ETV Bharat / sports

ಆರ್​ಸಿಬಿಗೆ ಮತ್ತೊಮ್ಮೆ ಕರಾಳದಿನವಾದ ಏಪ್ರಿಲ್ 23! ಅಂದು 49, ಇಂದು 68ಕ್ಕೆ ಆಲೌಟ್​

author img

By

Published : Apr 23, 2022, 9:27 PM IST

April 23, Unforgettable day for RCB in IPL history
ರಾಯಲ್ ಚಾಲೆಂಜರ್ಸ್ ಬೆಂಗಳೂರು

2013ರ ಏಪ್ರಿಲ್ 23ರಂದು​ 263 ರನ್​ಗಳಿಸಿದ್ದ ಆರ್​ಸಿಬಿ, 2017ರಲ್ಲಿ 49 ರನ್​ಗಳಿಗೆ ಆಲೌಟ್ ಆಗಿತ್ತು. ಇದೀಗ 2022ರ ಏಪ್ರಿಲ್ 23ರಂದು ಮತ್ತೊಮ್ಮೆ 68ಕ್ಕೆ ಆಲೌಟ್ ಆಗಿದೆ.

ಮುಂಬೈ: ಏಪ್ರಿಲ್​ 23 ಐಪಿಎಲ್ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವ ದಿನ. ಹಾಗೆಯೇ ಆರ್​ಸಿಬಿಗೂ ಕೂಡ. ಇದೇ ದಿನ 2013ರಲ್ಲಿ 263 ರನ್​ಗಳ ಐಪಿಎಲ್ ಇತಿಹಾಸದ ಗರಿಷ್ಠ ರನ್​ ಸಿಡಿಸಿದ ಬೆಂಗಳೂರು ತಂಡ, 4 ವರ್ಷಗಳ ನಂತರ 2017ರಲ್ಲಿ ಕೇವಲ 49 ರನ್​ಗಳಿಗೆ ಆಲೌಟ್ ಆಗುವ ಮೂಲಕ ಶ್ರೀಮಂತ ಲೀಗ್​ನಲ್ಲಿ ಕಳಪೆ ಮೊತ್ತ ದಾಖಲಿಸಿದ ಕುಖ್ಯಾತಿಗೂ ಒಳಗಾಗಿತ್ತು.

2013ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್​ಸಿಬಿ 5 ವಿಕೆಟ್ ಕಳೆದುಕೊಂಡು 263 ರನ್​ಗಳಿಸಿತ್ತು. ಈ ಪಂದ್ಯದಲ್ಲಿ ಕ್ರಿಸ್​ ಗೇಲ್ ಅಜೇಯ 175 ರನ್​ಗಳಿಸಿದ್ದರು. ಈ ಪಂದ್ಯವನ್ನು ಆರ್​​ಸಿಬಿ 130 ರನ್​ಗಳಿಂದ ಗೆದ್ದು ಬೀಗಿತ್ತು.

ಕಾಕತಾಳೀಯ ಎಂದರೆ ಇದೇ ದಿನ 2017ರಲ್ಲಿ ಆರ್​ಸಿಬಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ 132 ರನ್​ಗಳನ್ನು ಬೆನ್ನಟ್ಟಲಾಗದೇ ಕೇವಲ 49 ರನ್​ಗಳಿಗೆ ಆಲೌಟ್ ಆಗಿತ್ತು. ದುರಾದೃಷ್ಟವೆಂದರೆ ಈ ಪಂದ್ಯದಲ್ಲಿ ತಂಡದ ಯಾವೊಬ್ಬ ಬ್ಯಾಟರ್ ಕೂಡಾ​ ಎರಡಂಕಿ ಮೊತ್ತ ದಾಟಿರಲಿಲ್ಲ. ತಂಡದ ಗರಿಷ್ಠ ಮೊತ್ತವೆಂದರೆ ಕೇದರ್ ಜಾಧವ್​ರ 9 ರನ್​. ಆ ಪಂದ್ಯದಲ್ಲಿ ಕ್ರಿಸ್ ವೋಕ್ಸ್​ 6ಕ್ಕೆ3, ಗ್ರ್ಯಾಂಡ್​ಹೋಮ್​ 4ಕ್ಕೆ3 ಮತ್ತು ನೇತನ್ ಕೌಲ್ಟರ್​ ನೈಲ್ 21ಕ್ಕೆ3 ಮತ್ತು ಉಮೇಶ್ ಯಾದವ್​ 15ಕ್ಕೆ1 ವಿಕೆಟ್​ ಪಡೆದಿದ್ದರು.

ಮತ್ತದೇ ಕಾರಳ ನೆನಪು: ಏಪ್ರಿಲ್ 23 ಸಿಹಿ-ಕಹಿ ಅನುಭವ ಹೊಂದಿದ್ದ ಆರ್​ಸಿಬಿಗೆ ಈ ವರ್ಷ ಮತ್ತೆ ಕರಾಳ ದಿನವಾಗಿದೆ. ಮುಂಬೈನ ಬ್ರೆಬೋರ್ನ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಕೇವಲ 68 ರನ್​ಗಳಿಗೆ ಆಲೌಟ್​ ಆಗಿದೆ. ಅಂದು ನಾಯಕನಾಗಿದ್ದ ವಿರಾಟ್ ಕೊಹ್ಲಿ 2017ರಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು, ಇಂದು ಕೂಡ ಶೂನ್ಯಕ್ಕೆ ಔಟಾದರು.

ಇದನ್ನೂ ಓದಿ: 7 ಪಂದ್ಯಗಳಿಗೆ 491ರನ್​! ಕೊಹ್ಲಿಯ 2016ರ ದಾಖಲೆಯತ್ತ ಬಟ್ಲರ್​ ಓಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.