ETV Bharat / sports

ಮಾರ್ಚ್​ 17ರಿಂದ ಏಕದಿನ ಫೈಟ್: ಕೊಹ್ಲಿ ಬ್ಯಾಟ್​ನಿಂದ ಬರಲಿರುವ ದಾಖಲೆಗಳಿವು.. ​

author img

By

Published : Mar 15, 2023, 4:46 PM IST

IND vs AUS First One day Match Preview Wankhede Stadium Mumbai India Squad
ಹಾರ್ದಿಕ್​ ಪಾಂಡ್ಯಗೆ ಪ್ರಥಮ ಪಂದ್ಯದ ನಾಯಕತ್ವ

ಮುಂಬೈಗೆ ಬಂದು ತಲುಪಿರುವ ಆಟಗಾರರು - ಮಾರ್ಚ್​ 17ರಿಂದ ಏಕದಿನ ಸರಣಿ ಆರಂಭ - ಮೊದಲ ಪಂದ್ಯಕ್ಕೆ ರೋಹಿತ್​ ಅಲಭ್ಯ - ಹಾರ್ದಿಕ್​ ಪಾಂಡ್ಯಗೆ ಪ್ರಥಮ ಪಂದ್ಯದ ನಾಯಕತ್ವ

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ ಗವಾಸ್ಕರ್​ ಟ್ರೋಫಿಯನ್ನು ಭಾರತ ತನ್ನಲ್ಲೇ ಉಳಿಸಿಕೊಂಡಿದೆ. ಸರಣಿಯಲ್ಲಿ 2-1ರಿಂದ ಜಯ ಸಾಧಿಸಿದ್ದಲ್ಲದೇ, ಜೂನ್​ 7 ರಂದು ಇಂಗ್ಲೆಂಡ್​ನಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. ಮಾರ್ಚ್​ 17 ರಿಂದ ಆಸಿಸ್​ ಎದುರು ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿ ಏಕದಿನ ವಿಶ್ವಕಪ್​ ಮತ್ತು ಏಷ್ಯಾ ಕಪ್​ ಹಿನ್ನೆಲೆಯಲ್ಲಿ ಭಾರತಕ್ಕೆ ಮಹತ್ವದ್ದಾಗಿದೆ. ಈ ಏಕದಿನ ಸರಣಿ ನಂತರ ಭಾರತದಲ್ಲಿ ಪುರುಷರ ಐಪಿಎಲ್​ ಪ್ರಾರಂಭವಾಗುತ್ತದೆ.

ಟೀಂ ಇಂಡಿಯಾ ಮಾರ್ಚ್ 17 ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ, ಅವರ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವವನ್ನು ಹೊಂದಿದ್ದಾರೆ. ಇಡೀ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡದ ಉಪನಾಯಕರಾಗಿರುತ್ತಾರೆ. ತಂಡಕ್ಕೆ ಶಾರ್ದೂಲ್​ ಠಾಕೂರ್​ ಮೆರಳಿದ್ದಾರೆ.

ಮಂಗಳವಾರ ಬೆಳಗ್ಗೆ ಮುಂಬೈಗೆ ಪ್ರಮುಖ ಆಟಗಾರರು ತಲುಪಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಐದು ಪಂದ್ಯಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಟೀಂ ಇಂಡಿಯಾ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ಎರಡರಲ್ಲಿ ಗೆದ್ದಿದೆ. ಬಹಳಾ ಸಮಯದ ನಂತರ ಜಡೇಜಾ ಏಕದಿನ ಕ್ರಿಕೆಟ್​ನಲ್ಲಿ ಆಡುತ್ತಿದ್ದಾರೆ. ಶ್ರೇಯಸ್​ ಅಯ್ಯರ್​ ಮೂರನೇ ಪಂದ್ಯದದಲ್ಲಿ ಗಾಯಗೊಂಡು ಹೊರಗುಳಿದಿದ್ದರು ಅವರ ಬದಲಿ ತಂಡದಲ್ಲಿ ಯಾರನ್ನು ಸೂಚಿಸಲಾಗಿಲ್ಲ.

