ETV Bharat / sports

ಟಿ20 ರ‍್ಯಾಂಕಿಂಗ್‌: 3ನೇ ಸ್ಥಾನಕ್ಕೆ ಕುಸಿದ ರಾಹುಲ್, ವಿರಾಟ್​​ 6ರಲ್ಲಿ ಸ್ಥಿರ, ಭಾರತಕ್ಕೆ 2ನೇ ಸ್ಥಾನ

author img

By

Published : Mar 10, 2021, 10:28 PM IST

ಟಿ20 ಶ್ರೇಯಾಂಕ
ಟಿ20 ಶ್ರೇಯಾಂಕ

ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯಲ್ಲಿ 2 ಅರ್ಧಶತಕ ಸಿಡಿಸಿದ ಆ್ಯರೋನ್​ ಫಿಂಚ್(830)​ 2 ಸ್ಥಾನ ಮೇಲೇರಿರುವುದರಿಂದ ರಾಹುಲ್ ಒಂದು ಸ್ಥಾನ ಕುಸಿತ ಅನುಭವಿಸಿದ್ದಾರೆ. ಇಂಗ್ಲೆಂಡ್​ನ ಡೇವಿಡ್​ ಮಲನ್​(915) ಅಗ್ರಸ್ಥಾನದಲ್ಲಿ ಮುಂದುವರಿದ್ದಾರೆ.

ದುಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಬುಧವಾರ ಬಿಡುಗಡೆಯಾಗಿರುವ ನೂತನ ಐಸಿಸಿ ಟಿ20 ಶ್ರೇಯಾಂಕದಲ್ಲಿ 6ನೇ ಸ್ಥಾನದಲ್ಲಿ ಸ್ಥಿರವಾಗಿದ್ದರೆ, ಕನ್ನಡಿಗ ಕೆಎಲ್ ರಾಹುಲ್​ ಒಂದು ಕುಸಿತ ಕಂಡು 3ನೇ ರ‍್ಯಾಂಕ್ ಪಡೆದಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯಲ್ಲಿ 2 ಅರ್ಧಶತಕ ಸಿಡಿಸಿದ ಆ್ಯರೋನ್​ ಫಿಂಚ್ (830)​ 2 ಸ್ಥಾನ ಮೇಲೇರಿರುವುದರಿಂದ ರಾಹುಲ್ ಒಂದು ಸ್ಥಾನ ಕುಸಿತ ಅನುಭವಿಸಿದ್ದಾರೆ. ಇಂಗ್ಲೆಂಡ್​ನ ಡೇವಿಡ್​ ಮಲನ್​(915) ಅಗ್ರಸ್ಥಾನದಲ್ಲಿ ಮುಂದುವರಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 218 ರನ್​ ಸಿಡಿಸಿದ್ದ ಮಾರ್ಟಿನ್ ಗಪ್ಟಿಲ್ 8ನೇ ಸ್ಥಾನಕ್ಕೇರಿರುವ ಮೂಲಕ ಟಾಪ್​ 10ಕ್ಕೆ ಮರಳಿದ್ದಾರೆ.

ಬೌಲಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಆಸ್ಟಿನ್‌ ಅಗರ್​ 4 ಸ್ಥಾನಗಳ ಏರಿಕೆ ಕಂಡು 4 ಶ್ರೇಯಾಂಕ ಪಡೆದರೆ, ಕಿವೀಸ್​ನ ಇಶ್​ ಸೋಧಿ 3 ಸ್ಥಾನಗಳ ಏರಿಕೆ ಕಂಡು 8ನೇ ಶ್ರೇಯಾಂಕ ಪಡೆದಿದ್ದಾರೆ. ವೆಸ್ಟ್​ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಮಿಂಚಿದ್ದ ಲಂಕಾದ ಸಂದಕನ್​ 9 ಸ್ಥಾನಗಳ ಏರಿಕೆ ಕಂಡು 10 ನೇ ರ‍್ಯಾಂಕ್ ಪಡೆದಿದ್ದಾರೆ. ರಶೀದ್​ ಖಾನ್​ ಮುನ್ನಡೆಯಲ್ಲಿರುವ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಭಾರತದ ಯಾವೊಬ್ಬ ಬೌಲರ್ ಟಾಪ್ 10ರಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಭಾರತಕ್ಕೆ 2ನೇ ರ‍್ಯಾಂಕ್

ಇನ್ನು ತಂಡಗಳ ಶ್ರೇಯಾಂಕದಲ್ಲಿ ಭಾರತ ತಂಡ ಯಾವುದೇ ಸರಣಿಯನ್ನಾಡದೇ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಆಸ್ಟ್ರೇಲಿಯಾ(267 ಅಂಕ) ತಂಡ 3-2ರಲ್ಲಿ ಕಿವೀಸ್ ವಿರುದ್ಧ ಸರಣಿ ಕಳೆದುಕೊಂಡಿದ್ದರಿಂದ 3ನೇ ಸ್ಥಾನಕ್ಕೆ ಕುಸಿದ ಪರಿಣಾಮ ಭಾರತ(268) ಸುಲಭವಾಗಿ 2ನೇ ಸ್ಥಾನ ಪಡೆದುಕೊಂಡಿದೆ. ಇಂಗ್ಲೆಂಡ್ 275 ಅಂಕ ಪಡೆದು ಅಗ್ರಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.