ETV Bharat / science-and-technology

2023ರಲ್ಲಿ ಮೊಬೈಲ್​ ಆ್ಯಪ್​ಗಳಲ್ಲಿ ಜನ ಖರ್ಚು ಮಾಡಿದ್ದು 171 ಬಿಲಿಯನ್ ಡಾಲರ್!

author img

By ETV Bharat Karnataka Team

Published : Jan 10, 2024, 6:24 PM IST

2023ರಲ್ಲಿ ಮೊಬೈಲ್ ಆ್ಯಪ್​ಗಳಲ್ಲಿ ಗ್ರಾಹಕರು 171 ಬಿಲಿಯನ್ ಡಾಲರ್ ಖರ್ಚು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

Consumer spending on mobile apps hits a new high of $171 bn in 2023
Consumer spending on mobile apps hits a new high of $171 bn in 2023

ನವದೆಹಲಿ: ಮೊಬೈಲ್ ಅಪ್ಲಿಕೇಶನ್​ಗಳಲ್ಲಿ ಬಳಕೆದಾರರು ಮಾಡುವ ಖರ್ಚು 2023 ರಲ್ಲಿ ಹೊಸ ಗರಿಷ್ಠ 171 ಬಿಲಿಯನ್ ಡಾಲರ್​ಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 3 ರಷ್ಟು ಬೆಳವಣಿಗೆಯಾಗಿದೆ. 2022 ರಲ್ಲಿ ಈ ವೆಚ್ಚ ಶೇಕಡಾ 2 ರಷ್ಟು ಕುಸಿತವಾಗಿತ್ತು. ಮೊಬೈಲ್ ಅಪ್ಲಿಕೇಶನ್ ಆರ್ಥಿಕತೆಯು ಈಗ ಅರ್ಧ ಟ್ರಿಲಿಯನ್ ಡಾಲರ್ ಮಾರುಕಟ್ಟೆಯಾಗಿದೆ. 2023 ರಲ್ಲಿ ಆ್ಯಪ್ ಸ್ಟೋರ್ ಮತ್ತು ಮೊಬೈಲ್ ಜಾಹೀರಾತು ವೆಚ್ಚಕ್ಕಾಗಿ ಪ್ರತಿದಿನ ಸುಮಾರು 1.5 ಬಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ.

ಇದರಲ್ಲಿ 362 ಬಿಲಿಯನ್ ಡಾಲರ್ ಮೊಬೈಲ್ ಜಾಹೀರಾತು ವೆಚ್ಚ ಕೂಡ ಸೇರಿದೆ. ಇದು ಈ ವರ್ಷ ಶೇಕಡಾ 8 ರಷ್ಟು ಹೆಚ್ಚಳವಾಗಿದೆ ಎಂದು ಡೇಟಾ ಡಾಟ್​ ಎಐನ 'ಸ್ಟೇಟ್ ಆಫ್ ಮೊಬೈಲ್ 2024' ವರದಿ ತಿಳಿಸಿದೆ. 2023 ರಲ್ಲಿ ಆ್ಯಪ್​ಗಳ ಉತ್ತಮ ಕಾರ್ಯನಿರ್ವಹಣೆಗೆ ಆದಾಯವೊಂದೇ ಮಾನದಂಡವಲ್ಲ. ಡೌನ್ಲೋಡ್​ಗಳು ಕೂಡ ಅಗಾಧ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಆ್ಯಪ್​ಗಳಲ್ಲಿ ಕಳೆದ ಸಮಯ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಆ್ಯಪ್​ನಲ್ಲಿ ಕಳೆಯುವ ಸಮಯ 5.1 ಟ್ರಿಲಿಯನ್ (ಶೇಕಡಾ 6 ಕ್ಕಿಂತ ಹೆಚ್ಚು ಬೆಳವಣಿಗೆ) ಗಂಟೆಗಳಿಗೆ ಏರಿದೆ. ಏತನ್ಮಧ್ಯೆ, ಡೌನ್​ಲೋಡ್​ಗಳು 257 ಬಿಲಿಯನ್ (ಸುಮಾರು 1 ಪ್ರತಿಶತದಷ್ಟು ಬೆಳವಣಿಗೆ) ನಲ್ಲಿ ಸ್ಥಿರವಾಗಿ ಉಳಿದಿವೆ. "2022 ರಲ್ಲಿನ ಕುಸಿತವನ್ನು ಗಮನಿಸಿದರೆ ಈ ವರ್ಷ ಆ್ಯಪ್ ಸ್ಟೋರ್ ವೆಚ್ಚದ ಹೆಚ್ಚಳವು ವಿಶೇಷವಾಗಿದೆ. ಬಹುತೇಕ ಈ ವೆಚ್ಚವು ಮೊಬೈಲ್ ಗೇಮಿಂಗ್ ವಲಯದಿಂದ ಬಂದಿದೆ." ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

