ETV Bharat / sports

Ashes Series 2023: ಆಸ್ಟ್ರೇಲಿಯಾಕ್ಕೆ 174 ರನ್​, ಇಂಗ್ಲೆಂಡ್​ಗೆ 7 ವಿಕೆಟ್​ ಅಗತ್ಯ.. ಯಾರು ಮೊದಲ ಟೆಸ್ಟ್​ ವಿನ್ನರ್​?

author img

By

Published : Jun 20, 2023, 2:23 PM IST

ಆ್ಯಶಸ್​ ಸರಣಿಯ ಮೊದಲ ಟೆಸ್ಟ್​ ಪಂದ್ಯ ದ ಕೊನೆಯ ದಿನವಾದ ಇಂದು ಉಭಯ ತಂಡಗಳಿಗೂ ಗೆಲ್ಲುವ ಅವಕಾಶ ಇದೆ. ಆಸ್ಟ್ರೇಲಿಯಾಕ್ಕೆ 174 ರನ್​ ಬೇಕಾಗಿದ್ದು, ಇಂಗ್ಲೆಂಡ್​ಗೆ 7 ವಿಕೆಟ್​ನ ಅಗತ್ಯವಿದೆ.

Ashes Series 2023
Ashes Series 2023

ಎಡ್ಜ್‌ಬಾಸ್ಟನ್ (ಲಂಡನ್​): ಆ್ಯಶಸ್​ ಸರಣಿಯ ಮೊದಲ ಟೆಸ್ಟ್​ ಪಂದ್ಯ ರೋಚಕ ಘಟ್ಟಕ್ಕೆ ತಲುಪಿದೆ. ಕೊನೆಯ ದಿನವಾದ ಇಂದು ಉಭಯ ತಂಡಗಳಿಗೂ ಗೆಲ್ಲುವ ಅವಕಾಶ ಇದೆ. ಆಸ್ಟ್ರೇಲಿಯಾ ಬಳಿ ಇಂದು ಮೂರು ಸೆಷನ್​ಗಳಿದ್ದು, ಕೇವಲ 174 ರನ್​ ಮಾತ್ರ ಬೇಕಿದೆ. ಅತ್ತ ಇಂಗ್ಲೆಂಡ್​ ಗೆಲುವಿಗೆ ಏಳು ವಿಕೆಟ್​ಗಳ ಅಗತ್ಯ ಇದೆ.

ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 3 ವಿಕೆಟ್‌ಗೆ 107 ರನ್ ಗಳಿಸಿತ್ತು. ಇದೀಗ ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜಾ ಮತ್ತು ಸ್ಕಾಟ್ ಬೋಲ್ಯಾಂಡ್ ಜೋಡಿ ಕ್ರೀಸ್ ಗಿಳಿಸಲು ಸಿದ್ಧವಾಗಿದೆ. ನಿನ್ನೆ ಇಂಗ್ಲೆಂಡ್​ನ ಬ್ಯಾಟರ್​​​​ಗಳು ಬಿರುಸಿನ ಆಟಕ್ಕೆ ಮುಂದಾಗಿ ಬೇಗ ವಿಕೆಟ್​ ಒಪ್ಪಿಸಿದರು. ಎರಡನೇ ಇನ್ನಿಂಗ್ಸ್​ನಲ್ಲಿ ಆಂಗ್ಲರು 273ಕ್ಕೆ ಸರ್ವಪತನ ಕಂಡರು. 7 ರನ್​ ಮುನ್ನಡೆಯಿಂದ ಬ್ಯಾಟಿಂಗ್​ ಆರಂಭಿಸಿದ್ದರಿಂದ ಆಸ್ಟ್ರೇಲಿಯಾಕ್ಕೆ 281 ರನ್​ ಗುರಿ ನೀಡಿದ್ದರು.

ಕ್ರೀಸ್‌ನಲ್ಲಿ ಉಸ್ಮಾನ್ ಖವಾಜಾ 34 ರನ್ ಮತ್ತು ಸ್ಕಾಟ್ ಬೋಲ್ಯಾಂಡ್ 13 ರನ್ ಗಳಿಸಿ ಔಟಾಗದೇ ಉಳಿದಿದ್ದಾರೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಕಾಂಗರೂಗಳ ವಿರುದ್ಧ 2 ವಿಕೆಟ್ ಮತ್ತು ಒಲಿ ರಾಬಿನ್ಸನ್ ಒಂದು ವಿಕೆಟ್ ಪಡೆದರು.

  • - One Day left.
    - Australia needs 174 runs.
    - England needs 7 wickets.

