ETV Bharat / sitara

'ಗಂಗೂಬಾಯಿ ಕಾಠಿಯಾವಾಡಿ' ಟ್ರೈಲರ್ ರಿಲೀಸ್​.. ವೇಶ್ಯೆಯಾಗಿ ಆಲಿಯಾ ಭಟ್​ ಮಿಂಚು!

author img

By

Published : Feb 4, 2022, 4:31 PM IST

ಆಲಿಯಾ ಭಟ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ ಟ್ರೈಲರ್ ಇಂದು ರಿಲೀಸ್​ ಆಗಿದೆ. ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ಸಖತ್​ ಇಂಪ್ರೆಸ್​ ಮಾಡಿದ್ದಾರೆ..

Gangubai Kathiawadi trailer
Gangubai Kathiawadi trailer

ಹೈದರಾಬಾದ್ : ಬಾಲಿವುಡ್ ನಟಿ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಠಿಯಾವಾಡಿ ಚಿತ್ರದ ಟ್ರೈಲರ್​ ಇಂದು ರಿಲೀಸ್ ಆಗಿದೆ. ಗಂಗೂಬಾಯಿ ಪಾತ್ರದಲ್ಲಿ ನಟಿ ಮಿಂಚು ಹರಿಸಿದ್ದು, ಅತಿಥಿ ಪಾತ್ರದಲ್ಲಿ ನಟ ಅಜಯ್ ದೇವಗನ್ ಕಾಣಿಸಿದ್ದಾರೆ. ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ಸಖತ್​ ಇಂಪ್ರೆಸ್​ ಮಾಡಿದ್ದಾರೆ.

Gangubai Kathiawadi Trailer
‘ಗಂಗೂಬಾಯಿ ಕಾಠಿಯಾವಾಡಿ’ದಲ್ಲಿ ಆಲಿಯಾ

ಕೋವಿಡ್ ಕಾರಣದಿಂದಾಗಿ ಮೇಲಿಂದ ಮೇಲೆ ರಿಲೀಸ್ ದಿನಾಂಕ ಮೂಂದೂಡಿಕೆ ಮಾಡಲಾಗುತ್ತಿತ್ತು. ಆದರೆ, ಇದೀಗ ಫೆಬ್ರವರಿ 25ರಂದು ತೆರೆಗೆ ಅಪ್ಪಳಸಲಿದ್ದು, ಚಿತ್ರತಂಡ ಇಂದು ಟ್ರೈಲರ್ ರಿಲೀಸ್ ಮಾಡಿದೆ.

Gangubai Kathiawadi Trailer
ಆಲಿಯಾ ಭಟ್​ 'ಗಂಗೂಬಾಯಿ ಕಾಠಿಯಾವಾಡಿ'

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಠಿಯಾವಾಡಿ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಕಾಮಾಟಿಪುರದ ಡಾನ್​ ಆಗಿ ಆಲಿಯಾ ಭಟ್​ ಮಿಂಚು ಹರಿಸಿದ್ದಾರೆ.

Gangubai Kathiawadi Trailer
‘ಗಂಗೂಬಾಯಿ ಕಾಠಿಯಾವಾಡಿ’ದಲ್ಲಿ ಆಲಿಯಾ

ಟ್ರೈಲರ್​ನಲ್ಲಿ ಆಲಿಯಾ ಭಟ್​ ವೇಶ್ಯೆಯಾಗಿ ಮಿಂಚು ಹರಿಸಿದ್ದು, ಪ್ರಮುಖ 10 ದೃಶ್ಯ ಅಲ್ಲಿನ ನೈಜ್ಯತೆ ಬಗ್ಗೆ ಬೆಳಕು ಚೆಲ್ಲುತ್ತವೆ. 16ನೇ ವಯಸ್ಸಿನಲ್ಲೇ ಮುಂಬೈಗೆ ಬರುವ ಗಂಗೂಬಾಯಿ ಅಲ್ಲಿನ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಡ್ತಾರೆ.

Gangubai Kathiawadi Trailer
ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’
Gangubai Kathiawadi Trailer
‘ಗಂಗೂಬಾಯಿ ಕಾಠಿಯಾವಾಡಿ’

ಇದನ್ನೂ ಓದಿರಿ: ಪೋರ್ನ್​ ವಿಡಿಯೋ ದಂಧೆ : ಬಂಧನದಿಂದ ನಟಿ ಶೆರ್ಲಿನ್​ ಚೋಪ್ರಾಗೆ ಸುಪ್ರೀಂಕೋರ್ಟ್​​ ರಕ್ಷಣೆ

ಮುಂಬೈನ ರೆಡ್ ಲೈಟ್​ ಏರಿಯಾದಲ್ಲಿ ಕೆಲಸ ಮಾಡುವ ಗಂಗೂಬಾಯಿ ತದ ನಂತರ ಅಲ್ಲಿನ ಪ್ರಮುಖ ಮಹಿಳೆಯಾಗಿ ಗುರುತಿಸಿಕೊಳ್ಳುತ್ತಾಳೆ. ಗಂಗೂಬಾಯಿಯನ್ನ ಹಣಕ್ಕಾಗಿ ಮಾರಾಟ ಮಾಡಿರುವ ವಿಷಯ ಆಕೆಗೆ ಗೊತ್ತಾಗುತ್ತಿದ್ದಂತೆ ಬಲವಾಗಿ ವಿರೋಧ ಮಾಡುತ್ತಾಳೆ. ಇದೆಲ್ಲವೂ ಟ್ರೈಲರ್​ನಲ್ಲಿ ಅದ್ಧೂರಿಯಾಗಿ ಮೂಡಿ ಬಂದಿದೆ.

Gangubai Kathiawadi Trailer
ಕಾಮಾಟಿಪುರದ ಗಂಗೂಬಾಯಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.