 1:17 PM IST

Updated : Jan 10, 2023, 3:49 PM IST

IND vs SL1st ODI
IND vs SL1st ODI

ಶ್ರೀಲಂಕಾ ಮತ್ತು ಭಾರತ ನಡುವಿನ ಮೊದಲ ಏಕದಿನ ಪಂದ್ಯ ಆರಂಭಗೊಂಡಿದ್ದು ಟಾಸ್​ ಗೆದ್ದ ಲಂಕಾ ಕ್ಷೇತ್ರರಕ್ಷಣೆ ಆರಿಸಿಕೊಂಡಿದೆ. ಉಭಯ ತಂಡಗಳು ಕೆಲವು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿವೆ.

ಗುವಾಹಟಿ (ಬರ್ಸಾಪರಾ): ಭಾರತ ಮತ್ತು ಶ್ರೀಲಂಕಾ ನಡುವಣ ಏಕದಿನ ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು ಟಾಸ್​ ಗೆದ್ದ ಶ್ರೀಲಂಕಾ ಫೀಲ್ಡಿಂಗ್​ ಆಯ್ದುಕೊಂಡಿತು. ರೋಹಿತ್​ ಶರ್ಮಾ ನೇತೃತ್ವದ ಟೀಂ ಇಂಡಿಯಾ ಬ್ಯಾಟಿಂಗ್‌ ಮಾಡಲು ಕ್ರೀಸಿಗಿಳಿದಿದೆ. ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ಪಂದ್ಯಕ್ಕೆ ಆತಿಥ್ಯ ವಹಿಸಿದೆ.

ಉಭಯ ತಂಡಗಳು ಕೆಲವು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿವೆ. ಲಂಕಾ ಪರ ದಿಲ್ಶಾನ್ ಮಧುಶಂಕ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಶ್ರಾಂತಿಯಲ್ಲಿದ್ದ ರೋಹಿತ್​ ಶರ್ಮಾ ಟೀಂ ಇಂಡಿಯಾಗೆ ವಾಪಸ್​ ಆಗಿದ್ದಾರೆ. ರನ್​ ಮಷಿನ್​ ಖ್ಯಾತಿಯ ವಿರಾಟ್​ ಕೊಹ್ಲಿ, ಕೆ.ಎಲ್.ರಾಹುಲ್​ ಕೂಡ ತಂಡದಲ್ಲಿದ್ದಾರೆ. ದಸುನ್ ಶನಕ ನಾಯಕತ್ವದ ಶ್ರೀಲಂಕಾ ಕೂಡ ಬಲಾಬಲ ಹೆಚ್ಚಿಸಿಕೊಳ್ಳುವ ಸಲುವಾಗಿ ಕೆಲವು ಬದಲಾವಣೆಯೊಂದಿಗೆ ಮೈದಾನಕ್ಕಿಳಿದಿದೆ. ಕೆ ಎಲ್​ ರಾಹುಲ್​ ಅವರನ್ನು ವಿಕೆಟ್​ ಕೀಪರ್​ ಆಗಿ ತೆಗೆದು ಕೊಳ್ಳಲಾಗಿದೆ.

ಮೂರು ಪಂದ್ಯಗಳ ಟಿ20 ಸೆರಣಿ ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಭಾರತಕ್ಕೆ ಏಕದಿನ ಪಂದ್ಯ ಗೆಲ್ಲುವ ಗುರಿ ಹೊಂದಿದೆ. ಏಕದಿನ ಮಾದರಿಯ ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ ಮುನ್ನೆಲೆಯಲ್ಲಿ ಇಟ್ಟುಕೊಂಡು ಆಟಗಾರರ ಮೇಲೆ ಪ್ರಯೋಗ ಮಾಡಲು ಈ ಸರಣಿ ಸಹಕಾರವಾಗಲಿದೆ. ಭಾರತದಲ್ಲೇ ವಿಶ್ವಕಪ್​ ನಡೆಯುತ್ತಿರುವುದರಿಂದ ತಂಡವನ್ನು ಬಲಿಷ್ಠ ಮಾಡುವ ಉದ್ದೇಶದಿಂದ ಸರಣಿ ಮಹತ್ವ ಪಡೆದಿದೆ.

