ETV Bharat / sports

ಕೊಹ್ಲಿ-ಇಶಾನ್ ಕಿಶನ್ ಅಬ್ಬರದ ಅರ್ಧಶತಕ.. ಆಂಗ್ಲರ ವಿರುದ್ಧ ಟೀಂ ಇಂಡಿಯಾ ಜಯಭೇರಿ..

author img

By

Published : Mar 14, 2021, 10:57 PM IST

ಆಂಗ್ಲರ ವಿರುದ್ಧ ಟೀಮ್ ಇಂಡಿಯಾ ಜಯಭೇರಿ
ಆಂಗ್ಲರ ವಿರುದ್ಧ ಟೀಮ್ ಇಂಡಿಯಾ ಜಯಭೇರಿ

ಪದಾರ್ಪಣೆ ಪಂದ್ಯದಲ್ಲಿ ಅಬ್ಬರಿಸಿದ ಕಿಶನ್ ಕೇವಲ 32 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 56 ರನ್​ಗಳಿಸಿ ಔಟಾದರು. ನಂತರ ಬಂದ ಪಂತ್​ ಕೂಡ ಅಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 13 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 26 ರನ್​ಗಳಿಸಿದ್ದಲ್ಲದೆ, ಕೊಹ್ಲಿ ಜೊತೆ 36 ರನ್​ಗಳ ಜೊತೆಯಾಟ ನೀಡಿ ಜೋರ್ಡನ್​ಗೆ ವಿಕೆಟ್​ ಒಪ್ಪಿಸಿದರು..

ಅಹ್ಮದಾಬಾದ್ : ನಾಯಕ ಕೊಹ್ಲಿ ಮತ್ತು ಯುವ ಆರಂಭಿಕ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್​ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳ ಜಯಭೇರಿ ಬಾರಿಸುವ ಮೂಲಕ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ನೀಡಿದ್ದ 165 ರನ್​ಗಳ ಗುರಿಯನ್ನು ಟೀಂ ಇಂಡಿಯಾ 17.5 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು. ಆರಂಭಿಕನಾಗಿ ಕಣಕ್ಕಿಳಿದಿದ್ದ ರಾಹುಲ್​ 6 ಎಸೆತಗಳಲ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಆದರೆ, ಯುವ ಬ್ಯಾಟ್ಸ್​ಮನ್​ ಇಶಾನ್ ಕಿಶನ್ ಜೊತೆ ಸೇರಿದ ವಿರಾಟ್​ ಕೊಹ್ಲಿ 2ನೇ ವಿಕೆಟ್​ಗೆ 94 ರನ್​ಗಳ ಜೊತೆಯಾಟ ನೀಡಿ ಆರಂಭಿಕ ಆಘಾತದಿಂದ ಪಾರುಮಾಡಿದ್ದಲ್ಲದೆ ತಂಡವನ್ನು ಸುಸ್ಥಿತಿಗೆ ತಂದರು.

ಪದಾರ್ಪಣೆ ಪಂದ್ಯದಲ್ಲಿ ಅಬ್ಬರಿಸಿದ ಕಿಶನ್ ಕೇವಲ 32 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 56 ರನ್​ಗಳಿಸಿ ಔಟಾದರು. ನಂತರ ಬಂದ ಪಂತ್​ ಕೂಡ ಅಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 13 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 26 ರನ್​ಗಳಿಸಿದ್ದಲ್ಲದೆ, ಕೊಹ್ಲಿ ಜೊತೆ 36 ರನ್​ಗಳ ಜೊತೆಯಾಟ ನೀಡಿ ಜೋರ್ಡನ್​ಗೆ ವಿಕೆಟ್​ ಒಪ್ಪಿಸಿದರು.

ವಿರಾಟ್​ ಕೊಹ್ಲಿ 49 ಎಸೆತಗಳಲ್ಲಿ 5 ಬೌಂಡರಿ ಸಹಿತ 73 ರನ್​ಗಳಿಸುವ ಮೂಲಕ ತಮ್ಮ ಫಾರ್ಮ್​ಗೆ ಮರಳಿದರು. ಅವರು ಶ್ರೇಯಸ್ ಅಯ್ಯರ್(8) ಜೊತೆಗೆ 4ನೇ ವಿಕೆಟ್​ ಮುರಿಯದ 36 ರನ್​ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಈ ಪಂದ್ಯದಲ್ಲಿ 73 ರನ್​ಗಳಿಸಿದ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ 3000 ರನ್​ ಮೈಲುಗಲ್ಲು ದಾಟಿದ ಮೊದಲ ಬ್ಯಾಟ್ಸ್​ಮನ್ ಎನಿಸಿಕೊಂಡರು.

ಇಂಗ್ಲೆಂಡ್ ಪರ ಸ್ಯಾಮ್ ಕರ್ರನ್​, ಜೋರ್ಡನ್ ಮತ್ತು ರಶೀದ್​ ತಲಾ ಒಂದು ವಿಕೆಟ್ ಪಡೆದರು. ಇದಕ್ಕು ಮುನ್ನ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಭಾರತದ ಶಿಸ್ತಿನ ದಾಳಿಯ ಮುಂದೆ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 164 ರನ್​ಗಳಿಸಲಷ್ಟೇ ಶಕ್ತವಾಯಿತು.

ಜೇಸನ್ ರಾಯ್​ 46(35 ಎಸೆತ), ಡೇವಿಡ್ ಮಲನ್ 24(23), ಬೈರ್ಸ್ಟೋವ್ 20(15), ಮಾರ್ಗನ್ 28(20) ಮತ್ತು ಸ್ಟೋಕ್ಸ್ 24(21) ರನ್​ಗಳಿಸಿದ್ದರು. ಭಾರತದ ಪರ ಭುವನೇಶ್ವರ್ ಕುಮಾರ್ 28ಕ್ಕೆ 1, ಸುಂದರ್ 29ಕ್ಕೆ 2, ಶಾರ್ದುಲ್ ಠಾಕೂರ್ 29ಕ್ಕೆ 2, ಚಹಾಲ್ 34ಕ್ಕೆ 1 ವಿಕೆಟ್ ಪಡೆದು ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.