ETV Bharat / sports

ಕಿಶನ್​, ಸೂರ್ಯ ಭರ್ಜರಿ ಬ್ಯಾಟಿಂಗ್​: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 2 ವಿಕೆಟ್​ಗಳ ರೋಚಕ ಜಯ

author img

By ETV Bharat Karnataka Team

Published : Nov 23, 2023, 11:10 PM IST

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 2 ವಿಕೆಟ್​ಗಳ ರೋಚಕ ಜಯ
ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 2 ವಿಕೆಟ್​ಗಳ ರೋಚಕ ಜಯ

5 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 2 ವಿಕೆಟ್​ಗಳ ರೋಚಕ ಜಯ ಸಿಕ್ಕಿದೆ.

ವಿಶಾಖಪಟ್ಟಣಂ: ವಿಶ್ವಕಪ್​ ಸೋಲಿನ ಬಳಿಕ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ 2 ವಿಕೆಟ್​ಗಳ ಜಯ ಸಾಧಿಸಿದೆ.

ನಾಯಕ ಸೂರ್ಯಕುಮಾರ್​ ಯಾದವ್ ಮತ್ತು ಇಶಾನ್​ ಕಿಶನ್​ರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸೀಸ್​ ನೀಡಿದ್ದ 208 ರನ್​ಗಳ ಗುರಿಯನ್ನು ಟೀಂ ಇಂಡಿಯಾ 19.5 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು ಮುಟ್ಟಿತು. ಸರಣಿಯಲ್ಲಿ ಭಾರತ 1-0 ಯಿಂದ ಮುನ್ನಡೆ ಪಡೆದುಕೊಂಡಿತು.

ವಿಶಾಖಪಟ್ಟಣದ ಡಾ. ವೈ.ಎಸ್. ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ಮೊದಲಿಗೆ ಬೌಲಿಂಗ್​ ಆಯ್ದುಕೊಂಡು, ಆಸೀಸ್​ಗೆ ಬ್ಯಾಟಿಂಗ್​ಗೆ ಆಹ್ವಾನಿಸಿತು. ಬೌಲಿಂಗ್​ ಮತ್ತು ಫೀಲ್ಡಿಂಗ್​ನಲ್ಲಿ ಎಡವಿದ ಟೀಮ್​ ಇಂಡಿಯಾ, ಕಾಂಗರೂ ಬ್ಯಾಟರ್​ಗಳಿಗೆ ಸುಲಭವಾಗಿ ರನ್​ಗಳ ಬಿಟ್ಟುಕೊಟ್ಟಿತು. ಆಸ್ಟ್ರೇಲಿಯಾ ಪರ ಸ್ಟೀವ್​ ಸ್ಮಿತ್​ (54) ಅರ್ಧ ಶತಕ ಸಿಡಿಸಿದರೆ, ಜೋಶ್​ ಇಂಗ್ಲಿಸ್​(110) ಶತಕ ಸಿಡಿಸಿ ತಂಡದ ಸ್ಕೋರ್​ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಉಳಿದಂತೆ ಶಾರ್ಟ್​, ಸ್ಟೋಯಿನಿಸ್​ (7 ಅಜೇಯ), ಟಿಮ್​ ಡೇವಿಡ್​ (19 ಅಜೇಯ) ಅಲ್ಪ ಮೊತ್ತದ ಸ್ಕೋರ್​ ಕಲೆ ಹಾಕುವ ಮೂಲಕ 209 ರನ್​ಗಳ ಗುರಿಯನ್ನು ನೀಡಿತು.

ಆಸೀಸ್​ ನೀಡಿದ್ದ ಬೃಹತ್​ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭಿಕ ಆಘಾತ ಎದುರಿಸಿತು. ತಂಡದ ಸ್ಕೋರ್ 11 ಆಗಿದ್ದ ವೇಳೆ ರುತುರಾಜ್ ಗಾಯಕ್ವಾಡ್​ ರನ್​ ಔಟ್​ ಆಗಿ ಸೊನ್ನೆಗೆ ನಿರ್ಗಮಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ಜೈಸ್ವಾಲ್ ತಲಾ 2 ಬೌಂಡರಿ, ಸಿಕ್ಸರ್​ ಸಿಡಿಸಿ ರಂಜಿಸಿದರು. ದೊಡ್ಡ ಹೊಡೆತಕ್ಕೆ ಕೈ ಹಾಕಿ 21 ಗಳಿಸಿದ್ದಾಗ ಔಟಾದರು.

ಇಶಾನ್​- ಸೂರ್ಯ ಜುಗಲ್​ಬಂಧಿ: ವಿಶ್ವಕಪ್​ನಲ್ಲಿ ಅವಕಾಶ ಸಿಗದೇ ಪರಿತಪಿಸಿದ್ದ ಇಶಾನ್​ ಕಿಶನ್​(58) ಭರ್ಜರಿ ಬ್ಯಾಟಿಂಗ್​ ಮಾಡಿದರು. 2 ಬೌಂಡರಿ, 5 ಸಿಕ್ಸರ್​ ಬಾರಿಸಿದರು. ಸೂರ್ಯಕುಮಾರ್ ಯಾದವ್​​ 9 ಬೌಂಡರಿ, 4 ಸಿಕ್ಸರ್​ಗಳ ನೆರವಿನಿಂದ 80 ರನ್​ ಮಾಡಿದರು. ಕೊನೆಯಲ್ಲಿ ಭಾರತ ವಿಕೆಟ್​ ಕಳೆದುಕೊಂಡರು ಹೊಸ ಪ್ರತಿಭೆ ರಿಂಕು ಸಿಂಗ್​ 22 ರನ್​ ಬಾರಿಸಿ ಗೆಲುವಿನ ದಡ ಮುಟ್ಟಿಸಿದರು.

ಇದನ್ನೂ ಓದಿ: ವಿಶ್ವಕಪ್ ಸೋಲಿನಿಂದ ಹೊರಬರಲು ಸಮಯ ಬೇಕು, ಹೊಸ ತಂಡ ಮುನ್ನಡೆಸಲು ಉತ್ಸುಕ- ಸೂರ್ಯ ಕುಮಾರ್ ಯಾದವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.