ETV Bharat / science-and-technology

Nothing CMFನ ಆಕರ್ಷಕ ಸ್ಮಾರ್ಟ್​ವಾಚ್, ಇಯರ್ ಬಡ್ಸ್​ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?

author img

By ETV Bharat Karnataka Team

Published : Sep 26, 2023, 6:13 PM IST

CMF by Nothing unveils Watch Pro, Buds Pro in India
CMF by Nothing unveils Watch Pro, Buds Pro in India

ನಥಿಂಗ್​ ಕಂಪನಿಯ ಸಬ್ ಬ್ರಾಂಡ್ ಆಗಿರುವ ಸಿಎಂಎಫ್​ ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ವಾಚ್ ಮತ್ತು ಇಯರ್​ ಬಡ್​ಗಳನ್ನು ಬಿಡುಗಡೆ ಮಾಡಿದೆ.

ನವದೆಹಲಿ : ಲಂಡನ್ ಮೂಲದ ಗ್ರಾಹಕ ತಂತ್ರಜ್ಞಾನ ಬ್ರಾಂಡ್ 'ನಥಿಂಗ್' ನ ಹೊಸ ಉಪ ಬ್ರಾಂಡ್ ಆಗಿರುವ ಸಿಎಂಎಫ್ ಮಂಗಳವಾರ ಭಾರತದಲ್ಲಿ ನೂತನ ವಾಚ್ ಪ್ರೊ ಮತ್ತು ಬಡ್ಸ್ ಪ್ರೊ ಅನ್ನು ಬಿಡುಗಡೆ ಮಾಡಿದೆ. ಮೆಟಾಲಿಕ್ ಗ್ರೇ ಮತ್ತು ಡಾರ್ಕ್ ಗ್ರೇ ಬಣ್ಣಗಳಲ್ಲಿ ಲಭ್ಯವಿರುವ ವಾಚ್ ಪ್ರೊ ಬೆಲೆ ಕ್ರಮವಾಗಿ 4,999 ಮತ್ತು 4,499 ರೂ. ಆಗಿದ್ದು, ಬಡ್ಸ್ ಪ್ರೊ ಬೆಲೆ 3,499 ರೂ. ಗಳಾಗಿದೆ. ಬಡ್ಸ್​ ಪ್ರೊ ಡಾರ್ಕ್ ಗ್ರೇ, ಲೈಟ್ ಗ್ರೇ ಮತ್ತು ಕಿತ್ತಳೆ ಬಣ್ಣಗಳಲ್ಲಿ ಲಭ್ಯವಿದೆ. ಈ ಆಕರ್ಷಕ ಸಾಧನಗಳನ್ನು ಸೆಪ್ಟೆಂಬರ್ 30 ರಿಂದ ಆನ್​ಲೈನ್ ಮೂಲಕ ಮತ್ತು ಆಫ್​ಲೈನ್ ಮಳಿಗೆಗಳಲ್ಲಿ ಖರೀದಿಸಬಹುದು.

"ಬಡ್ಸ್ ಪ್ರೊ, ವಾಚ್ ಪ್ರೊ ಮತ್ತು ಪವರ್ 65 ಡಬ್ಲ್ಯೂ ಜಿಎಎನ್ ಸೇರಿದಂತೆ ನಮ್ಮ ಆರಂಭಿಕ ಉತ್ಪನ್ನಗಳ ಮೂಲಕ ನಾವು ಉನ್ನತ ವಿನ್ಯಾಸವನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತಿದ್ದೇವೆ" ಎಂದು ನಥಿಂಗ್​ನ ಸಹ-ಸಂಸ್ಥಾಪಕ ಅಕಿಸ್ ಇವಾಂಜೆಲಿಡಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಿಎಂಎಫ್ ವಾಚ್ ಪ್ರೊ 1.96 ಇಂಚಿನ ದೊಡ್ಡ ಅಮೋಲೆಡ್ ಡಿಸ್​​ಪ್ಲೇ, ಕಣ್ಸೆಳೆಯುವ ಬಣ್ಣಗಳು, ತಡೆರಹಿತ ನ್ಯಾವಿಗೇಷನ್ ಮತ್ತು 58 ಎಫ್​ಪಿಎಸ್​ ರಿಫ್ರೆಶ್ ರೇಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸಮಗ್ರ ಆರೋಗ್ಯ ಟ್ರ್ಯಾಕಿಂಗ್ ಫೀಚರ್ ಅನ್ನು ಸಹ ಒಳಗೊಂಡಿದೆ. 110 ಸ್ಪೋರ್ಟ್ ಮೋಡ್​ಗಳನ್ನು ಇದು ಸಪೋರ್ಟ್ ಮಾಡುತ್ತದೆ. ನಿಖರವಾದ ಲೊಕೇಶನ್ ಡೇಟಾ ಒದಗಿಸಲು ಅಂತರ್ನಿರ್ಮಿತ ಜಿಪಿಎಸ್ ಅನ್ನು ಒಳಗೊಂಡಿದೆ. ಇದರ ಬ್ಯಾಟರಿ 13 ದಿನಗಳವರೆಗೆ ಬಾಳಿಕೆ ಬರುತ್ತದೆ.

