ETV Bharat / sports

'ಮೈದಾನದಲ್ಲೇ ಪಾಕ್​ ಆಟಗಾರರು ಆಕಳಿಸುತ್ತಿದ್ದರು'..! ಕಳಪೆ ಫೀಲ್ಡಿಂಗ್​ಗೆ ವಾಸೀಂ ಅಕ್ರಂ ಕಿಡಿ..

author img

By

Published : Dec 1, 2019, 9:12 AM IST

Australia vs Pakistan
ಅಹರ್ನಿಶಿ ಟೆಸ್ಟ್

ಕಳಪೆ ಫೀಲ್ಡಿಂಗ್ ಮಾಡಿದ ಪಾಕ್ ಆಟಗಾರರಾದ ಶಹೀನ್​ ಶಾ, ಯಾಸಿರ್ ಶಾ ಹಾಗೂ ಶಾನ್ ಮಸೂದ್ ಬಗ್ಗೆ ವಾಸೀಂ ಅಕ್ರಂ ಕಿಡಿಕಾರಿದ್ದಾರೆ.

ಅಡಿಲೇಡ್: ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಕ್ಷೇತ್ರ ರಕ್ಷಣೆ ಬಗ್ಗೆ ಮಾಜಿ ಕ್ರಿಕೆಟರ್‌ ವಾಸೀಂ ಅಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳಪೆ ಫೀಲ್ಡಿಂಗ್ ಮಾಡಿದ ಪಾಕ್ ಆಟಗಾರರಾದ ಶಹೀನ್​ ಶಾ, ಯಾಸಿರ್ ಶಾ ಹಾಗೂ ಶಾನ್ ಮಸೂದ್ ಬಗ್ಗೆ ವಾಸೀಂ ಅಕ್ರಂ ಕಿಡಿಕಾರಿದ್ದಾರೆ.

ಪಾಕ್​ ಬೌಲರ್​ಗಳ ದಾಳಿ ಪುಡಿಗಟ್ಟಿದ ವಾರ್ನರ್​... ತ್ರಿಶತಕ ಸಿಡಿಸಿ ನಾಟೌಟ್​

"ಶಹೀನ್ ಶಾ ಫೈನ್​ ಲೆಗ್​​ನಲ್ಲಿ ಯಾವುದೋ ಯೋಚನೆಯಲ್ಲಿ ಮುಳುಗಿದ್ದರು. ಯಾಸಿರ್ ಶಾ ಹಾಗೂ ಶಾನ್ ಮಸೂದ್ ಬಹುಶಃ ಆಕಳಿಸುತ್ತಿದ್ದರು. ಪಾಕ್ ಕ್ರಿಕೆಟಿಗರು ಚೆಂಡಿನತ್ತ ಗಮನಹರಿಸುವುದಿಲ್ಲ. ಇದೇ ಪಾಕಿಸ್ತಾನ ಕ್ರಿಕೆಟ್​ ತಂಡದ ಸಮಸ್ಯೆ" ಎಂದು ವಾಸೀಂ ಅಕ್ರಂ ಪಾಕ್ ಕ್ರಿಕೆಟ್ ಬಗ್ಗೆ ಬೇಸರ ಹೊರಹಾಕಿದ್ದಾರೆ.

"ಫೀಲ್ಡಿಂಗ್ ವಿಚಾರದಲ್ಲಿ ನಿಮ್ಮನ್ನು ನೀವೇ ಉತ್ತಮಗೊಳಿಸಬೇಕು. ನೀವು ಅನುಭವಸ್ಥ ಆಟಗಾರನೋ ಇಲ್ಲವೋ ಎನ್ನುವುದು ಗಣನೆಗೆ ಬರುವುದಿಲ್ಲ. ಬೌಂಡರಿ ಗೆರೆಯ ಐದರಿಂದ ಹತ್ತು ಯಾರ್ಡ್​ನಲ್ಲಿ ನಿಂತು ಫೀಲ್ಡಿಂಗ್ ಮಾಡಬೇಕೇ ಹೊರತು ಗೆರೆ ಸಮೀಪದಲ್ಲಿ ಅಲ್ಲ" ಎಂದು ಅಕ್ರಂ ಪಾಕ್ ತಂಡಕ್ಕೆ ಸಲಹೆ ನೀಡಿದ್ದಾರೆ.

ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್​​ನಲ್ಲಿ ಡೇವಿಡ್ ವಾರ್ನರ್ ಭರ್ಜರಿ ತ್ರಿಶತಕ ಸಿಡಿಸಿದ್ದಾರೆ. ಈ ಮೂಲಕ ಆತಿಥೇಯರ ತಂಡ 3 ವಿಕೆಟ್ ನಷ್ಟಕ್ಕೆ 589 ರನ್ ಗಳಿಸಿ ಡಿಕ್ಲೇರ್ ಮಾಡಿದೆ. ಅತ್ತ ಬ್ಯಾಟಿಂಗ್ ಆರಂಭಿಸಿರುವ ಪಾಕ್ 115 ರನ್ನಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

Intro:Body:

ಅಡಿಲೇಡ್: ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಕ್ಷೇತ್ರರಕ್ಷಣೆ ಬಗ್ಗೆ ತಂಡದ ಹಿರಿಯ ಆಟಗಾರ ವಾಸಿಂ ಅಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



ಕಳಪೆ ಫೀಲ್ಡಿಂಗ್ ಮಾಡಿದ ಪಾಕ್ ಆಟಗಾರರಾದ ಶಹೀನ್​ ಶಾ, ಯಾಸಿರ್ ಶಾ ಹಾಗೂ ಶಾನ್ ಮಸೂದ್ ಬಗ್ಗೆ ವಾಸಿಂ ಅಕ್ರಂ ಕಿಡಿಕಾರಿದ್ದಾರೆ.



"ಶಹೀನ್ ಶಾ ಫೈನ್​ ಲೆಗ್​​ನಲ್ಲಿ ಯಾವುದೋ ಯೋಚನೆಯಲ್ಲಿ ಮುಳುಗಿದ್ದರು. ಯಾಸಿರ್ ಶಾ ಹಾಗೂ ಶಾನ್ ಮಸೂದ್ ಬಹುಶಃ ಆಕಳಿಸುತ್ತಿದ್ದರು. ಪಾಕ್ ಕ್ರಿಕೆಟಿಗರು ಚೆಂಡಿನತ್ತ ಗಮನಹರಿಸುವುದಿಲ್ಲ. ಇದೇ ಪಾಕಿಸ್ತಾನ ಕ್ರಿಕೆಟ್​ ತಂಡ ಸಮಸ್ಯೆ" ಎಂದು ವಾಸಿಂ ಅಕ್ರಂ ಪಾಕ್ ಕ್ರಿಕೆಟ್ ಬಗ್ಗೆ ಬೇಸರ ಹೊರಹಾಕಿದ್ದಾರೆ. 



"ಫೀಲ್ಡಿಂಗ್ ವಿಚಾರ ನಿಮ್ಮನ್ನು ನೀವೇ ಉತ್ತಮಗೊಳಿಸಬೇಕು. ನೀವು ಅನುಭವಸ್ಥ ಆಟಗಾರನೋ ಇಲ್ಲವೋ ಎನ್ನುವುದು ಗಣನೆಗೆ ಬರುವುದಿಲ್ಲ. ಬೌಂಡರಿ ಗೆರೆಯ ಐದರಿಂದ ಹತ್ತು ಯಾರ್ಡ್​ನಲ್ಲಿ ನಿಂತು ಫೀಲ್ಡಿಂಗ್ ಮಾಡಬೇಕೇ ಹೊರತು ಗೆರೆ ಸಮೀಪದಲ್ಲಿ ಅಲ್ಲ" ಎಂದು ಅಕ್ರಂ ಪಾಕ್ ತಂಡಕ್ಕೆ ಸಲಹೆ ನೀಡಿದ್ದಾರೆ.



ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್​​ನಲ್ಲಿ ಡೇವಿಡ್ ವಾರ್ನರ್ ಭರ್ಜರಿ ತ್ರಿಶತಕ ಸಿಡಿಸಿದ್ದಾರೆ. ಈ ಮೂಲಕ ಆತಿಥೇಯರು 3 ವಿಕೆಟ್ ನಷ್ಟಕ್ಕೆ 589 ರನ್ ಗಳಿಸಿ ಡಿಕ್ಲೇರ್ ಮಾಡಿದೆ. ಅತ್ತ ಬ್ಯಾಟಿಂಗ್ ಆರಂಭಿಸಿರುವ 115 ರನ್ನಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.