ETV Bharat / sitara

‘ಬ್ರಹ್ಮಚಾರಿ’ಯ ಫಿಟ್ನೆಸ್​​​​​​​​ ಸೀಕ್ರೆಟ್​​​​​ ಬಿಚ್ಚಿಟ್ಟ ನೀನಾಸಂ ಸತೀಶ್​​​​​​​

author img

By

Published : Oct 20, 2019, 9:32 AM IST

ಬ್ರಹ್ಮಚಾರಿ

ನೀನಾಸಂ ಸತೀಶ್​ ಅಭಿನಯದ ‘ಬ್ರಹ್ಮಚಾರಿ’ ಚಿತ್ರದ ಹಿಡ್ಕ ಹಿಡ್ಕ.. ತಡ್ಕ ತಡ್ಕ... ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಸಖತ್ ಫಿಟ್ ಆಗಿ ಕಾಣುವ ಸತೀಶ್​, ಚಿತ್ರಕ್ಕಾಗಿಯೇ ಎರಡು ತಿಂಗಳು ಡಯಟ್ ಮಾಡಿ ಜಿಮ್​​ನಲ್ಲಿ ವರ್ಕ್ ಔಟ್ ಮಾಡಿದ್ದರಂತೆ.

ನೀನಾಸಂ ಸತೀಶ್​ ಅಭಿನಯದ ‘ಬ್ರಹ್ಮಚಾರಿ’ ಚಿತ್ರದ ಹಿಡ್ಕ ಹಿಡ್ಕ.. ತಡ್ಕ ತಡ್ಕ... ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ನವೀನ್ ಸಜ್ಜು, ಪಿಂಕಿ ಮೈದಾನಿ, ಭಾರ್ಗವಿ ಪಿಳ್ಳೈ ಹಾಡಿರುವ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಸಿನಿ ರಸಿಕರ ಮನ ಗೆದ್ದಿರುವ ಈ ಹಾಡಿನಲ್ಲಿ ನೀನಾಸಂ‌ ಸತೀಶ್ ಹಾಗೂ ಅದಿತಿ ಪ್ರಭುದೇವ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಚಿತ್ರ ರಸಿಕರ ಮನಸೋಲುವಂತಿದೆ. ಸಖತ್ ಫಿಟ್ ಆಗಿ ಕಾಣುವ ಸತೀಶ್​, ಚಿತ್ರಕ್ಕಾಗಿಯೇ ಎರಡು ತಿಂಗಳು ಡಯಟ್ ಮಾಡಿ ಜಿಮ್​​ನಲ್ಲಿ ವರ್ಕ್ ಔಟ್ ಮಾಡಿದ್ದರಂತೆ.

ನನ್ನ ಪರ್ಸನಲ್ ಕೋಚ್ ಶ್ಯಾಮ್ ಅವರ ಗೈಡೆನ್ಸ್​​​ನಲ್ಲಿ ಎರಡು ತಿಂಗಳು ವರ್ಕ್ ಔಟ್ ಮಾಡಿದೆ. ನಾನು ವರ್ಕ್ ಔಟ್ ಮಾಡಿರೋದು ಸ್ಕ್ರೀನ್ ಮೇಲೆ ಕಾಣಿಸುತ್ತೆ ಎಂದು ನೀನಾಸಂ ಸತೀಶ್​ ತಿಳಿಸಿದರು.

ಫಿಟ್ನೆಸ್​​ ಸೀಕ್ರೆಟ್​ ಬಿಚ್ಚಿಟ್ಟ ನೀನಾಸಂ ಸತೀಶ್

ಬ್ರಹ್ಮಚಾರಿ ಚಿತ್ರದಲ್ಲಿ ನೀನಾಸಂ ಸತೀಶ್​ ರಾಮು ಪಾತ್ರದಲ್ಲಿ ಕಾಣಿಸಲಿದ್ದು, ಅದಿತಿ ಪ್ರಭುದೇವ ಸುನಿತಾ ಕೃಷ್ಣಮೂರ್ತಿಯಾಗಿ ಮಿಂಚಲಿದ್ದಾರೆ. ಹಿರಿಯ ನಟ ದತ್ತಣ್ಣ, ಶಿವರಾಜ ಕೆ.ಆರ್.​ ಪೇಟೆ, ಅಶೋಕ್​ ಶರ್ಮಾ ಸೇರಿದಂತೆ ಬಹು ತಾರಾಗಣವಿದೆ.

ಬ್ರಹ್ಮಚಾರಿ ಚಂದ್ರ ಮೋಹನ್ ಆಕ್ಷನ್​ ಕಟ್​ ಹೇಳಿರುವ ರೋಮ್ಯಾಂಟಿಕ್ ಎಂಟರ್​​ಟೈನ್​ಮೆಂಟ್​​ ಚಿತ್ರವಾಗಿದ್ದು, ಉದಯ್ ಕೆ. ಮೆಹ್ತಾ ಚಿತ್ರ ನಿರ್ಮಿಸಿದ್ದಾರೆ. ಧರ್ಮ ವಿಶ್ ಸಂಗೀತ ನೀಡಿದ್ದಾರೆ. ನವೆಂಬರ್​ 15ಕ್ಕೆ ಚಿತ್ರ ತೆರೆಗೆ ಅಪ್ಪಳಿಸಲಿದೆ.