ಹೆಚ್ಚುವರಿಯಾಗಿ, ಇದರಲ್ಲಿನ ಎಐ-ಚಾಲಿತ ಕಾಲಿಂಗ್ ವೈಶಿಷ್ಟ್ಯವು ಪ್ರಯಾಣಿಸುವಾಗಲೂ ಸ್ಪಷ್ಟ ಮತ್ತು ತಡೆರಹಿತ ಸಂಪರ್ಕವನ್ನು ಖಚಿತಪಡಿಸುತ್ತದೆ. ನೀರಿನ ಪ್ರತಿರೋಧಕ್ಕಾಗಿ ಐಪಿ 68 ರೇಟಿಂಗ್ ಹೊಂದಿರುವ ಇದು ಮಳೆ ಮತ್ತು ತೇವದ ಪರಿಸ್ಥಿತಿಗಳನ್ನು ಸುಲಭವಾಗಿ ತಡೆದುಕೊಳ್ಳಬಲ್ಲದು. ಇದಲ್ಲದೆ, ಸಿಎಂಎಫ್ ಬಡ್ಸ್ ಪ್ರೊ 45 ಡಿಬಿ ಹೈಬ್ರಿಡ್ ಆ್ಯಕ್ಟಿವ್ ವಾಯ್ಸ್​ ಕ್ಯಾನ್ಸಲೇಶನ್, ಸ್ಪಷ್ಟ ಕರೆಗಳಿಗಾಗಿ ಸ್ಪಷ್ಟ ಧ್ವನಿ ತಂತ್ರಜ್ಞಾನ ಮತ್ತು ಶಕ್ತಿಯುತ ಡೈನಾಮಿಕ್ ಬಾಸ್ ಬೂಸ್ಟ್ ಡ್ರೈವರ್​ನೊಂದಿಗೆ ಅತ್ಯುತ್ತಮ ಧ್ವನಿ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ಪ್ರತಿ ಇಯರ್ ಬಡ್ ನಲ್ಲಿ 55 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇರುವುದರಿಂದ ಬಳಕೆದಾರರು ಒಂದೇ ಚಾರ್ಜ್​ನಲ್ಲಿ 11 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ಆನಂದಿಸಬಹುದು (ಎಎನ್ ಸಿ ಆಫ್ ನೊಂದಿಗೆ) ಅಥವಾ ಚಾರ್ಜಿಂಗ್ ಕೇಸ್​​ನೊಂದಿಗೆ ಆಲಿಸುವ ಸಮಯವನ್ನು 39 ಗಂಟೆಗಳವರೆಗೆ ವಿಸ್ತರಿಸಬಹುದು. ಸ್ಮಾರ್ಟ್ ವಾಚ್ ಮತ್ತು ಇಯರ್ ಬಡ್ ಗಳ ಜೊತೆಗೆ, ಕಂಪನಿಯು 65-ವ್ಯಾಟ್ ಮಲ್ಟಿಪೋರ್ಟ್ ಚಾರ್ಜರ್ 'ಸಿಎಂಎಫ್ ಪವರ್ 65 ಡಬ್ಲ್ಯೂ ಜಿಎಎನ್' ಅನ್ನು ಕೂಡ ಬಿಡುಗಡೆ ಮಾಡಿದೆ. ಡಾರ್ಕ್ ಗ್ರೇ ಮತ್ತು ಆರೆಂಜ್ ಬಣ್ಣಗಳಲ್ಲಿ ಲಭ್ಯವಿರುವ ಇದರ ಬೆಲೆ 2,999 ರೂ. ಆಗಿದೆ.

ಇದನ್ನೂ ಓದಿ : ಹೊಸ ಸಮುದ್ರ ಕೇಬಲ್ ಜಾಲ ಘೋಷಿಸಿದ ಗೂಗಲ್; 2026ಕ್ಕೆ ಸಿದ್ಧವಾಗಲಿದೆ ಖಂಡಾಂತರ ನೆಟ್​ವರ್ಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.