ETV Bharat / sports

World Cup 2023: ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದ ಪಾಕ್​; ​ನೆದರ್ಲೆಂಡ್ಸ್ ಗೆಲುವಿಗೆ 287 ರನ್ ಗುರಿ

author img

By ETV Bharat Karnataka Team

Published : Oct 6, 2023, 1:57 PM IST

Updated : Oct 6, 2023, 6:24 PM IST

ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ​ನೆದರ್ಲೆಂಡ್ಸ್ ಬೌಲರ್​​ಗಳ ಮಾರಕ ದಾಳಿಯ ನಡುವೆ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ಭರ್ಜರಿ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

ವಿಕೆಟ್​ ಪಡೆದ ಸಂಭ್ರಮದಲ್ಲಿ ನೆದರ್ಲೆಂಡ್ಸ್ ತಂಡ
ವಿಕೆಟ್​ ಪಡೆದ ಸಂಭ್ರಮದಲ್ಲಿ ನೆದರ್ಲೆಂಡ್ಸ್ ತಂಡ

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ 49 ಓವರ್​​ಗಳಲ್ಲಿ 10 ವಿಕೆಟ್ ಕಳೆದುಕೊಂಡು 286 ರನ್ ಗಳಿಸಿದೆ. ನೆದರ್ಲೆಂಡ್ಸ್ ಗೆಲುವಿಗೆ 287 ರನ್​ ಬೇಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಫಖರ್ ಜಮಾನ್ ಮತ್ತು ಇಮಾಮ್-ಉಲ್-ಹಕ್ ಹೆಚ್ಚು ಹೊತ್ತು ಕ್ರೀಸ್​​ನಲ್ಲಿ ನಿಲ್ಲಲಿಲ್ಲ. ಕೇವಲ 15 ಎಸೆತಗಳಲ್ಲಿ 3 ಬೌಂಡರಿಸಹಿತ 12 ರನ್ ಗಳಿಸಿದ ಫಖರ್ ಜಮಾನ್, ನೆದರ್ಲೆಂಡ್ಸ್‌ನ ವ್ಯಾನ್ ಬೀಕ್ ಬೌಲಿಂಗ್​ ದಾಳಿಗೆ ಮೊದಲ ಬಲಿಯಾದರು. ಫಖರ್ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್​ ನಡೆಸುತ್ತಿದ್ದ ಇಮಾಮ್-ಉಲ್-ಹಕ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. 19 ಎಸೆತಗಳಲ್ಲಿ 2 ಬೌಂಡರಿಸಹಿತ 15 ರನ್​ ಗಳಿಸಿದ ಅವರು ಭರವಸೆ ಹುಸಿಗೊಳಿಸಿದರು. ತಂಡಕ್ಕೆ ವರದಾನವಾಗಬೇಕಿದ್ದ ನಾಯಕ ಬಾಬರ್ ಅಜಮ್​ ಕೂಡ ಬಂದ ದಾರಿಯಲ್ಲಿಯೇ ಹೋದರು. 18 ಬಾಲ್​ಗಳನ್ನು ಎದುರಿಸಿದ ಭರವಸೆಯ ಆಟಗಾರ, ಕೇವಲ 5 ರನ್​ ಕೊಡುಗೆ ನೀಡಿ ಪಾಕ್​ ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

cricket world cup 2023: pak vs ned live match
ವಿಕೆಟ್​ ಪಡೆದ ಸಂಭ್ರಮದಲ್ಲಿ ನೆದರ್ಲೆಂಡ್ಸ್ ತಂಡ

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿದ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ಜೊತೆಯಾಟ ತಂಡಕ್ಕೆ ಬಲ ನೀಡಿತು. ಇಬ್ಬರ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ರನ್​ ಕೋಟೆ ಕಟ್ಟಿಕೊಂಡಿತು. 75 ಬಾಲ್​ಗಳನ್ನು ಎದುರಿಸಿದ ಮೊಹಮ್ಮದ್ ರಿಜ್ವಾನ್ 8 ಬೌಂಡರಿ ಸಹಿತ 68 ರನ್​ ಕಲೆ ಹಾಕಿದರು. 52 ಬಾಲ್​ ಎದುರಿಸಿದ ಸೌದ್ ಶಕೀಲ್ 1 ಸಿಕ್ಸ್​ ಹಾಗೂ 9 ಬೌಂಡರಿಗಳೊಂದಿಗೆ 68 ರನ್​ ಕೊಡುಗೆಯಾಗಿ ನೀಡಿದರು. ಉತ್ತಮ ಇನ್ನಿಂಗ್ಸ್​ ಕಟ್ಟುತ್ತಿದ್ದ ಈ ಜೋಡಿ ಔಟಾದ ಬೆನ್ನಲ್ಲೇ ಪಾಕ್​ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಮೊಹಮ್ಮದ್ ನವಾಜ್ 39, ಶಾದಾಬ್ ಖಾನ್ 32 ರನ್​ಗಳ ಹೊರತು ಉಳಿದ ಆಟಗಾರರಾದ ಇಫ್ತಿಕರ್ ಅಹ್ಮದ್ 9, ಹಸನ್ ಅಲಿ 0, ಶಾಹೀನ್ ಅಫ್ರಿದಿ ಔಟಾಗದೇ 13, ಹ್ಯಾರಿಸ್ ರೌಫ್ 16 ರನ್​ ನೀಡಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ, ಪಾಕ್​ 49 ಓವರ್​​ಗಳಲ್ಲಿ 286 ರನ್​ಗಳಿಗೆ ಆಲೌಟ್​​ ಆಯಿತು.

​ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡೆ 4 ವಿಕೆಟ್​ ಪಡದರೆ, ಕಾಲಿನ್ ಅಕರ್ಮನ್ 2, ಆರ್ಯನ್ ದತ್, ಲೋಗನ್ ವ್ಯಾನ್ ಬೀಕ್, ಪಾಲ್ ವ್ಯಾನ್ ಮೀಕೆರೆನ್ ತಲಾ ಒಂದೊಂದು ವಿಕೆಟ್​ ಪಡೆದರು.

ತಂಡಗಳು ಹೀಗಿವೆ:

ನೆದರ್ಲೆಂಡ್ಸ್‌ (ಪ್ಲೇಯಿಂಗ್ XI): ವಿಕ್ರಮ್‌ಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್(ನಾಯಕ/ವಿಕೆಟ್​ ಕೀಪರ್), ಬಾಸ್ ಡಿ ಲೀಡೆ, ತೇಜಾ ನಿಡಮನೂರು, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್

cricket world cup 2023: pak vs ned live match
ವಿಕೆಟ್​ ಪಡೆದ ಸಂಭ್ರಮದಲ್ಲಿ ನೆದರ್ಲೆಂಡ್ಸ್ ತಂಡ

ಪಾಕಿಸ್ತಾನ (ಪ್ಲೇಯಿಂಗ್ XI): ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್​ ಕೀಪರ್​), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್​​​

ಇದನ್ನೂ ಓದಿ: ರಾಹುಲ್​+ ಸಚಿನ್​=ರಾಚಿನ್​​​​.. ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ವೇಗದ ಶತಕ ಸಿಡಿಸಿದ ನ್ಯೂಜಿಲೆಂಡ್ ಆಟಗಾರ... ಯಾರು ಈ ಕನ್ನಡಿಗ?

Last Updated :Oct 6, 2023, 6:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.