ETV Bharat / sports

ವಯಸ್ಸು ನೋಡದೆ ಟಿ20 ವಿಶ್ವಕಪ್​ನಲ್ಲಿ ಅವರಿಗೆ ಚಾನ್ಸ್‌ ಕೊಡಿ, ಉತ್ತಮ ಫಿನಿಶರ್ ಆಗ್ತಾರೆ: ಗವಾಸ್ಕರ್

author img

By

Published : Apr 19, 2022, 4:46 PM IST

ಕೆಕೆಆರ್​ ತಂಡದ ಮಾಜಿ ನಾಯಕ ಈ ಆವೃತ್ತಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ಕ್ರಮವಾಗಿ 32*(14),14*(7), 44*(23), 7*(2), 34(14) ಮತ್ತು 66(34) ರನ್​ಗಳಿಸಿದ್ದಾರೆ. ಅವರ ಸ್ಟ್ರೈಕ್​ರೇಟ್​ 209 ಮತ್ತು ಸರಾಸರಿ 197 ಇದೆ.

Karthik can play finisher's role for India in T20 World Cup: Gavaskar
ಸುನಿಲ್ ಗವಾಸ್ಕರ್ -ದಿನೇಶ್ ಕಾರ್ತಿಕ್

ಮುಂಬೈ: 15ನೇ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಕ್ರಿಕೆಟ್​ ಅಭಿಮಾನಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಭಾರತದ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಆರ್​ಸಿಬಿ ಆಟಗಾರನ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂಬರುವ ಟಿ20 ವಿಶ್ವಕಪ್​ನಲ್ಲಿ ಅವರು ಭಾರತ ತಂಡದಲ್ಲಿ ಫಿನಿಶರ್ ರೋಲ್ ನಿರ್ವಹಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ರಾಯಲ್ ಚಾಲೆಂಜರ್ಸ್​ ಪರ ಅವಕಾಶ ಪಡೆದಿರುವ ಕಾರ್ತಿಕ್, ಈ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆಡಿರುವ ಎಲ್ಲಾ ಪಂದ್ಯಗಳಲ್ಲೂ ಚೆಂಡನ್ನು ಲೀಲಾಜಾಲವಾಗಿ ದಂಡಿಸುತ್ತಿದ್ದಾರೆ. ಮಾಜಿ ಕೆಕೆಆರ್​ ನಾಯಕ ಈ ಆವೃತ್ತಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ಕ್ರಮವಾಗಿ 32*(14),14*(7), 44*(23), 7*(2), 34(14) ಮತ್ತು 66(34) ರನ್​ಗಳಿಸಿದ್ದಾರೆ. ಅವರ ಸ್ಟ್ರೈಕ್​ರೇಟ್​ 209 ಮತ್ತು ಸರಾಸರಿ 197 ಇದೆ. ವಿಶೇಷವೆಂದರೆ, ಕೇವಲ ಒಂದು ಪಂದ್ಯದಲ್ಲಿ ಮಾತ್ರ ವಿಕೆಟ್​ ಒಪ್ಪಿಸಿರುವ ಅವರು ತಂಡದ ಮಧ್ಯಮ ಕ್ರಮಾಂಕದ ಬಲ ಮತ್ತು ಫಿನಿಶರ್ ಆಗಿ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Karthik can play finisher's role for India in T20 World Cup
ಭಾರತ ತಂಡಕ್ಕೆ ಕಮ್​ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿ ದಿನೇಶ್ ಕಾರ್ತಿಕ್

ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಭಾಗವಾಗಬೇಕೆಂದು ಬಯಸುತ್ತಿರುವುದಾಗಿ ಕಾರ್ತಿಕ್‌ ಈಗಾಗಲೇ ಹೇಳಿದ್ದಾರೆ. ನಾನು ಹೇಳುವುದೇನೆಂದರೆ, ಅವರ ವಯಸ್ಸಿನ ಕಡೆ ನೋಡಬಾರದು, ಅವರು ಯಾವ ರೀತಿ ಪ್ರದರ್ಶನ ಹೊರಹಾಕುತ್ತಿದ್ದಾರೆ ಎನ್ನುವುದರ ಕಡೆಗೆ ನೋಡಿ ಎಂದು ಗವಾಸ್ಕರ್ ಸ್ಟಾರ್​ ಸ್ಪೋರ್ಟ್ಸ್​ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕಾರ್ತಿಕ್​ ಕೇವಲ 34 ಎಸೆತಗಳಲ್ಲಿ 66 ರನ್​ಗಳಿಸಿದ್ದರು. ಇವರ ಸಾಹಸದಿಂದ 100ರೊಳಗೆ 5 ವಿಕೆಟ್ ಕಳೆದುಕೊಂಡಿದ್ದ ಆರ್​ಸಿಬಿ 189 ರನ್​ಗಳ ಸವಾಲಿನ ಮೊತ್ತ ದಾಖಲಿಸಲು ಸಾಧ್ಯವಾಗಿತ್ತು ಮತ್ತು 16ರನ್​ಗಳ ಜಯ ಸಾಧಿಸಲು ನೆರವಾಗಿದ್ದರು.

ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ 36 ವರ್ಷದ ಕಾರ್ತಿಕ್, "ನಾನು ದೊಡ್ಡ ಕನಸು ಹೊಂದಿದ್ದೇನೆ. ಅದನ್ನು ಸಾಧಿಸುವ ಸಲುವಾಗಿ ಕಠಿಣ ಪರಿಶ್ರಮ ವಹಿಸುತ್ತಿದ್ದೇನೆ. ದೇಶಕ್ಕಾಗಿ ಏನಾದರೂ ವಿಶೇಷ ಸಾಧನೆ ಮಾಡಬೇಕು ಎಂಬುದು ನನ್ನ ಹೆಬ್ಬಯಕೆ. ಇದು(ಐಪಿಎಲ್‌) ನನ್ನ ಪಯಣದ ಒಂದು ಭಾಗವಷ್ಟೆ. ಭಾರತ ತಂಡದ ಭಾಗವಾಗುವುದಕ್ಕೆ ನನ್ನಿಂದಾಗುವ ಎಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದೇನೆ" ಎಂದಿದ್ದರು.

ಇದನ್ನೂ ಓದಿ:ಐಪಿಎಲ್​ನಲ್ಲಿ ವೇಗವಾಗಿ 1000 ರನ್​: ಕೊಹ್ಲಿ, ಧೋನಿ, ರೋಹಿತ್​ ಹಿಂದಿಕ್ಕಿದ ಪಡಿಕ್ಕಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.