ETV Bharat / science-and-technology

ಆಸುಸ್ ಹೊಸ ಪಿಸಿ, ಲ್ಯಾಪ್​ಟಾಪ್ ಬಿಡುಗಡೆ; 37,990 ರೂ. ಆರಂಭಿಕ ಬೆಲೆಗಳಲ್ಲಿ ಲಭ್ಯ

author img

By ETV Bharat Karnataka Team

Published : Sep 12, 2023, 4:54 PM IST

ಆಸುಸ್​ ಭಾರತದಲ್ಲಿ ತನ್ನ ಹೊಸ ಶ್ರೇಣಿಯ ಲ್ಯಾಪ್​ಟಾಪ್ ಮತ್ತು ಪಿಸಿಗಳನ್ನು ಬಿಡುಗಡೆ ಮಾಡಿದೆ.

ASUS launches new lineup of PCs starting Rs 37,990 in India
ASUS launches new lineup of PCs starting Rs 37,990 in India

ನವದೆಹಲಿ : ತೈವಾನ್ ಮೂಲದ ತಂತ್ರಜ್ಞಾನ ಕಂಪನಿ ಆಸುಸ್ ಭಾರತದ ಮಾರುಕಟ್ಟೆಗೆ ತನ್ನ ಹೊಸ ಪಿಸಿ ಮತ್ತು ಲ್ಯಾಪ್​ಟಾಪ್​ಗಳನ್ನು ಬಿಡುಗಡೆ ಮಾಡಿದೆ. 37,990 ರೂ.ಗಳ ಆರಂಭಿಕ ಬೆಲೆಗಳಲ್ಲಿ ಇವು ಲಭ್ಯವಿವೆ. ಹೊಸ ಶ್ರೇಣಿಯ ಡೆಸ್ಕ್ ಟಾಪ್ ಗಳಲ್ಲಿ ASUS S500SE, ASUS S501ME ಮತ್ತು ಗೇಮಿಂಗ್-ಕೇಂದ್ರಿತ ROG DT G22 ಮತ್ತು AIO M3402 ಗಳು ಸೇರಿವೆ.

ಹೊಸ ROG DT 22 ಇದು 1,99,990 ರೂ. ಆರಂಭಿಕ ಬೆಲೆಯಲ್ಲಿ ಮತ್ತು ಗ್ರಾಹಕ ಡೆಸ್ಕ್ ಟಾಪ್ ಗಳಾದ ASUS S500SE & S501ME ಗಳು ಕ್ರಮವಾಗಿ 41,990, 37,990 ರೂ. ಮತ್ತು M3402 49,990 ರೂ.ಗಳ ಆರಂಭಿಕ ಬೆಲೆಗಳಲ್ಲಿ ಲಭ್ಯವಿವೆ. ಹೊಸ ಶ್ರೇಣಿಯ ಪಿಸಿ ಮತ್ತು ಲ್ಯಾಪ್​ಟಾಪ್​ಗಳನ್ನು ಈಗ ಕಂಪನಿಯ ಅಧಿಕೃತ ವೆಬ್​ಸೈಟ್​ ಅಥವಾ ಆನ್​ಲೈನ್ ಮತ್ತು ಆಫ್​ಲೈನ್ ಮಳಿಗೆಗಳಿಂದ ಖರೀದಿಸಬಹುದು.

"ಎಐಒ ಮತ್ತು ಡೆಸ್ಕ್​ಟಾಪ್​ ಶ್ರೇಣಿಯನ್ನು ವಿಸ್ತರಿಸುವ ನಮ್ಮ ಯೋಜನೆಯು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮತ್ತು ಬಳಕೆದಾರರಿಗೆ ಅತ್ಯುತ್ತಮ ಅನುಭವಗಳನ್ನು ತಲುಪಿಸುವ ಆಸುಸ್​ನ ಬದ್ಧತೆಗೆ ಉದಾಹರಣೆಯಾಗಿದೆ. ಬಳಕೆದಾರರಿಗೆ ಶಕ್ತಿಯುತ ಮತ್ತು ತಡೆರಹಿತ ಕಂಪ್ಯೂಟಿಂಗ್ ಪರಿಹಾರಗಳನ್ನು ಒದಗಿಸುವ ಮೂಲಕ ಈ ಹಿಂದಿಗಿಂತ ಉತ್ತಮವಾದುದನ್ನು ತಲುಪಿಸುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದು ಆಸುಸ್ ಇಂಡಿಯಾದ ಪಿಸಿ ಮತ್ತು ಗೇಮಿಂಗ್ ವ್ಯವಹಾರದ ಉಪಾಧ್ಯಕ್ಷ ಅರ್ನಾಲ್ಡ್ ಸು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಂಪನಿಯ ಪ್ರಕಾರ, ROG DT G22 ಇದೊಂದು ಗೇಮಿಂಗ್ ಮತ್ತು ಕಂಟೆಂಟ್​ ಕ್ರಿಯೇಶನ್​ಗಾಗಿ ಬಳಸಬಹುದಾದ ಶಕ್ತಿಯುತ ಕಂಪ್ಯೂಟರ್​ ಆಗಿದ್ದು, 30M Cache ಯೊಂದಿಗೆ Intel Core I 7-13700 ಎಫ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಕಾಂಪ್ಯಾಕ್ಟ್ ಸಾಧನವಾಗಿದ್ದು, ಸಣ್ಣ ಡೆಸ್ಕ್ ಗಳ ಮೇಲೆ ಇಟ್ಟು ಕೆಲಸ ಮಾಡಬಹುದು.

