ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ : ಇಂಗ್ಲೆಂಡ್​ನ ಸ್ಟುವರ್ಟ್ ಬ್ರಾಡ್​ಗೆ ವಿಂಡೀಸ್​ ಕ್ಯಾಪ್ಟನ್ ವಿಶ್​

author img

By

Published : Jul 29, 2020, 11:15 AM IST

ಮ್ಯಾಂಚೆಸ್ಟರ್​ನ ಓಲ್ಡ್ ಟ್ರ್ಯಾಫೋರ್ಡ್​ನಲ್ಲಿ ನಡೆದ ವಿಸ್ಡೆನ್ ಟ್ರೋಫಿಯ ನಿಣಾಯಕ ಪಂದ್ಯದಲ್ಲಿ, ಆತಿಥೇಯ ಇಂಗ್ಲೆಂಡ್ ತಂಡ​ 269 ರನ್​ಗಳ ಗೆಲುವು ಸಾಧಿಸುವ ಮೂಲಕ ವಿಂಡೀಸ್​ ವಿರುದ್ಧ 2 -1ರಿಂದ ಸರಣಿ ಗೆಲುವು ಸಾಧಿಸಿತು. ಹೀಗಾಗಿ ಪಂದ್ಯ ಗೆದ್ದ ಇಂಗ್ಲೆಂಡ್​ ಹಾಗೂ ಈ ಪಂದ್ಯದ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 500ನೇ ವಿಕೆಟ್​ ಕಿತ್ತ ಇಂಗ್ಲೆಂಡ್​ ತಂಡದ ಸ್ಟುವರ್ಟ್ ಬ್ರಾಡ್​ಗೆ ವೆಸ್ಟ್​ ಇಂಡೀಸ್​ ನಾಯಕ ಜೇಸನ್ ಹೋಲ್ಡರ್ ಶುಭ ಕೋರಿದ್ದಾರೆ.

Stuart Broad
ಸ್ಟುವರ್ಟ್ ಬ್ರಾಡ್​

ಮ್ಯಾಂಚೆಸ್ಟರ್: ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಯನ್ನು 2-1 ಅಂತರದಿಂದ ಗೆದ್ದ ಇಂಗ್ಲೆಂಡ್​ ತಂಡ, ಹಾಗೂ ಈ ಪಂದ್ಯದ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ ಕಿತ್ತ ಸ್ಟುವರ್ಟ್ ಬ್ರಾಡ್​ಗೆ ವಿಂಡೀಸ್​ ಕ್ಯಾಪ್ಟನ್​ ಜೇಸನ್ ಹೋಲ್ಡರ್​ ಅಭಿನಂದನೆ ಸಲ್ಲಿಸಿದ್ದಾರೆ.

ಇಲ್ಲಿನ ಓಲ್ಡ್ ಟ್ರ್ಯಾಫೋರ್ಡ್​ನಲ್ಲಿ ಮಂಗಳವಾರ ನಡೆದ ವಿಸ್ಡೆನ್​ ಟ್ರೋಫಿಯ ನಿಣಾಯಕ ಪಂದ್ಯದಲ್ಲಿ, ಆತಿಥೇಯ ಇಂಗ್ಲೆಂಡ್ ತಂಡ​ 269 ರನ್​ಗಳ ಗೆಲುವು ಸಾಧಿಸುವ ಮೂಲಕ ವಿಂಡೀಸ್​ ವಿರುದ್ಧ 2-1ರಿಂದ ಸರಣಿ ಗೆಲುವು ಸಾಧಿಸಿತು. ಹೀಗಾಗಿ ಪಂದ್ಯ ಗೆದ್ದ ಇಂಗ್ಲೆಂಡ್​ ಹಾಗೂ ಈ ಪಂದ್ಯದ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 500ನೇ ವಿಕೆಟ್​ ಕಿತ್ತ ಇಂಗ್ಲೆಂಡ್​ ತಂಡದ ಸ್ಟುವರ್ಟ್ ಬ್ರಾಡ್​ಗೆ ಜೇಸನ್ ಹೋಲ್ಡರ್ ಶುಭ ಕೋರಿದ್ದಾರೆ.