ವಿಶ್ವಕಪ್​ಗೆ ತಂಡ ಸಿದ್ಧ ಮಾಡುತ್ತಿರುವ ಬಿಸಿಸಿಐ: ಏಕದಿನ ವಿಶ್ವಕಪ್​ ಇರುವುದರಿಂದ ಟಿ20 ಪಂದ್ಯಗಳಿಂದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮತ್ತು ಕೆ ಎಲ್​ ರಾಹುಲ್​ ಅವರನ್ನು ದೂರ ಇಡುತ್ತಿದೆ. ಈ ಮೂಲಕ ಹಿರಿಯ ಅನುಭವಿ ಆಟಗಾರರನ್ನು ವಿಶ್ವಕಪ್ ತಂಡಕ್ಕಾಗಿ ಸಿದ್ಧಪಡಿಸಲಾಗುತ್ತಿದೆ. ವಿಶ್ವಕಪ್​ ಗೆಲ್ಲುವ ಫೇವರೇಟ್​​ ತಂಡದ ಪಟ್ಟಿಯಲ್ಲಿ ಇದೆ. ಭಾರತದ ಸ್ಟಾರ್​ ಬ್ಯಾಟರ್​ಗಳಾದ ನಾಯಕ ರೋಹಿತ್​, ಕೊಹ್ಲಿ ಮತ್ತು ರಾಹುಲ್​ ಫಾರ್ಮ್​ನಲ್ಲಿದ್ದಾರೆ. ವಿಶ್ವಕಪ್​ ವೇಳೆ ಅಫಘಾತದಲ್ಲಿ ಗಾಯಗೊಂಡಿರುವ ಪಂತ್​ ತಂಡ ಸೇರಲಿದ್ದಾರ ಕಾದು ನೋಡ ಬೇಕಿದೆ. ಫಿಟ್​ನೆಸ್​ ಸಾಬೀತಾಗದ ಕಾರಣ ಬೂಮ್ರಾ ಅವರನ್ನು ವಿಶ್ವಕಪ್​ ಉದ್ದೇಶದಿಂದಲೇ ಹೊರಗಿಡಲಾಗಿದೆ. ​

ಪಿಚ್ ವರದಿ: ಪಿಚ್​ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಹೆಚ್ಚು ರನ್​ಗಳಿಸುವಲ್ಲಿ ಪಿಚ್​ ಸಹಕರಿಸಲಿದೆ. ಪಿಚ್ ಡ್ರೈ ಮತ್ತು ಕ್ರ್ಯಾಕ್​ಗಳಿಂದ ಕೂಡಿದೆ. ರಾತ್ರಿ ಇಬ್ಬನಿ ಹೆಚ್ಚಿರುವ ಸಾಧ್ಯತೆ ಇದೆ. ಎರಡನೇ ಇನ್ನಿಂಗ್ಸ್ ಕ್ಷೇತ್ರ ರಕ್ಷಣೆ ಮಾಡುವ ತಂಡಕ್ಕೆ ರನ್​ ಸೇವ್​ ಮಾಡುವುದು ಕಠಿಣವಾಗಲಿದೆ. ಪಿಚ್ ಬ್ಯಾಟಿಂಗ್ ಮಾಡಲು ಉತ್ತಮವಾಗಿ ಕಾಣುತ್ತಿದ್ದು, ಚೇಸಿಂಗ್ ಸುಲಭವಾಗಲಿದೆ. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಬಹುದು ಎಂದು ದೀಪ್ ದಾಸ್‌ಗುಪ್ತಾ ಪಿಚ್​ ರಿಪೋರ್ಟ್​ನಲ್ಲಿ ಹೇಳಿದ್ದಾರೆ.