Intro:ಅಭಿನಯ ಚತುರ ನೀನಾಸಂ ಸತೀಶ ಅಭಿನಯದ " ಬ್ರಹ್ಮಚಾರಿ" ಚಿತ್ರದ ಹಿಡ್ಕ ಹಿಡ್ಕ ತಡ್ಕ ತಡ್ಕ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಸಾಂಗ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.ಈ ಹಾಡಿನಲ್ಲಿ ನೀನಾಸಂ‌ ಸತೀಶ್ ಹಾಗೂ ಅಧಿತಿ ಸಖತಾಗಿ‌ ಸ್ಟೆಪ್ ಹಾಕಿದ್ದು, ಹಾಡಿನಲ್ಲಿ" ಬಜಾರ್" ನ ಪಾರಿ " ಅಯೋಗ್ಯ"ನಿಗೆ ಸ್ವಲ್ಪ ಜೋರಾಗೆ ಕ್ವಾಟ್ಲೆ ಕೊಟ್ಟಿದ್ದಾರೆ.ಅಲ್ಲದೆ ಈ ಹಾಡಿನಲ್ಲಿ ಇಬ್ಬರು ಕ್ಯೂಟ್ ಆಗಿ ಕಾಣಿಸ್ತಾರೆ.ಅಲ್ಲದೆ ಸಖತ್ ಸತೀಶ್ ಫಿಟ್ ಆಗಿ ಕಾಣಿಸ್ತಾರೆ.ಈ ಹಾಡಿನಲ್ಲಿ ಚೆನ್ನಾಗಿ ಸ್ಲಿಮ್ ಆಗಿ ಕಾಣಿಸುವ ಸಲುವಾಗಿ ಸತೀಶ ನೀನಾಸಂ ಬರೋಬರಿ ಎರಡು ತಿಂಗಳು ಡಯಟ್ ಮಾಡಿ ಜಿಮ್ ನಲ್ಲಿ ವರ್ಕ್ ಔಟ್ ಮಾಡಿದರಂತೆ.ಇನ್ನೂ ವಿಷ್ಯವನ್ನು ಸತೀಶ್ ನೀನಾಸಂ ಅವರೆ ರಿವೀಲ್ ಮಾಡಿದ್ದು,


Body: ಶೂಟಿಂಗ್ ಮುಂಚೆ ಸಾಂಗ್ ಕೇಳಿದಾಗ ಹಾಡಿಗೆ ದೊಡ್ಡ ಸೆಟ್ ಹಾಕಿ ಶೂಟ್ ಮಾಡಲು ಪ್ಲಾನ್ ಮಾಡಿದ್ರು, ಒಳ್ಖೆ ಹಾಡು, ಸೂಪರ್ ಕಾಸ್ಟ್ಯೂಮ್ ಇದೆಲ್ಲದರ ಜೊತೆಗೆ ಬ್ಯೂಟಿಪುಲ್ ಹಿರೋಹಿನ್ ಇವರೆಲ್ಲಾ ಇದ್ದಾಗ ನಾನು ಚೆನ್ನಾಗಿ ಕಾಣಿಸ ಬೇಕು ಎಂಬ ಹಠದಲ್ಲಿ ಎರಡು ತಿಂಗಳು ಜಿಮ್ ನಲ್ಲಿ ವರ್ಕ್ ಔಟ್ ಮಾಡಿದೆ.ನನ್ನ ಪರ್ಸನಲ್ ಕೋಚ್ ಶ್ಯಾಮ್ ಅವರ ಗೈಡೆನ್ಸ್ ನಲ್ಲಿ ಎರಡು ತಿಂಗಳು ವರ್ಕ್ ಔಟ್ ಮಾಡಿದಿ‌.ನಾನು ವರ್ಕ್ ಔಟ್ ಮಾಡಿರೋದು ಹಾಡಿ ನಲ್ಲಿ ಸ್ಕ್ರೀನ್ ಮೇಲೆ ಕಾಣಿಸುತ್ತೆ.ಅಲ್ಲಸೆ ನಾನು ಶೋಅಪ್ ಕೊಟ್ಟಿದ್ದೀನಿ ಅದು ಚಿತ್ರ ರಿಲೀಸ್ ಅದಮೇಲೆ ರಿವೀಲ್ ಆಗುತ್ತೆ.ನಾನು ಏನ್ ವರ್ಕ್ ಔಟ್ ಮಾಡಿದ್ದೀನಿ‌ ಅಂತ. ನೋಡಲು ಸಿನಿಮಾ ರಿಲೀಸ್ ವರೆಗೂ ಕಾಯಬೇಕು ಎಂದು ಸತೀಶ್ ಮಾಡಿದ ಕಸರತ್ತನ ಬಗ್ಗೆ ಸಿಕ್ರೇಟ್ ಮೇಂಟೈನ್ ಮಾಡಿದ್ರು.


ಸತೀಶ ಎಂಬಿ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.