ETV Bharat / sports

ಕ್ರಿಕೆಟ್​ಗೆ ಮರಳಲು ಕಾತರ: ಭಾವನಾತ್ಮಕ ಟ್ವೀಟ್​ ಮಾಡಿದ ಕರುಣ್​ ನಾಯರ್​

author img

By

Published : Dec 11, 2022, 4:05 PM IST

Cricketer Karun Nair posted emotional tweet
ಕ್ರಿಕೆಟ್​ಗೆ ಮರಳಲು ಕಾತರ: ಭಾವನಾತ್ಮಕ ಟ್ವೀಟ್​ ಮಾಡಿದ ಕರುಣ್​ ನಾಯರ್​

ಟೆಸ್ಟ್​ ಕ್ರಿಕೆಟ್​​ನಲ್ಲಿ ತ್ರಿಶತಕ ಬಾರಿಸಿ ಭರವಸೆ ಮೂಡಿಸಿದ್ದರೂ ಕೂಡ ಬಳಿಕ ತಂಡದಿಂದ ಕಡೆಗಣಿಸಲ್ಪಟ್ಟಿರುವ ಕ್ರಿಕೆಟರ್ ಕರುಣ್​​ ನಾಯರ್​​ ಭಾವನಾತ್ಮಕ ಟ್ವೀಟ್​ ಮಾಡಿದ್ದು, ಸಾಕಷ್ಟು ವೈರಲ್​ ಆಗಿದೆ.

ಟೆಸ್ಟ್​ ಕ್ರಿಕೆಟ್​​ನಲ್ಲಿ ತ್ರಿಶತಕ ಬಾರಿಸಿ ಭರವಸೆ ಮೂಡಿಸಿದ್ದರೂ ಕೂಡ ಬಳಿಕ ತಂಡದಿಂದ ಕಡೆಗಣಿಸಲ್ಪಟ್ಟಿರುವ ಕ್ರಿಕೆಟರ್​, ಕನ್ನಡಿಗ ಕರುಣ್​​ ನಾಯರ್​​ ಹತಾಶೆಯಿಂದ ಟ್ವೀಟ್​ ಮಾಡಿದ್ದು, ಸಾಕಷ್ಟು ವೈರಲ್​ ಆಗಿದೆ. ರಣಜಿ ಟ್ರೋಫಿ ಹಾಗೂ ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ಟ್ವೀಟ್​ ಮೂಲಕ ಕರುಣ್​​ ನಾಯರ್​ ಬೇಸರ ಹೊರಹಾಕಿದ್ದಾರೆ.

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡರೂ ಸಹ ಕರುಣ್ ಬಳಿಕ ದೇಶಿ ಕ್ರಿಕೆಟ್​​ನಲ್ಲಿ ಕರ್ನಾಟಕ ತಂಡದ ಅವಿಭಾಜ್ಯ ಭಾಗವಾಗಿದ್ದರು. ಆದರೆ ಇತ್ತೀಚೆಗೆ ರಣಜಿ ತಂಡದಲ್ಲೂ ಸಹ ಅವಕಾಶ ಕ್ಷೀಣಿಸುತ್ತಿದೆ. ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಗೂ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ಶನಿವಾರ ಈ ಬಾರಿಯ ರಣಜಿ ಟ್ರೋಫಿಯ ಆರಂಭಿಕ ಕೆಲ ಪಂದ್ಯಗಳಿಗೆ ಪ್ರಕಟಗೊಂಡ ತಂಡದಲ್ಲೂ ಕೂಡ ನಾಯರ್​ಗೆ ಅವಕಾಶ ದೊರೆತಿಲ್ಲ.

  • Dear cricket, give me one more chance.🤞🏽

    — Karun Nair (@karun126) December 10, 2022 " class="align-text-top noRightClick twitterSection" data=" ">

2016ರಲ್ಲಿ ಟೀಮ್​ ಇಂಡಿಯಾ ಟೆಸ್ಟ್​ ತಂಡದಲ್ಲಿ ಪಾದಾರ್ಪಣೆ ಮಾಡಿದ್ದ ಕರುಣ್​ ನಾಯರ್​, ಇಂಗ್ಲೆಂಡ್​ ವಿರುದ್ಧ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದರು. ಅಜೇಯ 303 ರನ್‌ ಪೇರಿಸಿ ಭವಿಷ್ಯದ ಆಟಗಾರ ಎಂಬ ಭರವಸೆ ಮೂಡಿಸಿದ್ದರು. ಈ ಸಾಧನೆಯೊಂದಿಗೆ ಆಡಿದ ಕಡಿಮೆ ಟೆಸ್ಟ್​ ಪಂದ್ಯಗಳಲ್ಲೇ ತ್ರಿಶಕ ಸಾಧನೆಗೈದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಭಾರತವು ಈ ಪಂದ್ಯವನ್ನು ಇನಿಂಗ್ಸ್ ಮತ್ತು 75 ರನ್‌ಗಳಿಂದ ಜಯಿಸಿತ್ತು. ಆದರೆ 2017ರ ಮಾರ್ಚ್​ನಲ್ಲಿ ಟೆಸ್ಟ್ ಮತ್ತು ಜೂನ್ 2016ರಲ್ಲಿ ಏಕದಿನ ಪಂದ್ಯವಾಡಿದ್ದ ನಾಯರ್​, ಬಳಿಕ ಭಾರತ ತಂಡದಿಂದ ಕಡೆಗಣಿಸಲ್ಪಟ್ಟಿದ್ದಾರೆ.

ಇದೆಲ್ಲದರ ನಡುವೆ​, 'ಡಿಯರ್​ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡು' ಎಂದು ಕರುಣ್​ ನಾಯರ್ ಭಾವನಾತ್ಮಕ ಟ್ವೀಟ್​ ಮಾಡಿದ್ದಾರೆ. ಈ ಪೋಸ್ಟ್​ಗೆ ಸಾಕಷ್ಟು ಪ್ರತಿಕ್ರಿಯೆ, ಲೈಕ್ಸ್​ ಬಂದಿದ್ದು, ಅಭಿಮಾನಿಗಳು 'ಕರುಣ್ ಗಟ್ಟಿಯಾಗಿರಿ, ನಿಮ್ಮ ಮೇಲೆ ನಂಬಿಕೆ ಇಡಿ, ನೀವು ಖಂಡಿತವಾಗಿ ತಂಡಕ್ಕೆ ಮರಳುತ್ತೀರಿ' ಎಂದೆಲ್ಲ ರೀಟ್ವೀಟ್​ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೆಮೀಸ್​ನಲ್ಲಿ ಅರ್ಜೆಂಟೀನಾ ಕ್ರೊವೇಷಿಯಾ, ಮೊರಾಕ್ಕೊ ಫ್ರಾನ್ಸ್​ ಫೈಟ್​: ಯಾರಿಗೆ ಫೈನಲ್​ ಟಿಕೆಟ್​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.