ವಿರಾಟ್​ ಬ್ಯಾಟ್​ನಿಂದ ಈ ದಾಖಲೆಗಳ ನಿರೀಕ್ಷೆ: ವಿರಾಟ್ ಕೊಹ್ಲಿ 272 ನೇ ಏಕದಿನ ಪಂದ್ಯವನ್ನು ಆಡಲಿದ್ದಾರೆ. ವಿರಾಟ್ 271 ಏಕದಿನ ಪಂದ್ಯಗಳಲ್ಲಿ 57.7 ಸರಾಸರಿಯಲ್ಲಿ 12,809 ರನ್ ಗಳಿಸಿದ್ದಾರೆ. ಕೊಹ್ಲಿ 191 ರನ್​ ಗಳಿಸಿದರೆ 13,000 ರನ್​ ಪೂರೈಸುತ್ತಾರೆ. ಏಕದಿನದಲ್ಲಿ ಇಷ್ಟು ರನ್​ ದಾಖಲಿಸಿದ ಭಾರತದ ಎರಡನೇ ಮತ್ತು ವಿಶ್ವದ 5ನೇ ಬ್ಯಾಟರ್​ ಆಗಲಿದ್ದಾರೆ.

ಸಚಿನ್​ ದಾಖಲೆ ಸರಿಗಟ್ಟುತ್ತಾರ ವಿರಾಟ್​, ರೋಹಿತ್​?: ವಿರಾಟ್‌ ಮತ್ತು ರೋಹಿತ್ ಶರ್ಮಾ ಇದುವರೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ 8-8 ಶತಕಗಳನ್ನು ಗಳಿಸಿದ್ದಾರೆ. ಒಂದು ವೇಳೆ ಕೊಹ್ಲಿ ಹಾಗೂ ರೋಹಿತ್ ಸರಣಿಯಲ್ಲಿ 2 ಶತಕ ಬಾರಿಸಿದರೆ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ 9 ಶತಕಗಳನ್ನು ಗಳಿಸಿದ್ದಾರೆ. ಇಬ್ಬರೂ ಶತಕ ಗಳಿಸಿದರೆ ತೆಂಡೂಲ್ಕರ್ ದಾಖಲೆ ಸರಿಗಟ್ಟಲಿದ್ದಾರೆ.

ಪಾಂಟಿಂಗ್​ ದಾಖಲೆ ಮುರಿಯುತ್ತಾರ ವಿರಾಟ್​: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿದೆ. ಈ ಸರಣಿಯಲ್ಲಿ ಕೊಹ್ಲಿ 82 ರನ್ ಗಳಿಸಿದರೆ, ಪಾಂಟಿಂಗ್ ಅವರ 2164 ರನ್‌ಗಳ ದಾಖಲೆಯನ್ನು ಮುರಿಯಲಿದ್ದಾರೆ. ವಿರಾಟ್ ಆಸ್ಟ್ರೇಲಿಯಾ ವಿರುದ್ಧ 43 ಏಕದಿನ ಪಂದ್ಯಗಳಲ್ಲಿ 2083 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸ ಭಾರತ ಏಕದಿನ ವೇಳಾಪಟ್ಟಿ:
ಮೊದಲ ಏಕದಿನ ಪಂದ್ಯ: ಮಾರ್ಚ್ 17, ಮುಂಬೈ
ಎರಡನೇ ಏಕದಿನ ಪಂದ್ಯ: ಮಾರ್ಚ್ 19, ವಿಶಾಖಪಟ್ಟಣ
ಮೂರನೇ ಏಕದಿನ ಪಂದ್ಯ: ಮಾರ್ಚ್ 22, ಚೆನ್ನೈ

ಇದನ್ನೂ ಓದಿ: ಏಕದಿನ ಸರಣಿಯ ನಾಯಕತ್ವದ ಹೊಣೆಯೂ ಸ್ಮಿತ್​ ಹೆಗಲಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.