"ಈ ಎಐ ಬೆಳವಣಿಗೆಯು ವಾಸ್ತವಿಕವಾಗಿ ಎಲ್ಲ ಮೊಬೈಲ್ ಕ್ಷೇತ್ರಗಳಲ್ಲಿ ಎಂಬೆಡೆಡ್ ವೈಶಿಷ್ಟ್ಯಗಳನ್ನು ಉತ್ತೇಜಿಸಿದೆ ಮತ್ತು ಡಿಜಿಟಲ್ ನಾವೀನ್ಯತೆಯ ಹೊಸ ಅಲೆಗೆ ದಾರಿ ಮಾಡಿಕೊಟ್ಟಿದೆ. ಪ್ರಮುಖ ಜನರೇಟಿವ್ ಎಐ ಅಪ್ಲಿಕೇಶನ್​ಗಳಲ್ಲಿ ಚಾಟ್​ಜಿಪಿಟಿ, ಆಸ್ಕ್ ಎಐ ಮತ್ತು ಕ್ಯಾರೆಕ್ಟರ್ ಎಐ ಸೇರಿವೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜನರೇಟಿವ್ ಎಐ 2023 ರಲ್ಲಿ ಅತ್ಯಧಿಕ ಬೆಳವಣಿಗೆಯನ್ನು ಕಂಡಿದ್ದು, ಇದು 7 ಪಟ್ಟು ವಿಸ್ತರಿಸಿದೆ. ಇದು ಎಐ ಚಾಟ್​ಬಾಟ್​ಗಳು ಮತ್ತು ಆರ್ಟ್ ಜನರೇಟರ್​ಗಳಂಥ ಹೊಸ ಕ್ಷೇತ್ರಗಳ ಹೊರಹೊಮ್ಮುವಿಕೆಗೆ ಕಾರಣವಾಗಿದೆ. ಜನರೇಟಿವ್ ಎಐ ಅಪ್ಲಿಕೇಶನ್​ಗಳಲ್ಲಿ 2023 ರ ಅಂತ್ಯದ ವೇಳೆಗೆ ಮಾಸಿಕ ಗ್ರಾಹಕರ ವೆಚ್ಚ $ 10 ಮಿಲಿಯನ್ ಮೀರಿದೆ.

ಮೊಬೈಲ್ ಜಾಹೀರಾತುಗಳಿಗಾಗಿ ಮಾಡಲಾಗುವ ಖರ್ಚು 362 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಈ ವರ್ಷ ಸಾಮಾಜಿಕ ಮತ್ತು ಮನರಂಜನಾ ಅಪ್ಲಿಕೇಶನ್​ಗಳು ಎರಡಂಕಿಯ ಬೆಳವಣಿಗೆ ದಾಖಲಿಸಿವೆ. ಈ ಆ್ಯಪ್​ಗಳಲ್ಲಿ ಜನ 3 ಟ್ರಿಲಿಯನ್ ಗಂಟೆಗಳನ್ನು ವ್ಯಯಿಸಿದ್ದಾರೆ ಮತ್ತು ಈ ಆ್ಯಪ್​ಗಳಲ್ಲಿ ಜನರು ಮಾಡುವ ಖರ್ಚು ಶೇ 10ರಷ್ಟು ಏರಿಕೆಯಾಗಿ 29 ಬಿಲಿಯನ್ ಡಾಲರ್​ಗೆ ತಲುಪಿದೆ.

ಇದನ್ನೂ ಓದಿ : ಗುಜರಾತ್​ನಲ್ಲಿ ಸೆಮಿಕಂಡಕ್ಟರ್ ಚಿಪ್ ಘಟಕ ಆರಂಭಿಸಲಿದೆ ಟಾಟಾ ಗ್ರೂಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.