ETV Bharat / sports

ಐಪಿಎಲ್​ನಲ್ಲಿ ಲೆಗ್​ ಸ್ಪಿನ್ನರ್​ಗಳು ಮ್ಯಾಚ್​ ವಿನ್ನರ್ ಎಂಬುದನ್ನು ಚಹಲ್ ತೋರಿಸಿದ್ದಾರೆ : ಮಾಲಿಂಗ ಮೆಚ್ಚುಗೆ

author img

By

Published : Apr 19, 2022, 5:15 PM IST

Yuzvendra Chahal
ಯುಜ್ವೇಂದ್ರ ಚಹಲ್ ಮ್ಯಾಚ್​ ವಿನ್ನರ್

ಚಹಲ್ ಆ ಓವರ್​ನ ಮೊದಲ ಎಸೆತದಲ್ಲಿಯೇ ವೆಂಕಟೇಶ್ ಅಯ್ಯರ್ ವಿಕೆಟ್ ಪಡೆದರೆ, ಕೊನೆಯ 3 ಎಸೆತದಲ್ಲಿ ಶ್ರೇಯಸ್​ ಅಯ್ಯರ್ ಸೇರಿದಂತೆ ಮೂರು ವಿಕೆಟ್​ ಪಡೆದರು. ಒಟ್ಟಾರೆ ಆ ಒಂದೇ ಓವರ್​ನಲ್ಲಿ 4 ವಿಕೆಟ್​ ಪಡೆಯುವ ಮೂಲಕ ಪಂದ್ಯದ ಗತಿಯನ್ನು ಸಂಪೂರ್ಣ ಬದಲಿಸಿದರು..

ಮುಂಬೈ : ಕೆಕೆಆರ್ ವಿರುದ್ಧ ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದು ಪಂದ್ಯ ಗೆಲ್ಲುವುದರಲ್ಲಿ ಪ್ರಮುಖ ಪಾತ್ರವಹಿಸಿದ ಯುಜ್ವೇಂದ್ರ ಚಹಲ್ ಪ್ರದರ್ಶನವನ್ನು ಪ್ರಶಂಸಿಸಿರುವ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ,"ಐಪಿಎಲ್​ನಲ್ಲಿ ಲೆಗ್​ ಸ್ಪಿನ್ನರ್​ಗಳು ಏಕೆ ಮ್ಯಾಚ್​​ ವಿನ್ನರ್​ಗಳು ಎನ್ನಲಾಗುತ್ತದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ " ಎಂದು ತಿಳಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡ ನೀಡಿದ್ದ 218 ರನ್​ಗಳ ಬೃಹತ್​ ಮೊತ್ತವನ್ನು ಕೋಲ್ಕತ್ತಾ ನೈಟ್​ ರೈಡರ್ಸ್ ಲೀಲಾಜಾಲವಾಗಿ ಹಿಂಬಾಲಿಸುತ್ತಿತ್ತು. ಕೊನೆಯ 4 ಓವರ್‌ವರೆಗೂ ಪಂದ್ಯ ಕೆಕೆಆರ್ ಕೈಯಲ್ಲಿತ್ತು. 24 ಎಸೆತಗಳಲ್ಲಿ 40 ರನ್​ಗಳ ಅಗತ್ಯವಿತ್ತು. ಸೆಟ್​ ಬ್ಯಾಟರ್​ಗಳಾದ ಶ್ರೇಯಸ್​ ಅಯ್ಯರ್ ​(85) ಮತ್ತು ವೆಂಕಟೇಶ್​ ಅಯ್ಯರ್​ ಕ್ರೀಸ್​ನಲ್ಲಿದ್ದರು. ಆದರೆ, 17ನೇ ಓವರ್​ ಎಸೆದ ಚಹಲ್ ಪಂದ್ಯದ ಗತಿಯನ್ನೇ ಬದಲಿಸಿದರು.

ಚಹಲ್ ಆ ಓವರ್​ನ ಮೊದಲ ಎಸೆತದಲ್ಲಿಯೇ ವೆಂಕಟೇಶ್ ಅಯ್ಯರ್ ವಿಕೆಟ್ ಪಡೆದರೆ, ಕೊನೆಯ 3 ಎಸೆತದಲ್ಲಿ ಶ್ರೇಯಸ್​ ಅಯ್ಯರ್ ಸೇರಿದಂತೆ ಮೂರು ವಿಕೆಟ್​ ಪಡೆದರು. ಒಟ್ಟಾರೆ ಆ ಒಂದೇ ಓವರ್​ನಲ್ಲಿ 4 ವಿಕೆಟ್​ ಪಡೆಯುವ ಮೂಲಕ ಪಂದ್ಯದ ಗತಿಯನ್ನು ಸಂಪೂರ್ಣ ಬದಲಿಸಿದರು.

ಚಹಲ್ ಅವರಿಗೆ ಅಪಾರವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವವಿದೆ. ಅವರು ಟೂರ್ನಮೆಂಟ್​​ ಮತ್ತು ದೇಶದ ಅತ್ಯಂತ ಅನುಭವಿ ಲೆಗ್​ ಸ್ಪಿನ್ನರ್ ಆಗಿದ್ದಾರೆ. ಅವರು ಇಂದು(ಸೋಮವಾರ) ಕೌಶಲ್ಯವನ್ನು ಹೇಗೆ ನಿಯಂತ್ರಿಸಬೇಕೆಂದು ತೋರಿಸಿಕೊಟ್ಟಿದ್ದಾರೆ. ಅವರು ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್​ ಆಡುವುದಕ್ಕೆ ತಾವೂ ಸಾಕಷ್ಟು ಯೋಗ್ಯರು ಎನ್ನುವುದನ್ನು ತೋರಿಸಿರುವುದು ಮುಖ್ಯವಾಗಿತ್ತು ಎಂದು ಮಾಲಿಂಗ ಪಂದ್ಯದ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಟೂರ್ನಿಯಲ್ಲಿ ಅದ್ಭುತ ಯಶಸ್ಸು ಸಾಧಿಸಿರುವ ಚಹಲ್ ಆಡಿರುವ 6 ಪಂದ್ಯಗಳಲ್ಲಿ7.33ರ ಎಕಾನಮಿಯಲ್ಲಿ 17 ವಿಕೆಟ್ ಪಡೆದು ಪರ್ಪಲ್ ಕ್ಯಾಪ್​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ವಯಸ್ಸು ನೋಡದೆ ಟಿ20 ವಿಶ್ವಕಪ್​ನಲ್ಲಿ ಅವರಿಗೆ ಚಾನ್ಸ್‌ ಕೊಡಿ, ಉತ್ತಮ ಫಿನಿಶರ್ ಆಗ್ತಾರೆ: ಗವಾಸ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.