ETV Bharat / sports

IND vs AUS 2nd ODI: ಐದನೇ ಸೋಲಿನಿಂದ ಬಚಾವ್​ ಆಗುತ್ತಾ ಆಸಿಸ್?​.. ಸರಣಿ ವಶಕ್ಕೆ ರಾಹುಲ್​ ಚಿಂತನೆ.. ಫಾರ್ಮ್​ ಕಂಡುಕೊಳ್ಳಬೇಕಿದೆ ಅಯ್ಯರ್, ಅಶ್ವಿನ್

author img

By ETV Bharat Karnataka Team

Published : Sep 23, 2023, 10:31 PM IST

India vs Australia second ODI
India vs Australia second ODI

ನಾಳೆ ಇಂದೋರ್​ನ ಹೋಳ್ಕರ್​ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ರಾಹುಲ್​ ನಾಯಕತ್ವದ ಭಾರತ ಸರಣಿ ಗೆಲುವಿನ ಲೆಕ್ಕಾಚಾರದಲ್ಲಿದೆ.

ಇಂದೋರ್ (ಮಧ್ಯಪ್ರದೇಶ): ವಿಶ್ವಕಪ್​ ತಯಾರಿಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಮೂರು ಏಕದಿನ ಪಂದ್ಯಗಳ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು ಗೆದ್ದು ಸಿರೀಸ್​ನಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನಾಳೆ ಇಲ್ಲಿನ ಹೋಳ್ಕರ್​ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯವನ್ನು ರಾಹುಲ್​ ನಾಯಕತ್ವದ ತಂಡ ಆಡಲಿದೆ. ಸರಣಿ ಸಮಬಲ ಸಾಧಿಸಲು ಆಸಿಸ್​ ಚಿಂತಿಸುತ್ತಿದ್ದರೆ, ರಾಹುಲ್​ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.

ವಿಶ್ವಕಪ್​ ಹಿನ್ನೆಲೆಯಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಹಾರ್ದಿಕ್​ ಪಾಂಡ್ಯ ಮತ್ತು ಕುಲ್ದೀಪ್ ಯಾದವ್​ಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೇ ಏಷ್ಯಾಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿರಾಜ್​ ತಂಡದಲ್ಲಿದ್ದರೂ, ವಿಶ್ವಕಪ್​ ಕಾರಣಕ್ಕೆ ರೆಸ್ಟ್​ ಕೊಡಲಾಗಿದೆ. ಇವರೆಲ್ಲರ ಹೊರತಾಗಿಯೂ ಭಾರತ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆದ್ದು, ನಂ.1 ಪಟ್ಟವನ್ನು ಅಲಂಕರಿಸಿದೆ.

ಮೊದಲ ಪಂದ್ಯದಲ್ಲಿ ರನ್​ ಔಟ್​ ಆಗಿ ಬ್ಯಾಟಿಂಗ್​ನಲ್ಲಿ ವಿಫಲರಾದ ಶ್ರೇಯಸ್​ ಅಯ್ಯರ್​ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವಿಶ್ವಕಪ್​ ತಂಡಕ್ಕೆ ಆಯ್ಕೆ ಆಗಿರುವ ಕಾರಣ ಅವರು ಆಸಿಸ್​ ವಿರುದ್ಧ ತಮ್ಮ ಫಾರ್ಮ್​ನ್ನು ಕಂಡುಕೊಳ್ಳುವುದು ಬಹಳಾ ಮುಖ್ಯವಾಗುತ್ತದೆ. ಏಷ್ಯಾಕಪ್​ನಲ್ಲಿ ಒಂದು ಪಂದ್ಯದಲ್ಲಿ ಅವಕಾಶ ಸಿಕ್ಕಿತ್ತು, ಆದರೆ ನಂತರ ಮತ್ತೆ ಬೆನ್ನು ನೋವಿಗೆ ತುತ್ತಾದ ಅಯ್ಯರ್​ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ನಾಳಿನ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ನೀಡಲೇಬೇಕು. ಮೂರನೇ ಪಂದ್ಯಕ್ಕೆ ವಿರಾಟ್​, ರೋಹಿತ್​, ಹಾರ್ದಿಕ್​ ತಂಡಕ್ಕೆ ಮರಳುವುದರಿಂದ ಮಧ್ಯಮ ಕ್ರಮಾಂಕದಲ್ಲಿ ಅಯ್ಯರ್​ ಕೈ ಬಿಡಲೇಬೇಕಾಗುತ್ತದೆ.

