ETV Bharat / sports

ಏಕದಿನ ಸರಣಿಯ ನಾಯಕತ್ವದ ಹೊಣೆಯೂ ಸ್ಮಿತ್​ ಹೆಗಲಿಗೆ

author img

By

Published : Mar 14, 2023, 1:08 PM IST

ತಾಯಿಯ ಅಗಲಿಕೆಯ ಕಾರಣ ಏಕದಿನ ಸರಣಿಗೂ ಪ್ಯಾಟ್​ ಕಮಿನ್ಸ್​ ಅಲಭ್ಯರಾಗಿರುವ ಕಾರಣ ಸ್ಟೀವ್​ ಸ್ಮಿತ್​ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ.

Steve Smith to lead Australia in ODI series against India
ಏಕದಿನ ಸರಣಿಯ ನಾಯಕತ್ವದ ಹೊಣೆಯೂ ಸ್ಮಿತ್​ ಹೆಗಲಿಗೆ

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಮಾರ್ಚ್​ 17 ರಿಂದ ಆರಂಭವಾಗುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಗೆ ಸ್ಟೀವ್​ ಸ್ಮಿತ್​ ನಾಯಕತ್ವ ಮುಂದುವರೆಯಲಿದೆ. ಕಳೆದ ವಾರ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಪ್ಯಾಟ್​ ಕಮಿನ್ಸ್​ ತಾಯಿ ಮರಿಯಾ ನಿಧನರಾಗಿದ್ದರು ಈ ಕಾರಣ ಅವರು ಮನೆಯಲ್ಲೇ ಕೆಲ ಸಮಯ ಕಳೆಯಲಿಚ್ಛಿಸಿದ್ದಾರೆ ಎಂದು ಕೋಚ್​ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ನಂತರ ಪ್ಯಾಟ್ ಕಮಿನ್ಸ್​ ಆಸ್ಟ್ರೇಲಿಯಾಕ್ಕೆ ಮರಳಿದ್ದರು. ಮೂರು ಮತ್ತು ನಾಲ್ಕನೇ ಟೆಸ್ಟ್​ನ್ನು ಸ್ಟೀವ್​ ಸ್ಮಿತ್​ ಮುನ್ನಡೆಸಿದ್ದರು. ಎರಡು ಪಂದ್ಯದ ನಂತರ ಆಸಿಸ್​​ ಟೆಸ್ಟ್​ ಸರಣಿಯಲ್ಲಿ 2-0 ಯಲ್ಲಿತ್ತು. ಸ್ಮಿತ್​ ನಾಯಕತ್ವದಲ್ಲಿ ಇಂದೋರ್​ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಈ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಆಯ್ಕೆಯಾಗಿತ್ತು. ಅಹಮದಾಬಾದ್​ನಲ್ಲಿ ನಡೆದ ಅಂತಿಮ ಟೆಸ್ಟ್​ ನಿನ್ನೆ ಡ್ರಾದಲ್ಲಿ ಅಂತ್ಯವಾಯಿತು.