ನಿರ್ಣಾಯಕ ಮೂರನೇ ಟೆಸ್ಟ್​ನ ಅಂತಿಮ ದಿನವು ಸ್ಟುವರ್ಟ್ ಬ್ರಾಡ್ ಅವರ 500 ನೇ ವಿಕೆಟ್​ಗಾಗಿ ಎಲ್ಲರೂ ಕಾಯುತ್ತಿದ್ದರು. ಆ ಸಂದರ್ಭ ಸುರಿಯಲಾರಂಭಿಸಿದ ಮಳೆಯಿಂದ ಪಂದ್ಯ ವಿಳಂಬಗೊಂಡಿತು. ಅಂತಿಮವಾಗಿ ಮಳೆ ನಿಂತ ಬಳಿಕ ಬ್ರಾಡ್ 500 ವಿಕೆಟ್​ ಪಡೆಯುವ ಸಂದರ್ಭ ಬಂದಿತ್ತು.

Stuart Broad
ಸ್ಟುವರ್ಟ್ ಬ್ರಾಡ್​ಗೆ ವಿಂಡೀಸ್​ ಕ್ಯಾಪ್ಟನ್ ವಿಶ್​

ಮೊದಲ ಟೆಸ್ಟ್ ಪಂದ್ಯದಿಂದ ಬ್ರಾಡ್ ಹೊರಗುಳಿದಿದ್ದು, ನಮಗೆ ಶಾಕ್​ ಕೊಟ್ಟಿತು. ಏಕೆಂದರೆ ಸ್ಟುವರ್ಟ್ ಬ್ರಾಡ್ ಸಾಮರ್ಥ್ಯದ ಬಗ್ಗೆ ನಮಗೆ ತಿಳಿದಿದೆ ಎಂದು ಹೋಲ್ಡರ್ ಬ್ರಾಡ್​ ಸಾಧನೆಯನ್ನು ಶ್ಲಾಘಿಸಿದರು.

ಇಂಗ್ಲೆಂಡ್ ವಿರುದ್ಧದ ಸರಣಿ ಸೋಲಿನ ಬಗ್ಗೆ ಮಾತನಾಡಿದ ಹೋಲ್ಡರ್, ನಮ್ಮ ತಂಡದ ಒಟ್ಟಾರೆ ಪ್ರದರ್ಶನದ ಬಗ್ಗೆ ನಾನು ನಿರಾಶೆಗೊಂಡಿಲ್ಲ. ಫಲಿತಾಂಶದಿಂದ ನಮಗೆ ನಿರಾಸೆಯಾಗಿದ್ದು ಹೌದು. ಇಂಗ್ಲೆಂಡ್ ತಂಡ ತಮ್ಮ ಅಂಗಳದಲ್ಲಿ ಈ ಹಿಂದೆಯೂ ಉತ್ತಮವಾಗಿ ಆಡಿದೆ. ಅವರ ಅಂಕಿ - ಅಂಶಗಳು ಅದನ್ನು ತೋರಿಸುತ್ತವೆ. ಅವರು ಉತ್ತಮವಾಗಿ ಆಡಿ ಸರಣಿ ಗೆದ್ದಿದ್ದಾರೆ ಎಂದು ಹೋಲ್ಡರ್​ ಹೇಳಿದ್ದಾರೆ.

ನಿನ್ನೆ ಕೊನೆಗೊಂಡ ಮೂರನೇ ಟೆಸ್ಟ್​​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ 269 ರನ್​ಗಳ ಜಯ ಸಾಧಿಸಿದ್ದು, ಪಂದ್ಯದಲ್ಲಿ ವೇಗದ ಬೌಲರ್​ ಸ್ಟುವರ್ಟ್​​ ಬ್ರಾಡ್​ ಕೇವಲ 67 ರನ್​ ನೀಡಿ ಬರೋಬ್ಬರಿ 10 ವಿಕೆಟ್​​ ಪಡೆದು ಮಿಂಚಿದರು. ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 31ರನ್​ ನೀಡಿ 6 ವಿಕೆಟ್​ ಪಡೆದುಕೊಂಡಿದ್ದ ಬ್ರಾಡ್,​ ಎರಡನೇ ಇನ್ನಿಂಗ್ಸ್​​ನಲ್ಲೂ 36 ರನ್​ ನೀಡಿ 4 ವಿಕೆಟ್ ಪಡೆದು ಮಿಂಚಿ, ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದರ ಜೊತೆಗೆ ಇದೇ ಪಂದ್ಯದಲ್ಲಿ ಟೆಸ್ಟ್​ ಕ್ರಿಕೆಟ್​ ವೃತ್ತಿ ಬದುಕಿನ 500ನೇ ವಿಕೆಟ್​ ಕಬಳಿಸಿ ವಿಶಿಷ್ಟ ಸಾಧನೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.