    Ashes at its very best, moving into the final day, A classic loading. pic.twitter.com/pzP6PFHALE

    — Johns. (@CricCrazyJohns) June 19, 2023 " class="align-text-top noRightClick twitterSection" data=" ">

ಎರಡನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭವೇ ಸಿಕ್ಕಿದೆ. ಆರಂಭಿಕ ಜೋಡಿ 61 ರನ್​ ಜೊತೆಯಾಟ ಮಾಡಿದ್ದರು. 57 ಬಾಲ್​ನಲ್ಲಿ 4 ಬೌಂಡರಿಯಿಂದ 36 ರನ್​ ಗಳಿಸಿ ಆಡುತ್ತಿದ್ದ ವಾರ್ನರ್ ಒಲಿ ರಾಬಿನ್ಸನ್​ಗೆ ವಿಕೆಟ್​ ಕೊಟ್ಟರು. ಇದರಿಂದ ಒಂದು ಉತ್ತಮ ಆರಂಭ ಅಂತ್ಯವಾಯಿತು. ನಂತರ ಬಂದ ಮಾರ್ನಸ್ ಲಬುಶೇನ್​ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಅಲ್ಲದೇ ಲಬುಶೇನ್​ ವಿಕೆಟ್​ ತೆಗೆಯಲು ಸ್ಟೋಕ್ಸ್​ ಆಕ್ರಮಣಕಾರಿ ಫೀಲ್ಡಿಂಗ್​ ಸೆಟ್​ ಮಾಡಿದ್ದರು. 15 ಬಾಲ್​​ಗಳಲ್ಲಿ 13 ರನ್​ ಗಳಿಸಿ ಮಾರ್ನಸ್​ ವಿಕೆಟ್ ಒಪ್ಪಿಸಿದರು. ಸ್ಟೀವ್​ ಸ್ಮಿತ್​ (6) ಎರಡನೇ ಇನ್ನಿಂಗ್ಸ್​ನಲ್ಲಿಯೂ ಬೃಹತ್​ ರನ್​ ಕಲೆಹಾಕುವಲ್ಲಿ ಎಡವಿದರು.

ಮೊದಲ ಇನ್ನಿಂಗ್ಸ್​ನಲ್ಲಿ ಶತಕ ದಾಖಲಿಸಿ ಇಂಗ್ಲೆಂಡ್​ ಬೌಲರ್​ಗಳನ್ನು ಕಾಡಿದ್ದ ಉಸ್ಮಾನ್​ ಖವಾಜಾ ಕ್ರೀಸ್​ನಲ್ಲಿದ್ದು, 81 ಬಾಲ್​ನಲ್ಲಿ 31 ರನ್​ ಗಳಿಸಿ ರಕ್ಷಣಾತ್ಮಕ ಆಟ ಆಡುತ್ತಿದ್ದಾರೆ. ಅವರ ಜೊತೆಗೆ ನಿನ್ನೆ ನೈಟ್​ ಜವಾಚ್​ ಮೆನ್​ ಆಗಿ ಬಂದ ಸ್ಕಾಟ್​ ಬೋಲ್ಯಾಂಡ್​​ 19 ಬಾಲ್​ನಲ್ಲಿ 13 ರನ್​ ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಇಂಗ್ಲೆಂಡ್​ ಇಂದು ಕವಾಜಾ ಅವರ ವಿಕಟ್​ಗಾಗಿ ಸಕಲ ಪ್ರಯತ್ನ ಮಾಡಲಿದೆ. ನಂತರ ಕಾಂಗರೂ ಪಡೆ ಬಳಿ ಕ್ಯಾಮರಾನ್​ ಗ್ರೀನ್​, ಅಲೆಕ್ಸ್​ ಕ್ಯಾರಿ ಮತ್ತು ನಾಯಕ ಪ್ಯಾಟ್​ ಕಮಿನ್ಸ್​ ಅವರ ವಿಕೆಟ್​ ಇದೆ. ಆದಷ್ಟು ಬೇಗ ವಿಕೆಟ್​ಗಳನ್ನು ಉರುಳಿಸಿದರೆ. ಇಂಗ್ಲೆಂಡ್​ ಗೆಲುವು ಖಚಿತ. ಇಲ್ಲವಾದಲ್ಲಿ 90 ಓವರ್​ಗಳಲ್ಲಿ 174 ರನ್​ ಗಳಿಸುವುದು ಆಸಿಸ್​ಗೆ ಕಷ್ಟವಾಗದು.

ಇದನ್ನೂ ಓದಿ: On This Day: ದ್ರಾವಿಡ್ - ಗಂಗೂಲಿ - ಕೊಹ್ಲಿ ಟೆಸ್ಟ್ ವೃತ್ತಿಜೀವನ ಪ್ರಾರಂಭಿಸಿದ ದಿನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.