ETV Bharat / sports

ರಣಜಿ, ವಿಜಯ್ ಹಜಾರೆ ಟೂರ್ನಿ ಬಗ್ಗೆ ಇಲ್ಲ ಒಮ್ಮತ: ಮಾರ್ಚ್​ನಲ್ಲಿ ವನಿತೆಯ ಕ್ರಿಕೆಟ್ ಆರಂಭಕ್ಕೆ ಬಿಸಿಸಿಐ ತೀರ್ಮಾನ

author img

By

Published : Jan 18, 2021, 8:23 AM IST

BCCI remains undecided on Ranji or Hazare Trophy
ಮಾರ್ಚ್​ನಲ್ಲಿ ವನಿತೆಯ ಕ್ರಿಕೆಟ್ ಆರಂಭಕ್ಕೆ ಬಿಸಿಸಿಐ ತೀರ್ಮಾನ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಷ್ಠಿತ ರಣಜಿ ಪ್ರಥಮ ದರ್ಜೆ ಪಂದ್ಯಾವಳಿ ಆಯೋಜಿಸುವ ಪರವಾಗಿದ್ದರೂ ಕೆಲವರಿಂದ ಒಮ್ಮತ ಬಾರದ ಕಾರಣ ವಿಜಯ್ ಹಜಾರೆ ಟೂರ್ನಿ ಆಯೋಜನೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಪ್ರಮುಖ ದೇಶೀಯ ಪಂದ್ಯಾವಳಿ ರಣಜಿ ಟ್ರೋಫಿ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ, ಆದರೆ ಮಾರ್ಚ್‌ನಲ್ಲಿ ಮಹಿಳಾ ಕ್ರಿಕೆಟ್ ಸೀಸನ್​ ಪ್ರಾರಂಭಿಸಲು ಅನುಮೋದನೆ ನೀಡಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ದೇಶೀಯ ಋತುಮಾನವು ಸ್ಥಗಿಸಗೊಂಡಿತ್ತು. ಆದರೆ, ಈ ತಿಂಗಳ ಆರಂಭದಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿಯೊಂದಿಗೆ ಋತುಮಾನವನ್ನು ಪ್ರಾರಂಭಿಸಲಾಗಿದ್ದು, ಬಯೋ-ಬಬಲ್‌ನಲ್ಲಿ ಪಂದ್ಯಗಳನ್ನು ಆಡಲಾಗುತ್ತಿದೆ.

ಬಿಸಿಸಿಐ ಭಾನುವಾರ ನಡೆಸಿದ ಭೆಯಲ್ಲಿ ರಣಜಿ ಟೂರ್ನಿ ಕುರಿತು ನಿರ್ಧರಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತಾದರೂ ಸದಸ್ಯರಲ್ಲಿ ಯಾವುದೇ ಒಮ್ಮತ ಇರಲಿಲ್ಲ. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಪ್ರತಿಷ್ಠಿತ ಪ್ರಥಮ ದರ್ಜೆ ಪಂದ್ಯಾವಳಿಯನ್ನು ಆಯೋಜಿಸುವ ಪರವಾಗಿದ್ದರು.

ಓದಿ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ: ಟಿ-20 ವಿಶ್ವಕಪ್​ಗೆ ಈಗಿನಿಂದಲೇ ತಾಲೀಮು

"ಅಧ್ಯಕ್ಷರು ರಣಜಿ ಟ್ರೋಫಿಯನ್ನು ನಡೆಸಲು ಒಲವು ತೋರಿದರೂ ಕೆಲವರು ಅದಕ್ಕೆ ಸಮ್ಮತಿ ಸೂಚಿಸಲಿಲ್ಲ. ಆದರೆ, ಅವರು ವಿಜಯ್ ಹಜಾರೆ ಟ್ರೋಫಿಯನ್ನು (50 ಓವರ್) ಆಯೋಜಿಸುವ ಪರವಾಗಿದ್ದರು. ರಣಜಿ ಟ್ರೋಫಿ ಅಥವಾ ವಿಜಯ್ ಹಜಾರೆ ಟ್ರೋಫಿಯನ್ನು ಆಯೋಜಿಸಲಾಗುವುದು ಮತ್ತು ಈ ವಾರದ ಅಂತ್ಯದ ವೇಳೆಗೆ ಈ ಬಗ್ಗೆ ನಿರ್ಧರಿಸಲಾಗುವುದು" ಎಂದು ಮೂಲಗಳು ತಿಳಿಸಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್-ಏಪ್ರಿಲ್ ಸಮಯದಲ್ಲಿ ಆಡುವ ನಿರೀಕ್ಷೆಯಿದೆ, ಆದ್ದರಿಂದ ಪ್ರಥಮ ದರ್ಜೆ ಪಂದ್ಯಾವಳಿಗಾಗಿ ಸ್ಲಾಟ್‌ಗಳನ್ನು ಹುಡುಕುವಲ್ಲಿ ಬಿಸಿಸಿಐಗೆ ತೊಂದರೆಯಾಗಿದೆ. ಮಹಿಳಾ ಕ್ರಿಕೆಟ್ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಬಹುಶಃ ಮಾರ್ಚ್‌ನಿಂದ ಪ್ರಾರಂಭವಾಗಲಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ಟಿ-20 ವಿಶ್ವಕಪ್‌ ನಂತರ ಆಟಗಾರ್ತಿಯರು ಕ್ರಿಕೆಟ್‌ನಿಂದ ಹೊರಗುಳಿದಿದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪುನಃಸ್ಥಾಪಿಸಲು ಬಿಸಿಸಿಐ ಶ್ರೀಲಂಕಾ ಮತ್ತು ಇಂಗ್ಲೆಂಡ್‌ಗಳೊಂದಿಗೆ ಮಾತನಾಡಲಿದೆ.

ಓದಿ ಕಾಂಗರೂಗಳಿಗೆ ಶಾಕ್ ನೀಡಿದ ಟೀಂ ಇಂಡಿಯಾ ​: 182 ರನ್ ಮುನ್ನಡೆಯಲ್ಲಿ ಆಸ್ಟ್ರೇಲಿಯಾ

"ಮಹಿಳೆಯರಿಗೆ ಪೂರ್ಣ ದೇಶೀಯ ಋತುವಿನ ಸಾಧ್ಯತೆಯಿದ್ದು, ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲು ಶ್ರೀಲಂಕಾ ಮತ್ತು ಇಂಗ್ಲೆಂಡ್ ಭಾರತಕ್ಕೆ ಬರುವ ನಿರೀಕ್ಷೆಯಿದೆ" ಎಂದು ಅಧಿಕಾರಿ ಹೇಳಿದ್ದಾರೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ತೆರಿಗೆ ವಿನಾಯಿತಿ ನೀಡುವಂತೆ ಬಿಸಿಸಿಐ ಸರ್ಕಾರವನ್ನು ಒತ್ತಾಯಿಸುತ್ತಿದೆ. ಸಭೆಯಲ್ಲಿ ಈ ವಿಷಯದ ಬಗ್ಗೆಯೂ ಚರ್ಚಿಸಲಾಯಿತು ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.