21 ತಿಂಗಳ ನಂತರ ಏಕದಿನ ತಂಡಕ್ಕೆ ಮರಳಿರುವ ಅಶ್ವಿನ್​ ಸಹ ಆಲ್​ರೌಂಡರ್​ ಪ್ರದರ್ಶನ ನೀಡುವ ಅಗತ್ಯ ಇದೆ. ಅಕ್ಷರ್ ಪಟೇಲ್​ ಗಾಯಗೊಂಡಿರುವುದರಿಂದ ಅಶ್ವಿನ್​ಗೆ 11ರ ಬಳಗದಲ್ಲಿ ಅವಕಾಶ ಸಿಕ್ಕಿದೆ. ಇಲ್ಲವಾದಲ್ಲಿ 15ರ ಒಳಗೂ ಅವರು ಬರುವುದು ಅನುಮಾನವೇ ಇತ್ತು. ಮೂರನೇ ಪಂದ್ಯಕ್ಕೂ ಮುನ್ನ ಮಿಂಚಿನ ಪ್ರದರ್ಶನ ನೀಡಬೇಕಿದೆ. ಅಕ್ಷರ್​ ಚೇತರಿಸಿಕೊಂಡಲ್ಲಿ, ಮೂರನೇ ಪಂದ್ಯಕ್ಕೆ ಮರಳಲಿದ್ದಾರೆ. ಅಲ್ಲದೇ ಮೂರನೇ ಪಂದ್ಯಕ್ಕೆ ಕುಲ್ದೀಪ್​ ತಂಡಕ್ಕೆ ಸೇರುವುದರಿಂದ ಅಶ್ವಿನ್​ ಅವಕಾಶ ಕಳೆದುಕೊಳ್ಳುವುದಂತೂ ಖಚಿತ.

ಏಕದಿನ ಪಂದ್ಯದಲ್ಲಿ ವಿಫಲತೆ ಕಾಣುತ್ತಿದ್ದ ಸೂರ್ಯಕುಮಾರ್​ ಯಾದವ್​ ಮೊದಲ ಏಕದಿನದಲ್ಲಿ ಅರ್ಧಶತಕದ ಆಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಎಲ್ಲಾ ಸ್ಥಾನಗಳಿಗೂ ಇಶಾನ್​ ಕಿಶನ್​ ಫಿಟ್​ ಆಗುತ್ತಿದ್ದಾರೆ. ರಾಹುಲ್​ ತಮ್ಮ ಹಳೆ ಫಾರ್ಮ್​ಗೆ ಮರಳಿದ್ದಾರೆ. ಹೀಗಾಗಿ ಭಾರತ ತಂಡ ನಾಳೆಯೂ ಗೆಲ್ಲುವ ಫೇವ್​ರೇಟ್​ ಟೀಮ್​ ಆಗಿ ಕಂಡುಬರುತ್ತಿದೆ.

