ETV Bharat / science-and-technology

ವಾಟ್ಸ್ಆ್ಯಪ್​ ಹೊಸ ಫೀಚರ್.. ವಿಡಿಯೋ ಕಾಲ್ ಲಿಂಕ್​ ಶೇರ್​ ಆಪ್ಷನ್​

author img

By

Published : Sep 27, 2022, 4:04 PM IST

Introduction of WhatsApp new feature
ವಾಟ್ಸ್ಯಾಪ್​ ಹೊಸ ಫೀಚರ್​ ಪರಿಚಯ

ಈ ಹೊಸ ಫೀಚರ್​ ಈ ವಾರದಿಂದಲೇ ವಾಟ್ಸ್​ ಆ್ಯಪ್​ನಲ್ಲಿ ಜಾರಿಗೆ ಬರಲಿದ್ದು, ಕಾಲ್ ಲಿಂಕ್ ಫೀಚರ್​ಗಾಗಿ ಬಳಕೆದಾರರು ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ಹೊಂದಿರಬೇಕು.

ವಾಷಿಂಗ್ಟನ್​: ಸದ್ಯ Zoom ಅಥವಾ Google Meet ನಂತಹ ಅಪ್ಲಿಕೇಶನ್​ಗಳಲ್ಲಿ ವಿಡಿಯೋ ಕರೆಗಳ ಲಿಂಕ್​ ಕಳುಹಿಸುವ ಆಪ್ಷನ್​ ಇರುವುದು ಸಾಮಾನ್ಯವಾಗಿದೆ. ಆದರೆ ಇದೀಗ ಜನಪ್ರಿಯ ಚಾಟಿಂಗ್​ ಆ್ಯಪ್​ ವಾಟ್ಸ್​ ಆ್ಯಪ್​ ಸಹ ಈ ಫೀಚರ್​ ಅನ್ನು ಹೊರ ತರುತ್ತಿದ್ದು, ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಾಲ್​ ಲಿಂಕ್​ ಹಂಚಿಕೊಳ್ಳಬಹುದು.

ಮಾರ್ಕ್​ ಜುಕರ್​ಬರ್ಗ್​ ಈ ಹೊಸ ಫೀಚರ್​ ಬಗ್ಗೆ ಫೇಸ್​ಬುಕ್​ನಲ್ಲಿ ಘೋಷಿಸಿದ್ದು, ವಾಟ್ಸ್ ಆ್ಯಪ್​ ಬಳಕೆದಾರರು ಒಂದೇ ಟ್ಯಾಪ್​ನೊಂದಿಗೆ ಈ ಲಿಂಕ್​ ಮೂಲಕ ವಾಟ್ಸ್​ ಆ್ಯಪ್​ ಕರೆಗಳಿಗೆ ಜಾಯಿನ್​ ಆಗಬಹುದು. ಕಂಪನಿಯು 32 ಮಂದಿಗಳ ಎನ್​ಕ್ರಿಪ್ಟ್​ ಮಾಡಿದ ವಿಡಿಯೋ ಕರೆಗಳನ್ನು ಪರೀಕ್ಷಿಸುತ್ತಿದೆ ಎಂದು ಹೇಳಿದ್ದಾರೆ. ಕಂಪನಿಯು ಮೊದಲ ಬಾರಿಗೆ ವಿಸ್ತೃತ ಗ್ರೂಪ್​ ಕಾಲ್​ ಫೀಚರ್​ ಅನ್ನು ಏಪ್ರಿಲ್​ನಲ್ಲಿ ಘೋಷಿಸಿತ್ತು. ಆದರೆ ಈಗ ಅದನ್ನು ಸೀಮಿತ ಬಳಕೆದಾರರಿಗಾಗಿ ಹೊರತರುತ್ತಿದೆ.

ಕಾಲ್ಸ್​ ಟ್ಯಾಬ್ ಅಡಿ ವಿಡಿಯೋ ಲಿಂಕ್ ಅನ್ನು ರಚಿಸುವ ಆಯ್ಕೆ ಇರಲಿದೆ. ಲಿಂಕ್ ಅನ್ನು ರಚಿಸಿದ ನಂತರ, ಅವರು ವಿಡಿಯೋ ಕರೆಗೆ ಸೇರಲು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಬಹುದು. ಈ ಹೊಸ ಫೀಚರ್​ ಈ ವಾರದಿಂದಲೇ ವಾಟ್ಸ್​​​ ಆ್ಯಪ್​ನಲ್ಲಿ ಜಾರಿಗೆ ಬರಲಿದ್ದು, ಹೊಸ ಫೀಚರ್​ಗಾಗಿ ನಿಮ್ಮ ಅಪ್ಲಿಕೇಶನ್​ ಅನ್ನು ಅಪ್ಡೇಟ್​ ಮಾಡಬೇಕಾಗಿದೆ.

ಈ ಲಿಂಕ್​ ಉಪಯೋಗಿಸದೇ ಇದ್ದ 90 ದಿನಗಳ ನಂತರ ಲಿಂಕ್​ ಅವಧಿ ಮುಗಿಯಲಿದೆ. ಒಂದು ವೇಳೆ ನೀವು ವಾಟ್ಸ್​ ಆ್ಯಪ್​ ಬಳಸದ ಯಾರಿಗಾದರೂ ಲಿಂಕ್​ ಕಳುಹಿಸಿದರೆ, ಅವರು ವಾಟ್ಸ್​​​ಆ್ಯಪ್​ ಅಪ್ಲಿಕೇಶನ್​ ಡೌನ್​ಲೋಡ್​ ಮಾಡುವಂತೆ ನಿರ್ದೇಶನ ನೀಡಲಾಗುತ್ತದೆ. ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿದ ನಂತರವಷ್ಟೇ ಅವರು ಆ ಲಿಂಕ್​ ಮೂಲಕ ವಿಡಿಯೋ ಕಾಲ್​ಗೆ ಜಾಯಿನ್​ ಆಗಲು ಸಾಧ್ಯವಾಗುತ್ತದೆ.

ಕಳೆದ ತಿಂಗಳು, ಮೆಟಾ WhatsApp ನಲ್ಲಿ ಕಮ್ಯೂನಿಟಿ ಫೀಚರ್ಸ್​ಗಳನ್ನು ಪರೀಕ್ಷಿಸಲು ಪ್ರಾರಂಭಿಸಿತ್ತು. ಇದು ಅಡ್ಮಿನ್​ಗಳು ಬಳಕೆದಾರರನ್ನು ಸೇರಿಸಿ ಹಲವು ಗ್ರೂಪ್​ಗಳನ್ನು ರಚಿಸಬಹುದು.

ಇದನ್ನೂ ಓದಿ: ಚಿತ್ರರಂಗಕ್ಕೆ ವಾಟ್ಸ್​​​ಆ್ಯಪ್ ಎಂಟ್ರಿ: ಸೆ.21 ರಂದು ಶಾರ್ಟ್​ಫಿಲ್ಮ್​ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.