ETV Bharat / sports

ಅರ್ಜುನ ಪ್ರಶಸ್ತಿ: ಇಶಾಂತ್​ ಶರ್ಮಾ, ದೀಪಕ್​ ಹೂಡಾ ಸೇರಿ 29 ಹೆಸರು ಶಿಫಾರಸು

author img

By

Published : Aug 18, 2020, 6:52 PM IST

ಅರ್ಜುನ ಪ್ರಶಸ್ತಿಗೆ ಇಶಾಂತ್​ ಶರ್ಮಾ ಹೆಸರು
ಇಶಾಂತ್​ ಶರ್ಮಾ

ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ದೇಶದ ಅತ್ಯಂತ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿರುವ ಇಶಾಂತ್ ಶರ್ಮಾ 'ಅರ್ಜುನ ಪ್ರಶಸ್ತಿ'ಗೆ ನಾಮ ನಿರ್ದೇಶನಗೊಂಡಿದ್ದಾರೆ.

ನವದೆಹಲಿ: ಭಾರತ ತಂಡದ ವೇಗದ ಬೌಲರ್​ ಇಶಾಂತ್​ ಶರ್ಮಾ ಹೆಸರನ್ನು 'ಅರ್ಜುನ ಪ್ರಶಸ್ತಿ'ಗೆ ನಾಮನಿರ್ದೇಶನ ಮಾಡಲಾಗಿದೆ.

ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿರುವ ಶರ್ಮಾ ಪ್ರತಿಷ್ಟಿತ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಅವರನ್ನೊಳಗೊಂಡ ಸಮಿತಿ ಈ ವರ್ಷದ 'ಅರ್ಜುನ ಪ್ರಶಸ್ತಿ'ಗೆ 29 ಮಂದಿಯ ಕ್ರೀಡಾಳುಗಳ ಹೆಸರನ್ನು ಕ್ರೀಡಾ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ.

ಈ ಪಟ್ಟಿಯಲ್ಲಿ ಬಿಲ್ಲುಗಾರಿಗೆ ಪಟು ಅತನು ದಾಸ್, ಮಹಿಳಾ ಹಾಕಿ ತಂಡದ ಆಟಗಾರ್ತಿ ದೀಪಿಕಾ ಠಾಕೂರ್, ಕ್ರಿಕೆಟಿಗ ದೀಪಕ್ ಹೂಡಾ ಮತ್ತು ಟೆನಿಸ್ ಆಟಗಾರ್ತಿ ದಿವಿಜ್ ಶರಣ್ ಹೆಸರನ್ನು ಶಿಫಾರಸು ಮಾಡಲಾಗಿದೆ.

ಇಶಾಂತ್ ಶರ್ಮಾ ಭಾರತ ತಂಡದ ಪರ 97 ಟೆಸ್ಟ್​ನಲ್ಲಿ 297 ವಿಕೆಟ್, 80 ಏಕದಿನ ಪಂದ್ಯಗಳಲ್ಲಿ 115 ಹಾಗೂ 14 ಪಂದ್ಯಗಳಲ್ಲಿ 8 ವಿಕೆಟ್​ ಸಾಧನೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.