ಬಲಿಷ್ಠ ಆಸಿಸ್​: ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಆರಂಭವಾಗಿ ನಿನ್ನೆಯ ಪಂದ್ಯ ಸೇರಿದಂತೆ ನಾಲ್ಕನೇ ಸೋಲು ಕಂಡಿದೆ. ಭಾರತದ ವಿರುದ್ಧ ತಂಡ ಉತ್ತಮ ಬ್ಯಾಟಿಂಗ್​ ಮತ್ತು ಬೌಲಿಂಗ್​ ಮಾಡಿತ್ತಾದರೂ, 277 ರನ್​ ಗುರಿಯನ್ನು ಉಳಿಸಿಕೊಳ್ಳುವಲ್ಲಿ ಎಡವಿತು. ವಾರ್ನರ್​, ಸ್ಮಿತ್, ಜೋಶ್ ಇಂಗ್ಲಿಸ್ ಉತ್ತಮ ಇನ್ನಿಂಗ್ಸ್​ ಕಟ್ಟಿದ್ದರು. ಇವರಿಗೆ ಇನ್ನೊಂದಿಷ್ಟು ಸಾಥ್​ ದೊರೆತಿದ್ದರೆ 300 ಗಡಿ ದಾಟುತ್ತಿತ್ತು. ಆದರೆ ಶಮಿಯ ದಾಳಿ ಆಸಿಸ್​ನ್ನು ಕಟ್ಟಿಹಾಕಿತು. ಮಧ್ಯಮ ಕ್ರಮಾಂಕದ ಗ್ರೀನ್​, ಅಲೆಕ್ಸ್​ ಕ್ಯಾರಿ ಮತ್ತು ಸ್ಟೋಯ್ನಿಸ್​ ಅಬ್ಬರಿಸಿದರೆ ಬೃಹತ್​ ಗುರಿಯನ್ನು ಭೇದಿಸುವ ಸಾಮರ್ಥ್ಯ ಕಾಂಗರೂ ಪಡೆಗಿದೆ.

ಪಿಚ್​ ಹೇಗಿದೆ: ಇಂದೋರ್​ನ ಹೋಳ್ಕರ್​ ಮೈದಾನವನ್ನು ಬ್ಯಾಟರ್​ಗಳ ಸ್ವರ್ಗ ಎಂದೇ ಕರೆಯಲಾಗುತ್ತದೆ. ಭಾರತ ಈ ಮೈದಾನದಲ್ಲಿ 385 ರನ್​ ಕಲೆಹಾಕಿರುವ ಇತಿಹಾಸ ಇದೆ. ಇದೇ ಮೈದಾನದಲ್ಲಿ ಶುಭಮನ್​ ಗಿಲ್​ ಅವರ ಶತಕವೂ ದಾಖಲಾಗಿದೆ. ಹೊಸ ಚೆಂಡಿನಲ್ಲಿ ವೇಗಿಗಳು ಹೆಚ್ಚು ಪರಿಣಾಮಕಾರಿ ಆಗಬಹುದು, ನಂತರ ಸ್ಪಿನ್​ ಸ್ನೇಹಿ ಮೇಲ್ಮೈ ಆಗಲಿದೆ. ಹವಾಮಾನ ಇಲಾಖೆಯ ಪ್ರಕಾರ ಮೋಡ ಕವಿದ ವಾತಾವರಣ ಇರಲಿದೆ. ತಾಪಮಾನವು ಸುಮಾರು 23 ರಿಂದ - 29 ಡಿಗ್ರಿ ಸೆಲ್ಸಿಯಸ್ ಆಗಿರಬಹುದು, ಗಾಳಿಯ ವೇಗ ಗಂಟೆಗೆ 10-15 ಕಿ.ಮೀ. ಅಂದಾಜಿಸಲಾಗಿದೆ.

ಸಂಭಾವ್ಯ ತಂಡ: ಭಾರತ: ಶುಭಮನ್ ಗಿಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ತಿಲಕ್ ವರ್ಮಾ/ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ/ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯ್ನಿಸ್, ಸೀನ್ ಅಬಾಟ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ

ಪಂದ್ಯ: ಇಂದೋರ್​ನ ಹೋಳ್ಕರ್​ ಮೈದಾನದಲ್ಲಿ ಮಧ್ಯಹ್ನ 1:30ಕ್ಕೆ ಆರಂಭವಾಗಲಿದೆ. ಪಂದ್ಯದ ನೇರ ಪ್ರಸಾರ ಸ್ಪೋರ್ಟ್ಸ್​ 18 ಮತ್ತು ಜಿಯೋ ಸಿನಿಮಾದಲ್ಲಿ ಲಭ್ಯವಿರಲಿದೆ.

ಇದನ್ನೂ ಓದಿ: Asian Games 2023: ಧ್ವಜಧಾರಿಗಳಾಗಿ ಭಾರತವನ್ನು ಮುನ್ನಡೆಸಿದ ಲೊವ್ಲಿನಾ, ಹರ್ಮನ್‌ಪ್ರೀತ್.. ಮಿನಿ ಒಲಂಪಿಕ್ಸ್​ಗೆ ಅದ್ಧೂರಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.