ಟಾಸ್​ ಗೆದ್ದ ನಂತರ ಮಾತನಾಡಿದ ಶ್ರೀಲಂಕಾ ನಾಯಕ ದಾಸುನ್ ಶನಕ, ಪಿಚ್​ ವರದಿಯಂತೆ ರಾತ್ರಿಯಲ್ಲಿ ಇಬ್ಬನಿ ಹೆಚ್ಚಿರುವ ಸಾಧ್ಯತೆ ಇರುವುದರಿಂದ ನಾವು ಮೊದಲು ಬೌಲ್ ಮಾಡುತ್ತೇವೆ. ಟಾಸ್​ ಗೆದ್ದಿರುವುದು ತಂಡಕ್ಕೆ ಪ್ಲೆಸ್​ ಆಗಲಿದೆ. ನಾವು ಟಿ20ಯಲ್ಲಿ ಸರಣಿ ಸೋತರೂ ಉತ್ತಮ ಆಟ ಪ್ರದರ್ಶಿಸಿದ್ದೇವೆ ಎಂದರು. ದಿಲ್ಶಾನ್ ಮಧುಶಂಕ ಅಂತರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಇಂದು ಪಾದಾರ್ಪಣೆ ಮಾಡುತ್ತಿದ್ದಾರೆ.

ಆರಂಭಿಕರನ್ನು ಕಳೆದುಕೊಂಡ ಭಾರತ: ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ 100ರನ್​ನ ಉತ್ತಮ ಆರಂಭಿಕ ಜೊತೆಯಾಟ ನೀಡಿದರು. ಟಿ 20 ಸರಣಿಯ ಕೊನೆಯ ಪಂದ್ಯದಲ್ಲಿ ಲಯಕಂಡುಕೊಂಡಿದ್ದ ಗಿಲ್​ 70 ರನ್ ದಾಖಲಿಸಿ ಔಟ್​ ಆದರು. 143ರನ್​ಗಳ ಜೊತೆಯಾಟದಲ್ಲಿದ್ದಾಗ ಲಂಕ ನಾಯಕ ಶನಕ ಬೌಲ್​ಗೆ ಗಿಲ್ ಎಲ್​ಬಿಡ್ಲ್ಯೂಗೆ ವಿಕೆಟ್ ಒಪ್ಪಿಸಿದರು. ನಂತರ 83 ರನ್​ ಗಳಿಸಿದ್ದ ರೋಹಿತ್​ ಕೂಡ ವಿಕೆಟ್​ ಕೊಟ್ಟು ಹೋದರು. 25 ಓವರ್​ಗೆ ಭಾರತ 2 ವಿಕೆಟ್​ ನಷ್ಟಕ್ಕೆ 182 ಕ್ಕೆ ಗಳಿಸಿದೆ. ವಿರಾಟ್​ ಕೊಹ್ಲಿ ಮತ್ತು ಶ್ರೇಯಸ್​ ಅಯ್ಯರ್​ ಕ್ರೀಸ್​ನಲ್ಲಿದ್ದಾರೆ.

ಭಾರತ (ಆಡುವ ಹನ್ನೊಂದು ಆಟಗಾರರು): ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್​ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್

ಶ್ರೀಲಂಕಾ (ಆಡುವ ಹನ್ನೊಂದು ಆಟಗಾರರು): ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್​ ಕೀಪರ್​), ಅವಿಷ್ಕ ಫೆರ್ನಾಂಡೊ, ಧನಂಜಯ ಡಿ ಸಿಲ್ವ, ಚರಿತ್ ಅಸಲಂಕಾ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶನ್ ಮಧುಶಂಕ

ಇದನ್ನೂ ಓದಿ: ಟಿ20 ಕ್ರಿಕೆಟ್‌ ತ್ಯಜಿಸುವ ಕುರಿತು ನಿರ್ಧರಿಸಿಲ್ಲ: ರೋಹಿತ್ ಶರ್ಮಾ

Last Updated :Jan 10, 2023, 3:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.