ಪ್ಯಾಟ್​ ಕಮಿನ್ಸ್​ ಈ ದುಃಖಕರ ಸಂದರ್ಭದಲ್ಲಿ ಅವರ ಕುಟುಂಬದ ಜೊತೆ ಇರಲಿ ಎಂದು ನಾವು ಭಾವಿಸಿದ್ದೇವೆ. ತಂಡದಲ್ಲಿ ಕಮಿನ್ಸ್ ಬದಲಿಗೆ ಯಾರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ. ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಝೈ ರಿಚರ್ಡ್ಸನ್ ಅವರ ಬದಲಿಯಾಗಿ ನಾಥನ್ ಎಲ್ಲಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಆಸ್ಟ್ರೇಲಿಯಾ ಕೋಚ್​ ಆಂಡ್ರ್ಯೂ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಕೊನೆಯ ಐದು ಏಕದಿನ ಪಂದ್ಯಗಳಿಗೆ ಬೇರೆ ಬೇರೆ 4 ನಾಯಕರನ್ನು ಆಯ್ಕೆ ಮಾಡಿಕೊಂಡಿದೆ. ಭಾರತ ವಿರುದ್ಧದ ಪಂದ್ಯಕ್ಕೆ ಸ್ಮಿತ್​ ನಾಯಕತ್ವ ನೀಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಂತರ ಆರನ್ ಫಿಂಚ್ ನಿವೃತ್ತರಾದ ಬಳಿಕ ಕಮಿನ್ಸ್​ಗೆ ನಾಯಕತ್ವ ನೀಡಲಾಗಿತ್ತು. ನವೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯಕ್ಕೆ ಕಮಿನ್ಸ್​ಗೆ ವಿಶ್ರಾಂತಿ ನೀಡಿದ ಕಾರಣ ತಂಡವನ್ನು ಜೋಶ್ ಹ್ಯಾಜಲ್‌ವುಡ್ ಮುನ್ನಡೆಸಿದರು. ಗಾಯ ಸಮಸ್ಯೆಯಿಂದ ಜೋಶ್ ಹ್ಯಾಜಲ್‌ವುಡ್ ಭಾರತದ ಸರಣಿಗೆ ಆಯ್ಕೆಯಾಗಿಲ್ಲ. ಹೀಗಾಗಿ ಸ್ಮಿತ್​ ಹೆಗಲಿಗೆ ನಾಯಕತ್ವದ ಹೊರೆ ಬಿದ್ದಿದೆ. ಸ್ಮಿವ್​ ಸ್ಮಿತ್​ ಈ ಹಿಂದೆ 51 ಏಕದಿನ ಪಂದ್ಯಗಳ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.

ವಿಶ್ವಕಪ್​ ಹಿನ್ನಲೆಯಲ್ಲಿ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಇಚ್ಛಿಸುತ್ತೇವೆ. ಎಂಟು ಜನ ಬ್ಯಾಟರ್​ಗಳೊಂದಿಗೆ ಕಣಕ್ಕಿಳಿಯುವ ಚಿಂತನೆ ಇದೆ. ಹೆಚ್ಚು ಆಲ್​ರೌಂಡರ್​ಗಳಿಂದ ತಂಡವನ್ನು ರಚನೆ ಮಾಡಲು ಬಯಸುತ್ತೇವೆ. ಮೂರು ಏಕದಿನದಲ್ಲಿ ಸಾಧ್ಯವಾದಷ್ಟು ತಂಡದಲ್ಲಿ ಪ್ರಯೋಗಗಳನ್ನು ಮಾಡುತ್ತೇವೆ" ಎಂದು ಕೋಚ್ ತಿಳಿಸಿದ್ದಾರೆ.

ಭಾರತ ವಿರುದ್ಧ ಆಸ್ಟ್ರೇಲಿಯಾದ ಏಕದಿನ ತಂಡ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್​, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಆಶ್ಟನ್​ ಅಗರ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್, ಆಡಮ್ ಝಂಪಾ.

ಆಸ್ಟ್ರೇಲಿಯಾ ಪ್ರವಾಸ ಭಾರತ ಏಕದಿನ ವೇಳಾಪಟ್ಟಿ:
ಮೊದಲ ಏಕದಿನ: ಮಾರ್ಚ್ 17, ಮುಂಬೈ
ಎರಡನೇ ಏಕದಿನ: ಮಾರ್ಚ್ 19, ವಿಶಾಕಪಟ್ಟಣ
ಮೂರನೇ ಏಕದಿನ: ಮಾರ್ಚ್ 22, ಚೆನ್ನೈ

ಇದನ್ನೂ ಓದಿ:ವಿರಾಟ್​ ಫಾರ್ಮ್​ ಕಳೆದುಕೊಂಡಿರಲಿಲ್ಲ, ಅದು ಶತಕದ ಲಯ ನಿರ್ಧರಿಸುವ ಮಾನದಂಡವೂ ಅಲ್ಲ: ಸುನಿಲ್​ ಗವಾಸ್ಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.