ETV Bharat / sports

ಪಾಕ್​ ಬೌಲರ್​ಗಳ ದಾಳಿ ಪುಡಿಗಟ್ಟಿದ ವಾರ್ನರ್​... ತ್ರಿಶತಕ ಸಿಡಿಸಿ ನಾಟೌಟ್​

author img

By

Published : Nov 30, 2019, 12:34 PM IST

Updated : Dec 15, 2019, 12:02 PM IST

ಮೊದಲ ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದ ವಾರ್ನರ್​ ಎರಡನೇ ಪಂದ್ಯದಲ್ಲೂ ಬ್ಯಾಟಿಂಗ್​ ಅಬ್ಬರ ಮುಂದುವರಿಸಿದ್ದು ಆಕರ್ಷಕ ತ್ರಿಶತಕ ಸಿಡಿಸಿ ಪಾಕ್​ ಬೌಲಿಂಗ್​ ದಾಳಿಯನ್ನು ಪುಡಿಗಟ್ಟುತ್ತಿದ್ದಾರೆ.

David Warner hits triple century
David Warner hits triple century

ಅಡಿಲೇಡ್​: ಆ್ಯಶಸ್​ ಸರಣಿಯಲ್ಲಿ ರನ್​ ಬರ ಎದುರಿಸಿದ್ದ ಆಸೀಸ್​ ಆರಂಭಿಕ ಬ್ಯಾಟ್ಸ್​ಮನ್​ ವಾರ್ನರ್​ ತ್ರಿಶತಕ ಸಿಡಿಸಿ ಭರ್ಜರಿ ಕಮ್​ ಬ್ಯಾಕ್​ ಮಾಡಿದ್ದಾರೆ.

ಮೊದಲ ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದ ವಾರ್ನರ್​ ಎರಡನೇ ಪಂದ್ಯದಲ್ಲೂ ಬ್ಯಾಟಿಂಗ್​ ಅಬ್ಬರ ಮುಂದುವರಿಸಿದ್ದು ಆಕರ್ಷಕ ತ್ರಿಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಆರಂಭಿಕರಾಗಿ ಕಣಕ್ಕಿಳಿದಿದ್ದ ವಾರ್ನರ್​ 391 ಎಸೆತಗಳಲ್ಲಿ 37 ಬೌಂಡರಿ ಸಹಿತ 300 ರನ್​ಗಳಿಸಿ ಔಟಾಗದೆ ಉಳಿದಿದ್ದಾರೆ. ವಾರ್ನರ್​ ಅವರ ತ್ರಿಶತಕದ ನೆರವಿನಿಂದ ಆಸ್ಟ್ರೇಲಿಯಾ 537 ರನ್​ಗಳಿಸಿ ಇನ್ನಿಂಗ್ಸ್​ ಮುಂದುವರಿಸಿದೆ.

ವಾರ್ನರ್​ಗೆ ಸಾಥ್​​ ನೀಡಿದ ಮಾರ್ನಸ್​ ಲ್ಯಾಬುಶೇನ್​ 162 ರನ್​ಹಾಗೂ ಸ್ಮಿತ್​ 36 ರನ್​ಗಳಿಸಿ ಔಟಾದರು. ಪಾಕಿಸ್ತಾನ ಪರ ಆಸೀಸ್​ನ 3 ವಿಕೆಟ್​ ಶಹೀನ್​ ಅಫ್ರಿದಿ ಪಾಲಾದವು.

ಡೇವಿಡ್​ ವಾರ್ನರ್​ ಆಸ್ಟ್ರೇಲಿಯಾದ ಪರ 7ನೇ ತ್ರಿಶತಕ, ಆಸ್ಟ್ರೇಲಿಯಾ ನೆಲದಲ್ಲಿ 4ನೇ ತ್ರಿಶತಕ, ಪಾಕಿಸ್ತಾನ ವಿರುದ್ಧ ತ್ರಿಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು. ಅಲ್ಲದ ಅಡಿಲೇಡ್​ ಮೈದಾನದಲ್ಲಿ ಶತಕ ಸಿಡಿಸಿದ ಏಕೈಕ ಬ್ಯಾಟ್ಸ್​ಮನ್​ ಎನಿಸಿಕೊಂಡರು.

ಆಸ್ಟ್ರೇಲಿಯಾ ಪರ ಡಾನ್​ ಬ್ರಾಡ್ಮನ್​(2ಬಾರಿ), ಬಾಬ್​ ಸಿಂಪ್ಸನ್​, ಬಾಬ್​ ಕೌಪರ್​, ಮಾರ್ಕ್​ ಟೇಲರ್​, ಮ್ಯಾಥ್ಯೂ ಹೇಡನ್​, ಮೈಕಲ್​ ಕ್ಲಾರ್ಕ್​ ಈ ಮೊದಲು ಟೆಸ್ಟ್​ನಲ್ಲಿ ತ್ರಿಶತಕ ಸಿಡಿಸಿದ್ದಾರೆ.

Intro:Body:Conclusion:
Last Updated :Dec 15, 2019, 12:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.