ಇದು 16 ಜಿಬಿ ರ್ಯಾಮ್ ಹೊಂದಿದ್ದು, GeForce RTX 4070 4070 ಗ್ರಾಫಿಕ್ ಕಾರ್ಡ್​ ಇದರಲ್ಲಿದೆ. ಇದನ್ನು 32 ಜಿಬಿ ವರೆಗೆ ವಿಸ್ತರಿಸಬಹುದು. ಅಲ್ಲದೇ ಆಸುಸ್ S500SE ಮತ್ತು S501ME ಇವು 13 ನೇ ಜೆನ್ ಸಿಪಿಯು ಹೊಂದಿದ್ದು, ಹಲವಾರು ಕೆಲಸಗಳನ್ನು ಏಕಕಾಲದಲ್ಲಿ ನಿಭಾಯಿಸಲು ಶಕ್ತವಾಗಿದೆ. ಇದು ಲ್ಯಾಗ್-ಫ್ರೀ ಮಲ್ಟಿಟಾಸ್ಕಿಂಗ್​ಗಾಗಿ 64 ಜಿಬಿ ರ‍್ಯಾಮ್ ಅನ್ನು ಹೊಂದಿದೆ.

ತೈವಾನ್​ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆಸುಸ್ ಕಂಪ್ಯೂಟರ್ ಹಾರ್ಡ್​ವೇರ್ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿದ್ದು, ಇದನ್ನು 1989 ರಲ್ಲಿ ಟಿ ಎಚ್ ತುಂಗ್, ಟೆಡ್ ಹ್ಸು, ವೇಯ್ನ್ ಹ್ಸೀಹ್ ಮತ್ತು ಎಂ ಟಿ ಲಿಯಾವೊ ಸ್ಥಾಪಿಸಿದರು. ಈ ಮೂವರೂ ಇದಕ್ಕೂ ಮೊದಲು ಏಸರ್​ನಲ್ಲಿ ಎಂಜಿನಿಯರುಗಳಾಗಿದ್ದರು.

ಆರಂಭದಲ್ಲಿ ಕಂಪ್ಯೂಟರ್ ಮದರ್​ಬೋರ್ಡ್​ಗಳನ್ನು ತಯಾರಿಸುತ್ತಿದ್ದ ಕಂಪನಿಯು, ಈಗ ಡೆಸ್ಕ್​ಟಾಪ್ ಕಂಪ್ಯೂಟರ್​ಗಳು, ನೋಟ್​ ಬುಕ್​ಗಳು, ನೆಟ್​ವರ್ಕಿಂಗ್ ಉಪಕರಣಗಳು, ಮಾನಿಟರ್​ಗಳು, ಗ್ರಾಫಿಕ್ ಕಾರ್ಡ್​ಗಳು, ಆಪ್ಟಿಕಲ್ ಶೇಖರಣಾ ಸಾಧನಗಳು, ವೈ-ಫೈ ರೂಟರ್​ಗಳು, ಸರ್ವರ್​ಗಳು ಮತ್ತು ಟ್ಯಾಬ್ಲೆಟ್​ಗಳನ್ನು ಉತ್ಪಾದಿಸುತ್ತದೆ.

ಇದನ್ನೂ ಓದಿ : X​ನಲ್ಲಿ ಬರೆಯುವುದು 'Tweet​' ಅಲ್ಲ, ಅದು 'Post'; ನಿಯಮ ಬದಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.